ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೭೧



ಯು, ನಗರದ ಯಾವತ್ತು ಬಾಗಗಳಲ್ಲಿ ಚೆನ್ನಾಗಿ ಶೋಧಮಾಡಿ ನೋಡಿದನು ಎಲ್ಲಿಯೂ ಸಿಗಲಿಲ್ಲ ಕಡೆಗೆ ನಿರಾಸೆಯಿಂದ ಸ್ವಸ್ಥ ಕುಳಿತುಕೊಂಡು ಬಿಟ್ಟನು. ಆ ವಾರಾಂಗನೆಯು ಆ ಬಾಲಕಿಗೆ ಚನ್ನಾಗಿ ನೃತ್ಯಗಾಯನಾದಿಗಳನ್ನು ಕಲಿಸಿ, ಚತುರಳನ್ನಾಗಿ ಮಾಡಿಬಿಟ್ಟಳು. ಅವಳ ನೃತ್ಯಗಾಯನದ ಪ್ರಶಂಸೆಯು ದಿಲ್ಲಿಯಲ್ಲಿ ಎಲ್ಲಕಡೆಗೂ ಪಸರಿಸಿತು. ಒಂದು ದಿವಸ ಒಬ್ಬ ಸರದಾರನ ಗೃಹದಲ್ಲಿ ಆ ಬಾಲಕಿಯ ನೃತ್ಯವು ನಡೆದಿತ್ತು. ಆಕಾಸ್ಮಾತಾಗಿ ಆ ಬಾಲಕಿಯ ತಂದೆಯು ಅಲ್ಲಿಗೆ ಬಂದನು. ಆಗ ಅವನಿಗೆ ತನ್ನ ಪುತ್ರಿಯ ಪರಿಚಯವು ಹತ್ತಿತು. ಆಗ ಅವನು ಅಲ್ಲಿ ನೆರೆದಿರುವ ಜನಸಮೂಹದಲ್ಲಿ ವಿಚಾರ ಮಾಡಹತ್ತಲು ಆ ಬಾಲಕಿಯು ಒಬ್ಬ ವಾರಾಂಗನೆಯ ಗೃಹದಲ್ಲಿರುವಂತೆ ತಿಳಿಯಬಂತು ಆಗ ಅವನು ತನ್ನ ಮನಸ್ಸಿನಲ್ಲಿ ವಿಚಾರಮಾಡಿ ತಿಳಿದುಕೊಂ ಡದ್ದೇನಂದರೆ; - ನಾನು ಈಗ ಇವಳನ್ನು ನನ್ನ ಸಂಗಡ ಬಾ ಎಂದು ಕರೆದರೆ ಎಂದಿಗೂ ಬರಲಾರಳು ಇವಳು ಇಲ್ಲಿ ಒಳ್ಳೆ ಸೌಖ್ಯದಿಂದ ಇದ್ದಾಳೆ ನನ್ನ ಬಳಿಯಲ್ಲಿ ಕಷ್ಪ ಪಡುವದಕ್ಕೆ ಯಾಕೆ ಬಂದಾಳು ? ಇದು ಸರಿಯಾಗಿ ತೋರುವದಿಲ್ಲ, ಬಾದಶಹನ ಸನ್ನಿಧಿಯಲ್ಲಿ ಅರಿಕೆಮಾಡಿಕೊಂಡರೆ ಅವನು ನನ್ನ ಪುತ್ರಿಯನ್ನು ನನ್ನ ಸ್ವಾಧೀನಕ್ಕೆ ಕೊಡಿಸಬಹುದು ಎಂದು ನಿಶ್ಚಯಿಸಿ ಕೊಂಡು ಬೀರಬಲನ ಕಡೆಗೆ ಹೋಗಿ ಯಾವತ್ತು ಸಂಗತಿಯನ್ನು ಅರಿಕೆ ಮಾಡಿಕೊಂಡನು ಬೀರಬಲನು ಆ ಸಂಗತಿಯನ್ನು ಬಾದಶಹನ ಕಿವಿಯ ಮೇಲೆ ಹಾಕಿದನು. ಬಾದಶಹನು ಒಬ್ಬ ಕರ್ಮಚಾರಿಯನ್ನು ಕಳುಹಿಸಿ ಆ ವಾರಾಂಗನೆಯನ್ನೂ ಆ ಬಾಲಕಿಯನ್ನೂ ತನ್ನೆಡೆಗೆ ಬರಮಾಡಿಕೊಂಡನು, ಆಗ ಬೀರಬಲನು ಬಾದಶಹನ ಆಜ್ಞೆಯ ಪ್ರಕಾರ ಆ ವಾರಾಂಗನೆಯನ್ನು ಕುರಿತು, " ಈ ಬಾಲಕಿಯು ಯಾರ ಮಗಳು ? ಎಂದು ಪ್ರಶ್ನೆ ಮಾಡಿದನು. ಆ ವೇಶ್ಯೆಯಾದರೂ ಒಳ್ಳೇಚತುರಳಿದ್ದಳು. ಆಬಾಲಕಿಗೆ ಮನೆಯಿಂದಲೇ ಕಲಿಸಿಕೊಂಡು ಬಂದಿದ್ದಳು. ಆ ವೇಶ್ಯೆಯು ಬೀರಬಲನ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನಂದರೆ;- ಇವಳು ಒಬ್ಬ ಫಕೀರನ ಮಗಳು, ಇವಳ ತಂದೆಯು ಇವಳನ್ನು ತೀರ ಅಜ್ಞಾನದೆಶೆಯಲ್ಲಿದ್ದಾಗಲೇ ನನಗೆ ವಿಕ್ರಯಿಸಿ ಬಿಟ್ಟನು. ಆಗ ಇವಳಿಗೆ ಇನ್ನೂ ಮಾತಾಡಲಿಕ್ಕೆ ಸಹ ಬರುತ್ತಿದಿಲ್ಲ " ಬೀರಬಲನು ಆ ಬಾಲಿಕೆಯನ್ನು ಕುರಿತು;- ನಿನ್ನ ತಾಯಿ ತಂದೆಗಳು ಯಾರು ? ಎಂಬ ಸಂಗತಿಯನ್ನು ಬಲ್ಲಿಯಾ ? ಎಂದು ಕೇಳಿದನು ಅದಕ್ಕೆ ಅವಳು ( ಮಹಾರಾಜ ಇಲ್ಲ ; ನಾನು ನನ್ನ ಮಾತಾಪಿತೃಗಳು ಎಂಥವರಿದ್ದರೆಂಬದೂ ಸಹಗೊತ್ತು ಇಲ್ಲ, ನಾನು ಇವಳನ್ನೇ ತಾಯಿಯೆಂದು ತಿಳಿದುಕೊಂಡಿದ್ದೇನೆ ಇವಳೇನ