ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.


ಳೂ,ಬಾದಶಹನಿಗೆ ಕುರ್ನಿಸಾತವನ್ನು ಮಾಡಿ ತಮ್ಮ ತಮ್ಮ ಸ್ಥಾನಗಳಲ್ಲಿ ಹೋಗಿ ಕುಳಿತು ಕೊಂಡರು. ಬಾದಶಹನನ್ನು ಕಣ್ಣೆತ್ತಿ ನೋಡುವದಕ್ಕೆ ಯಾರಿಂದಲೂ ಎದೆಯಾಗಲಿಲ್ಲ, ಮುಂದೆಸ್ವಲ್ಪ ಹೊತ್ತಿನೊಳಗಾಗಿ ಗಂಗಕ ವಿಯನ್ನು ರಾತ್ರಿಯಲ್ಲಿದ್ದ ವೇಪದಿಂದಲೇ ಕಟ್ಟಿಕೊಂಡು ಕರ್ಮಚಾರಿಗಳು ಸಭೆಯಲ್ಲಿ ತಂದು ನಿಲ್ಲಿಸಿದರು ಬಾದಶಹನು ಗಂಗಕವಿಯನ್ನು ಗುರುತಿಸದೆ ಅನ್ನುತ್ತಾನೆ; ಇದು ಭೂತವೋ ಅಥವಾ ಪ್ರೇತವೋ ಇಲ್ಲವೆ ಪಿಶಾಚಾವೋ ಏನಿರುವದು ? ಇವನು ಯಾರು ? ” ಎಂದು ಪ್ರಶ್ನೆ ಮಾಡಿದನು ಆಗ ಗಂಗ ಕವಿಯು ಅವನತನಾಗಿ ಬಾದಶಹನಿಗೆ ಸಲಾಮು ಮಾಡಿದನು. ಆಗ ಅವನ ತಲೆಯ ಮೇಲಿಗೆ ಆಚ್ಛಾದನವು ಕೆಳಗೆ ಬಿತ್ತು ಆಗ ಬಾದಶಹನು ಅವನ ನ್ನು ಗುರುತಿಸಿ ಅನ್ನುತ್ತಾನೆ- " ನನ್ನ ರಾಣೀವಾಸದಲ್ಲಿ ಬರುವದಕ್ಕೆ, ನಿನಗೆ ಧೈರ್ಯವು ಹ್ಯಾಗೆ ಬಂತು ? ನಿನಗೆ ಮರಣದಂಡನೆಯೇ ಯೋಗ್ಯವಾದದ್ದು ಎಂದು ನುಡಿದನು ಈ ಮಾತಿಗೆ ಗಂಗಕವಿಯು ಪ್ರತ್ಯುತ್ತರವನ್ನು ಕೊಡದೆ ಸುಮ್ಮನೆ ನಿಂತುಕೊಂಡು ಬಿಟ್ಟನು. ವಾಧಿಕರು ತಮ್ಮ ತಮ್ಮ ಆಯುಧಗಳ ನ್ನು ಹಿಡಿದುಕೊಂಡು ಸಿದ್ಧರಾಗಿ ನಿಂತುಕೊಂಡರು ಗಂಗಕವಿಯು ಸಭಾಸ ದರನ್ನೆಲ್ಲ ನೋಡಿದನು ತನ್ನನ್ನು ಬದುಕಿಸಿಕೊಳ್ಳರೆಂದು ಸಂಕೇತದಿಂದಲೇ ಪ್ರಾರ್ಥಿಸಿದನು. ಆದರೆ ಒಬ್ಬನಾದರೂ ತಲೆಯೆತ್ತಿ ಇವನನ್ನು ನೋಡಲಿಲ್ಲ, ಎಲ್ಲರೂ ಬಾದಶಹನ ಕ್ರೋದ ಮುದ್ರೆಯಿಂದ ಸ್ತಂಭೀಭೂತನಾಗಿ ಕುಳಿತು ಕೊಂಡು ಬಿಟ್ಟರು ಇದನ್ನೆಲ್ಲಕಂಡು ಬಾದಶಹನಿಗೂ ಸ್ವಲ್ಪಸ್ವಲ್ಪ ಆಶ್ಚರ್ಯವುಂಟಾಗಹತ್ತಿತು ಆಗ ಅನ್ನುತ್ತಾನೆ. - “ ಗಂಗನೇ ! ಇದು ಏನು ನಡೆಯಿಸಿರುವಿ ! ಇದು ದರಬಾರವು ? ಗೊಂಬೆಯಾಟವಲ್ಲ ? ” ಎಂದು ಬೆದರಿಸಿದ ನು. ಆಗ ಗಂಗನು ಮನಸ್ಸಿನಲ್ಲಿ ಅನ್ನುತ್ತಾನೆ, ನಿನ್ನೆ ನನ್ನನ್ನು ಹ್ಯಾಗಾ ದರೂ ಮಾಡಿ ರಕ್ಷಿಸಿಕೊಳ್ಳುವೆವೆಂದು ಹೇಳಿದ ಈ ಸಭಾಸದರೆಲ್ಲರೂ ಈದಿನ ಸ ನನ್ನ ಕಡೆಗೆ ಕಣ್ಣೆತ್ತಿ ಸಹಾ ನೋಡದೆ, ಸ್ವಸ್ಥರಾಗಿ ಕುಳಿತುಕೊಂಡು ಬಿಟ್ಟಿರುವರಲ್ಲಾ ! ನನಗಂತೂ ಮರಣವು ಸಿದ್ಧವಾಗಿಯೇ ಇರುವದು ಆದರೆ ಈ ಅವಿಶ್ವಾಸಿಗಳ ಕೃತ್ಯವನ್ನು ಬೈಲಿಗೆ ಎಳೆದುಬಿಡೋಣ ಬಾದಶಹನು ಪುನಃ ಪ್ರಶ್ನೆಯನ್ನೂ ಮಾಡಿದ್ದಾನೆ, ಅದದ್ದಾಗಲಿ : ” ಎಂದು ನಿಶ್ಚಯಿಸಿ ಕೊಂಡು ಆ ಸಭಾಸದರನ್ನೆಲ್ಲ ತೋರಿಸಿ, ಅನ್ನುತ್ತಾನೆ, " ನಾನು ಇವರ ಮಾತುಗಳ ಮೇಲೆ ವಿಶ್ವಾಸವನಿಟ್ಟು ಈ ದಂಡನೆಗೆ ಪಾತ್ರವಾಗಬೇಕಾಯಿ ತು” ಎಂದು ನುಡಿದು ತನ್ನ ಸಮಗ್ರ ವೃಂತ್ತಾಂತವನ್ನೆಲ್ಲ ನಿರೂಪಿಸಿದನು ಇವನ ಸಂಗತಿಯನ್ನು ಕೇಳಕೇಳಿದ ಹಾಗೆ ನಗೆಯು ಬರಹತ್ತಿತು ಗಂಗನ