ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೭೭


ತಂದೆಯು ಹೇಳುವದಕ್ಕಿಂತ ಮೊದಲೇ ಬಂಗಾರವನ್ನು ಕದ್ದು ಬೂದಿಯಲ್ಲಿ ಮುಚ್ಚಿಟ್ಟು ಬಿಟ್ಟಿದ್ದನು. ಸ್ವಾಮಿ! ಕಸಬುದಾರರು ಒಳ್ಳೆ ಕುಶಲರಾದ ಕಳ್ಳರಿರುತ್ತಾರೆ, ಅವರು ಕಳವು ಮಾಡಿದ್ದು ಯಾರಿಗೂ ಗೊತ್ತು ಆಗುವದಿಲ್ಲ. ಈಕಾರಣದಿಂದ ಶಾಸ್ತ್ರಕಾರರು ಸುವರ್ಣಕಾರರಿಗೆ "ಪಶ್ಯತೋಹರ" ಅ೦ದರೆ ನೋಡನೋಡುವ ಹಾಗೆ ಕಳವು ಮಾಡುವವರು, ಎಂದು ಹೆಸರು ಕೊಟ್ಟಿದ್ದಾರೆ.

-( ೨೭. ಎಲ್ಲಕ್ಕಿಂತ ಅಧಿಕವಾದ ಪ್ರಿಯವಸ್ತು )-


ಒಂದು ದಿವಸ ಬಾದಕಹನು ತನ್ನ ಪ್ರೇಮ ಮಾತ್ರಳಾದ ರಾಣಿಯ ಮೇಲೆ ಸಿಟ್ಟಾಗಿ; "ನೀನು ಈಗಿಂದೀಗ ನನ್ನ ಅಂತಃವುರವನ್ನು ಬಿಟ್ಟು ಹೊರಗೆ ಹೋಗು, ತಡಮಾಡಿದರೆ ನಾನು ಕ್ಷಮಿಸಲಾರೆನು" ಎಂದು ಅಜ್ಞಾಪಿಸಿದನು. ಬಾದಶಹನ ಕ್ರೂರವಾದ ಆಯ್ಕೆಯನ್ನು ಕೇಳಿ ರಾಣಿಯು ಗಾಬರಿಯಾಗಿ, ಆನೇಕ ವಿಧದಿಂದ ಪ್ರಾರ್ಥನೆ ಮಾಡಿಕೊಂಡಳು. ಆದರೂ ಬಾದಶಹನ ಕ್ರೋಧವು ಕಡಿಮೆಯಾಗಲಿಲ್ಲ. ಆದ್ದರಿಂದ ಅವಳು ಬೀರಬಲನನ್ನು ತನ್ನೆಡೆಗೆ ಬರಮಾಡಿಕೊಂಡು ತನ್ನ ವೃತ್ತಾಂತವನ್ನೆಲ್ಲ ತಿಳಿಸಿದಳು. ಅವನು ಅವಳಿಗೆ ಒಂದು ಹಂಚಿಕೆಯನ್ನು ಹೇಳಿಕೊಟ್ಟು ತನ್ನ ಮನೆಗೆ ಬಂದನು. ಆ ಹಂಚಿಕೆಯು ಅವಳ ಮನಸ್ಸಿಗೆ ಬಂತು. ಅವಳು ಆ ಕೂಡಲೆ ಒಬ್ಬ ಪರಿಚಾರಕನನ್ನು ಕರೆದು ಕೆಲವು ಸಾಮಾನುಗಳ ಗಂಟನ್ನು ಕಟ್ಟಿಸಿಟ್ಟು ಬಾದಶಹನನ್ನು ಕರೆಯಿಸಿಕೊಂಡಳು. ಅವನು ಬರುವದರೊಳಗೆ ಒಂದು ಬಂಗಾರದ ವೇತಿಯಲ್ಲಿ ಸ್ವಲ್ಪ ಮದ್ಯವನ್ನು ಬೆರಿಸಿ ಒಂದು ಸ್ವಾದಿಷ್ಟವಾದ ಪೇಯವನ್ನು ಸಿದ್ಧಪಡಿಸಿಕೊಂಡಿದ್ದಳು. ಬಾದಶಹನು ಬಂದಕೂಡಲೆ ಅವನೊಡನೆ ಕೆಲವು ವಿನೋದದ ಮಾತುಗಳನ್ನಾಡಹತ್ತಿದಳು. ಆದರಿಂದಲೂ ಬಾದಶಹನು ಪ್ರಸನ್ನನಾಗದಿರಲು, ಅಂತ್ಯದಲ್ಲಿ "ನಾನು ತಮ್ಮ ಆಜ್ಞೆಯನ್ನು ಕಾಲತ್ರಯಗಳಲ್ಲಿಯೂ ಮೀರಲಾರೆನು" ಎಂದು ರೋದನವಾಡ ತೊಡಗಿದಳು. ಆಗ ಬಾದಶಹನು ಅನ್ನುತ್ತಾನೆ, ಇಂಥ ಹಟಮಾರಿತನದಿಂದ ನನ್ನ ಜ್ಞೆಯು ತಿರುಗಲಾರದು, ಬೇಕಾದರೆ ಈಗೃಹದಲ್ಲಿ ನಿನಗೆ ಅಧಿಕವಾಗಿ ಪ್ರಿಯವಾಗಿರುವ ಯಾವತ್ತು ಒಡವೆಗಳನ್ನು ತೆಗೆದುಕೊಂಡು ಹೋದರೂ ಸಹ ಅಡ್ಡಿಯಿಲ್ಲ, ಎಂದನು. ಆಗ ಅವಳು ಅತಿ ಖಿನ್ನತೆಯಿಂದ "ಖಾವಿಂದ, ನಿಮ್ಮ ಅಪ್ಪಣಿಯೇ ನನಗೆ ಮಾನ್ಯವು, ಆದರೆ ನನ್ನದೊಂದು ವಿಜ್ಞಾಪನೆಯುಂಟು; ಅದೇನಂದರೆ, "ಈ ಪೇಯವನ್ನು ತಾವು ಸ್ವೀಕರಿಸಬೇಕು.