-( ೨೦-ತುಪ್ಪದ ವ್ಯಾಪಾರ.) -
ಒಬ್ಬ ವರ್ತಕನು ಒಂದು ದಿವಸ ಬೀರಬಲನ ಹತ್ತಿರ ಬಂದು ಪ್ರಾರ್ಥನೆ ಮಾಡಿ ಕೊಂಡದ್ದೇನಂದರೆ:- ನಾನು ಒಬ್ಬ ವರ್ತಕನಿಗೆ ಐದು ನೂರು
ರೂಪಾಯಿಗಳನ್ನು ಕೈಗಡವಾಗಿ ಕೊಟ್ಟಿದ್ದೆನು ಈಗ ಅವನು ಅವುಗಳನ್ನು
ಕೊಡುವದಕ್ಕೆ ನಿರಾಕರಿಸುತ್ತಾನೆ: ನನ್ನ ಹತ್ತಿರ ಅವನ ಕಡೆಯಿಂದ ಯಾವ
ಪ್ರಕಾರದ ಲೇಖವೂ ಇಲ್ಲ ಮತ್ತು ಸಾಕ್ಷಿಗಳೂ ಇಲ್ಲ ಆದ್ದರಿಂದ ತಾವು ಅವನನ್ನು ಕರೆಯಿಸಿಕೊಂಡು ಯೋಗ್ಯ ವಿಚಾರಮಾಡಿ ನನ್ನ ರೂಪಾಯಿಗಳನ್ನು ಕೊಡಿಸುವಂತೆ ಮಾಡಬೇಕು"
ಈ ಪ್ರಕಾರ ಪ್ರಾರ್ಥಿಸಿಕೊಂಡ ವರ್ತಕನ ಮಾತುಗಳನ್ನು ಕೇಳಿ
ಬೀರಬಲನು ಆ ಎರಡನೇ ವರ್ತಕನನ್ನು ಕರೆಯಿಸಿಕೊಂಡು ಎಲ್ಲಸಂಗತಿಯನ್ನು ವಿಚಾರಿಸಿದನು ಆಗ ಆ ಎರಡನೆ ವರ್ತಕನು ಹೇಳಿದ್ದೇನಂದರೆ ಮಹಾರಾಜ, ಇವನು ನನ್ನ ಮೇಲೆ ವೃಥಾರೋಪವನ್ನು ಹೊರಿಸುತ್ತಾನೆ ನಾವಿಬ್ಬರೂ ಒಂದೇ ಪ್ರಕಾರದ ವ್ಯಾಪಾರವನ್ನು ಮಾಡುತ್ತಿರುವದರಿಂದ ಇವನಿಗೆ
ಸಹನವಾಗಲೊಲ್ಲದು ಪ್ರಭುಗಳು ಯೋಗ್ಯ ವಿಚಾರಣಿಯನ್ನು ಮಾಡಬೇಕು ಅಂದರೆ; ಇವನ ಮೋಸವು ತಾನೇ ವ್ಯಕ್ತವಾಗುವದು ??
ಬೀರಬಲನು ಎದುರಾಳಿಯಾದ ವರ್ತಕನ ಮಾತುಗಳಿಗೆ ಸಮ್ಮತಿಸಿದವನಂತೆ ತೋರಿಸಿ ಅವನನ್ನು ಹಿಂದಿರುಗಿ ಮನೆಗೆ ಕಳುಹಿಸಿಬಿಟ್ಟನು ಆ
ಮೇಲೆ ಮೊದಲನೇ ವರ್ತಕನನ್ನು ಕರೆದು ಹೇಳಿದ್ದೇನಂದರೆ ನೀನು ಅಲ್ಪಕಾಲ ಧೈರ್ಯವಾಗಿರು ಆ ಮೇಲೆ ಸಮಯವನ್ನು ಸಾಧಿಸಿಕೊಂಡು ನನ್ನೆಡೆಗೆ ಬಾ ! ಹಿಂದೆ ನಡೆದ ಸಂಗತಿಯನ್ನೆಲ್ಲ ಮರೆತು ಬಿಟ್ಟವನಂತೆ ತೋರಿಸುತ್ತ ನಿನ್ನ ಎದುರಾಳಿಯೊಡನೆ ಸ್ನೇಹವನ್ನು ಬೆಳೆಯಿಸು ” ಎಂದು ಹೇಳಿ
ಕಳುಹಿಸಿಕೊಟ್ಟನು.
ಮುಂದೆ ಏಳೆಂಟು ದಿವಸಗಳಾದ ಬಳಿಕ ಬೀರಬಲನು ನಾಲ್ಕು ತುಪ್ಪದ ಕೊಡಗಳನ್ನು ತರಿಸಿ ಎರಡುಕೊಡಗಳಲ್ಲಿ ಒಂದೊಂದು ವರಹವನ್ನು
ಹಾಕಿದನು. ಆಮೇಲೆ ವಾದಿ ಪ್ರತಿವಾದಿಯನ್ನೂ ಮತ್ತು ಬೇರೆ ಎರಡು
ಜನ ವರ್ತಕರನ್ನೂ ಕರೆಯಿಸಿ, “ ನನ್ನ ಹತ್ತಿರ ನಾಲ್ಕು ತುಪ್ಪದ ಕೊಡಗಳು ಅವೆ ಇವುಗಳಲ್ಲಿಯ ತುಪ್ಪವು ಸ್ವಲ್ಪ ಕೆಟ್ಟಿದೆ, ನೀವು ಪ್ರತಿಯೊಬ್ಬಬ್ಬರು
ಒಂದೊಂದು ಕೊಡವನ್ನು ತೆಗೆದುಕೊಂಡು ಹೋಗಿ ವ್ಯಾಪಾರಮಾಡಿರಿ ಲಾಭವಾದ ಹಣವನ್ನು ನೀವು ತೆಗೆದುಕೊಂಡು ನನ್ನ ಹಣವನ್ನು ನನಗೆ ಮುಟ್ಟ