ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೭೯


ನು ತನಗೆ ಹೇಳಿಕೊಟ್ಟನೆಂದು ಹೇಳಿದಳು" ಅದರಿಂದ ಬಾದಶಹನು ಬೀರಬಲನ ಚಾತುರ್ಯಕ್ಕೆ ಮೆಚ್ಚಿ, ಧನ್ಯವಾದವನ್ನು ಕೊಟ್ಟನು.

-( ೨೮. ಮಾವಿನ ಹಣ್ಣಿನ ಕಳವು. )-

——

ಒಂದು ದಿವಸ ಕೇಶವದಾಸನೆಂಬ ವರ್ತಕನು ಓಲಗಕ್ಕೆ ಬಂದು ವಿಜ್ಞಪ್ತಿ ಮಾಡಿಕೊಂಡದ್ದೇನಂದರೆ;- "ಈ ಪಟ್ಟಣದಿಂದ ಅರ್ಧ ಹರದಾರಿಯ ಮೇಲೆ ನನ್ನದೊಂದು ಮಾವಿನ ತೋಪು ಅದೆ. ಅಲ್ಲಿರುವ ವೃಕ್ಷಗಳಿಗೆ ನಾನು ನೀರನ್ನು ಹಾಕಿ, ಬೆಳೆಯಿಸಿದೆನು. ಅವುಗಳನ್ನು ಜೋಪಾನ ಮಾಡಹತ್ತಿ ಏಳು ವರುಷಗಳಾದವು. ಈ ವರುಷ ಆ ವೃಕ್ಷಗಳು ಫಲಭರಿತವಾಗಿರುವದನ್ನು ಕಂಡು ನನ್ನ ನೆರೆಯಲ್ಲಿದ್ದ ಪ್ರೇಮಳದಾಸನಿಗೆ ಹೊಟ್ಟೇಕಿಚ್ಚು ಬಿದ್ದು ಈ ಗಿಡಗಳು ತನ್ನವೆಂದು ಹೇಳಿಕೊಳ್ಳಹತ್ತಿದ್ದಾನೆ; ಆದ್ದರಿಂದ ದಯಾಳುಗಳಾದ ತಾವು ಯೋಗ್ಯ ನಿರ್ಣಯವನ್ನು ಮಾಡಬೇಕು" ಈ ಪ್ರಕಾರ ವಿಜ್ಞಾಪನೆ ಮಾಡಿಕೊಂಡ ಮೇಲೆ ಬೀರಬಲನು, ಅವನಿಗೆ ನಾಳೆಯ ದಿವಸ ಓಲಗಕ್ಕೆ ಬರಬೇಕೆಂದು ಅಪ್ಪಣೆಯಿತ್ತು ಕಳುಹಿಸಿದನು.

ಕೇಶವ ದಾಸನು ಹೊರಟು ಹೋದ ಮೇಲೆ ಬೀರಬಲನು ಪ್ರೇಮಳದಾಸನನ್ನು ಕರೆಯಿಸಿಕೊಂಡು ಕೇಳಿದನು. ಅದಕ್ಕೆ ಪ್ರೇಮಳದಾಸನು ಹೇಳುತ್ತಾನೆ, "ಸ್ವಾಮೀ, ಆ ವೃಕ್ಷಗಳು ನನ್ನವು ನಾನೇ ಅವುಗಳನ್ನು ಹಚ್ಚಿ ಪ್ರತಿದಿನಲ್ಲಿ ನೀರು ಹಾಕಿ ಬೆಳೆಯಿಸಿದೆನು. ಈ ಹೊತ್ತಿಗೆ ಏಳು ವರುಷಗ೪ಾದವು. ಈಗ ಅವುಗಳು ಫಲಭರಿತವಾಗಿವೆ. ಅದನ್ನು ಕಂಡು ಕೇಶವದಾಸನಿಗೆ ಮನಸ್ಸು ವಿಗಲಿತವಾಗಿದೆ. ತಾವು ತಂದೆತಾಯಿಗಳಂತೆ ಇರುವಿರಿ! ಯೋಗ್ಯವಾದ ನಿರ್ಣಯವನ್ನು ಮಾಡಬೇಕು.

ಬೀರಬಲ--ಅವುಗಳನ್ನು ಕಾಯುವವರು ಯಾರಿದ್ದಾರೆ ;

ಪ್ರೇಮಳ--ಒಬ್ಬ ಮನುಷ್ಯನನ್ನು ಕಾಯುವದಕ್ಕೆ ಇಟ್ಟದ್ದಲ್ಲದೆ, ನಾನೂ ಮತ್ತು ಕೇಶವದಾಸನೂ ಸಹ ಒಮ್ಮೊಮ್ಮೆ ಕಾಯಲಿಕ್ಕೆ ಹೋಗುತ್ತಿರುತ್ತೇವೆ.

ಬೀರಬಲನು ಕಾಯುವವನ್ನು ಕರೆಯಿಸಿ,-ನೀನು ಯಾರ ಮಾವಿನಗಿಡಗಳನ್ನು ಕಾಯುತ್ತಿರುವಿ? ಆಗಿಡಗಳ ಒಡೆಯನು ಯಾರು ! ಎಂದು ಪ್ರಶ್ನೆ ಮಾಡಿದನು. ಆಗ ಅವನು. "ನಾನು ಆಗಿಡಗಳನ್ನು ರಕ್ಷಣಮಾಡ ಹತ್ತಿ ಎರಡು ತಿಂಗಳಾದವು. ಆ ಗಿಡಗಳು ಯಾರವು ಎಂಬ ಸಂಗತಿಯನ್ನು ನಾನರಿಯೆನು. ಕೇಶವದಾಸನ, ಪ್ರೇಮಳದಾಸನೂ ಕೂಡಿಯೇ ನನ್ನನ್ನು ಕಾಯಲಿಕ್ಕೆ ಇಟ್ಟಿದ್ದಾರೆ" ಎಂದು ಉತ್ತರಕೊಟ್ಟನು. ಆಗ ಬೀರಬಲನು