ಪುಟ:ಅಜಿತ ಕುಮಾರ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ.

I

ಹಾಸುಗಲ್ಲ ಬುಡದ ನಿಕ್ಷೇಪ.


ಬಹುಕಾಲದ ಹಿಂದೆ ಕಿಂಪುರುಷವೆಂಬ ಖಂಡದಲ್ಲಿ ತಾರಾಂಗಣವೆಂಬ ಒಂದು ದೇಶವಿತ್ತು. ಅಲ್ಲಿ ಒಬ್ಬ ಧರ್ಮಿಷ್ಟನಾದ ದೊರೆ ಇದ್ದನು. ಈಗ ಎಷ್ಟೋ ವರುಷಗಳಾಗಿ ಹೋದುದರಿಂದ ಆತನ ಹೆಸರನ್ನು ಯಾರೂ ಅರಿಯರು ; ಆದರೆ ಆತನ ಪುತ್ರಿಯ ಹೆಸರು ವೇತ್ರವತಿ, ಆಕೆಗೆ ಸೋದರಿಕೆಯಲ್ಲಿಯೆ ಮದುವೆಯಾಗಿತ್ತು. ವಿವಾಹವಾದ ಎರಡು ವರುಷಗಳ ಮೇಲೆ ಒಂದು ಗಂಡು ಮಗು ಹುಟ್ಟಿತು. ಆ ಮಗುವಿಗೆ ಅಜಿತಕುಮಾರನೆಂಬ ಹೆಸರನ್ನು ಇಟ್ಟರು.

ಹುಡುಗನಿಗೆ ಮೂರು ವರುಷವಾಗುವಾಗ ತಂದೆಯಾದ ತಾರಾಪತಿಯು ವೀರರಾದ ಕೆಲ ಸಂಗಾತಿಗಳೊಡನೆ ಕೂಡಿಕೊಂಡು, ದಿಗ್ವಿಜಯಕ್ಕೋಸ್ಕರ ದೂರದೇಶಗಳಿಗೆ ಹೊರಟು ಹೋಗಿ, ಮಹಾಪರಾಕ್ರಮಿಯೆಂದು ಕೀರ್ತಿ ಪಡೆದನು. ಆಗ ಅನೇಕ ರಾಜರು ಆತನಿಗೆ ಹೆಣ್ಣು ಕೊಡುವುದಕ್ಕೆ ನಾನು ಮುಂದೆ ತಾನು ಮುಂದೆ ಎಂದು ಬರುತಿದ್ದರು. ಕೊನೆಗೆ ಆತನು ಯವನ ದೇಶದ ದೊರೆಯ ಮಗಳಾದ ಮಾಧವಿ ಎಂಬವಳ ಚೆಲು