ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೦
ಅಕಬರ ಬೀರಬಲ ಚಾತುರವಾದ ವಿನೋದ ಕಥೆಗಳು.

ಯೋಗ್ಯನಾದವನು ಬೀರಬಲನು, ಪಾಮರನಾದ ನನ್ನಿಂದ ಈ ಅಧಿಕಾರವು ಸುಯಂತ್ರವಾಗಿ ಸಾಗಲಾರದು"
ಅದಕ್ಕೆ ಬಾದಶಹನು ಹೇಳುತ್ತಾನೆ; - ನಾನು ಬೀರಬಲನನ್ನು ಅಧಿ ಕಾರದಿಂದ ದೂರಮಾಡಿದೆನು ಅವನು ಎಲ್ಲಿರುವನೆಂಬ ಸಂಗತಿಯು ಇದುವ ರೆಗೆ ತಿಳಿಯದೆ ಹೋಯಿತು ಈ ಕಾರಣದಿಂದ ಹೊಸ ಮನುಷ್ಯನನ್ನು ಅವ ಕ್ಯವಾಗಿ ನಿಯಮಿಸಿಕೊಳ್ಳಬೇಕಾಯಿತು, ಇನ್ನು ಮೇಲೆ ಅವನು ಇರುವಸ್ಥ ಳವು ವಿದಿತವಾದರೆ ಅವನನ್ನು ಅವಶ್ಯವಾಗಿ ಕರೆಯಿಸಿಕೊಳ್ಳುವೆನು ಅಲ್ಲಿಯೆ ತನಗೆ ನೀನು ಕೆಲಸವನ್ನು ಸಾಗಿಸು ?
ಅದಕ್ಕೆ ನೂತನಮಂತ್ರಿಯು ಅನ್ನುತ್ತಾನೆ . "ದೊರೆಯೇ ತಾವು ಮನಸ್ಸುಗೊಟ್ಟು ಅವನನ್ನು ಶೋಧಮಾಡಿಸಿದ್ದರೆ ನಿಶ್ಚಯವಾಗಿ ಸಿಕ್ಕೇಸಿ ಗುತ್ತಿದ್ದನು.
ಬಾದಶಹನು -ಇಲ್ಲ ಇಲ್ಲ; ನಾನು ಬಹುವಿಧದಿಂದ ಶೋಧಮಾಡಿಸಿದೆನು, ಇನ್ನು ಮಾಡತಕ್ಕ ಪ್ರಯತ್ನವು ಒಂದೇ ಉಳಿದಿರುವದು. ಅದನ್ನಷ್ಟು ಮಾಡಿಬಿಟ್ಟರೆ ಅವನು ಸಿಗುವದೆಂದು ನಾನು ನಂಬಿದ್ದೇನೆ.
ನೂತನ ಮಂತ್ರಿ-ಆದರೆ ಜಹಾವನಾ ? ಅವನು ಇನ್ನು ಕೆಲವು ದಿವಸಗಳ ಮೇಲೆ ಬಂದು ಬೆಟ್ಟಿಯಾದರೆ ಅವನಿಗೆ ಮೊದಲಿನ ಕೆಲಸವನ್ನು ಕೊ ಡುವಿರಾ !
ಬಾದಶಹ ಕೊಡುವೆನು, ಅವನನ್ನು ಆದಷ್ಟು ಸಾಹಸಪಟ್ಟು ಶೋಧಮಾ ಡಿ ಕರಿಸಿಕೊಳ್ಳಬೇಕೆಂಬ ಆತುರತೆಯುಂಟು.
ನೂತನ ಮಂತ್ರಿ-ಅವನು ವಾಸಮಾಡಿಕೊಂಡಿರುವ ಸ್ಥಳವು ನನಗೆ ವಿದಿತ ವದೆ ?
ಬಾದಶಹ ಆ ಸ್ಥಳವನ್ನು ನೀನು ನನಗೆ ತಿಳುಹಿಸಿದರೆ ನಾನು ನಿನ್ನವುಪ ಕಾರವನ್ನು ಯಾವ ಜನ್ಮ ಪರಿಯಂತರ ಮರೆಯಲಾರೆನು. ಈಪ್ರಕಾರ ಬಾದಶಹನಿಗಿರುವ ಆತುರತೆಯನ್ನು ಕಂಡು, ತಾನು ಧರಿಸಿ ರುವ ಕೃತ್ರಿಮವೇಷವನ್ನು ತೆಗೆದು ಚೆಲ್ಲಿ ನಿಂತುಕೊಂಡನು. ಬಾದಶಹನಿಗೆ ಆತಿಸಂತೋಷವಾಗಿ ಅವನನ್ನು ಆಲಿಂಗನಮಾಡಿಕೊಂಡನು, ಸಭಿಕರೆಲ್ಲರು ಆನಂದದಿಂದ ಚಪ್ಪಾಳೆಗಳನ್ನು ಹೊಡೆಯಹತ್ತಿದರು,
ಆಮೇಲೆ ಬಾದಶಹನು ನೀನು ಇಷ್ಟು ದಿವಸಗಳವರೆಗೆ ಎಲ್ಲಿ ಇದ್ದೆ! ಎಂದು ಪ್ರಶ್ನೆ ಮಾಡಿದನು. ಆಗ ಬೀರಬಲನು ಹೇಳುತ್ತಾನೆ; ನಾನು ತಮ ಸನ್ನಿಧಿಯಿಂದ ಹೊರಟುಬಂದು ಒಂದು ಮಾಸವರಿಯಂತರ ಗುಪ್ತವಾ