ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರಸ್ತಾವನೆ

ಈ ಅತಿಪುಣ್ಯ ಭೂಮಿಯಾದ ಭಾರತ ವರ್ಷದಲ್ಲಿ ಮೊಗಲ ಬಾದಾಶಹನಾದ ನಾದ ಆಕಬರನ ಮತ್ತು ಅವನ ಕೃಪಾ ಪಾತ್ರನಾದ ಬೀರಬಲನ ಹೆಸರು ಗಳನ್ನು ಕೇಳಿದ ಒಬ್ಬ ಮನುಷ್ಯನಾದರೂ ಸಹ ದೊರಯಲಿಕ್ಕಿಲ್ಲ ಬಾದಶ ಹನ ಸಮ್ಮುಖದಲ್ಲಿ ನೀತಿ ರಸಯುಕ್ತವಾದ ಭಾಷಣಗಳಿಂದಲೂ, ಹಾಸ್ಯ ರಸ ಪ್ರಧಾನವಾದ ಕಥೆಗಳಿಳದಲೂ, ಜನರ ಮನಸ್ಸನ್ನು ಹರಣ ಮಾಡಿ ಕೊಂಡಂಥ, ಈಗ ಸಹಾ ಬೀರಬಲನ ಕಥೆಗಳನ್ನು ಕೇಳಿದ ಕೂಡಲೆ ಅವ ನಲ್ಲಿದ್ದ ಪ್ರಸಂಗಾವಧಾನತೆಯು ಎಷ್ಷು ತೀವ್ರವಾಗಿತ್ತೆಂಬದನ್ನು ಮನಸ್ಸಿ ನಲ್ಲಿ ಕಲ್ಲನೆಯನ್ನು ಸಹಾ ಮಾಡಲು ಸಾಧ್ಯವಿಲ್ಲ; ಇಂಥ ಅಕಬರ ಬೀರಬ ಲ್ಲರ ವಿಷಯಲ್ಲಿ ಇದ್ದಂಥ ಚಮತ್ಕಾರ ಕಥಗಳುಳ್ಳ ಪುಸ್ತಕವು ನಮ್ಮ ಮಾ ತೃ ಭಾಷೆಯಾದ ಕನ್ನಡದಲ್ಲಿ ಇಲ್ಲದ್ದನ್ನು ಕಂಡು, ನಮ್ಮಮ. ರಾ|| ರಾ|| ಕೇ. ಕೃಷ್ಣಸ್ವಾಮಿ ಶೆಟ್ಟಿ, ಮತ್ತು ಕನ್ನಯ್ಯ ಶೆಟ್ಟ, ಕರ್ನಾಟಕ ಏಕೆಂಟ್ ಬಳ್ಳಾರಿ. ಇವರು ನನಗೆ ಮಾತೃ ಭಾಷೆಯಲ್ಲಿ ಬರೆ ಪ್ರೂತ್ಸಾಹಿಸಿದ್ದರಿಂದ ಹಿಂದುಸ್ತಾನಿ ( ಭಾಷೆ ಯಲ್ಲಿದ್ದ ಎರಡು ಮೂ ರು ಗ್ರಂಥಗಳನ್ನು ಪರಿಶೋಧಿಸಿ, ರಚಿಸಿಯಿರುವೇನು. ತಮ್ಮ ಕೃಪಾಭಿಲಾಷಿಯಾದ ಲೇಖಕ ಭೀ (ಮಾಚಾರ್ಯ. ಸುಬ್ರಮ್ಹಣ‍್ಣಾಚಾರ್ಯ, ಕಿತ್ತೂರ.