ಪುಟ:ಅಜಿತ ಕುಮಾರ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨

ವಸಂತಕಾಲದ ಬಲಿ.

ಅದಕ್ಕೆ ಅಜಿತನು “ಹೌದು ನಾನಿಲ್ಲಿಗೆ ಮೊನ್ನೆ ತಾನೆ ಬಂದವನು, ನನಗೊಂದೂ ತಿಳಿಯದು. ಈಗ ನೀನು ಬಂದಿರುವ ಹದನವನ್ನು ಹೇಳು, ನೋಡೋಣ” ಎಂದನು.

ಆಗ ಆ ವೃದ್ಧನು, “ ನಿಮ್ಮ ತಾರಾಪತಿಯು ನಮ್ಮೊಡೆಯನಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದ ಕಪ್ಪವನ್ನು ತೆಗೆದುಕೊಂಡು ಹೋಗಲು ನಾನು ಬಂದಿದ್ದೇನೆ ! ಹಿಂದೆ ಒಂದು ಸಲ ನಮ್ಮ ರಾಜಪುತ್ರನು ಇಲ್ಲಿಗೆ ಕುದುರೆಯ ಜೂಜಿಗೆ ಬಂದಿದ್ದನು. ಜೂಜಿನಲ್ಲಿ ಎಲ್ಲರಿಗಿಂತಲೂ ಆತನೇ ಮುಂದಾಳಾಗಲು, ಆತನ ಅಶ್ವವಿದ್ಯೆಯನ್ನು ಕಂಡು ನಿಮ್ಮ ತಾರಾ ಪತಿಯ ಎದೆಯಲ್ಲಿ ಮತ್ಸರವು ಮೊಳೆಯಿತು. ನಮ್ಮ ಅರಸುಮಗನು ಮಾಧವೇಯರೊಡನೆ ಸೇರಿಕೊಂಡು ತಾರಾಪತಿಯನ್ನು ಸಿಂಹಾಸನದಿಂದ ತಳ್ಳಿಬಿಡುವನೋ ಏನೋ ಎಂದು ಬೆದರಿ, ತಾರಾಪತಿಯು ಒಳಸಂಚು ಮಾಡಿ, ಆತನನ್ನು ಹೇಗೋ ಕೊಲ್ಲಿಸಿಬಿಟ್ಟನು. ಶತಪುರಕ್ಕೆ ಹೋಗುವ ದಾರಿಯಲ್ಲಿ ಆತನನ್ನು ಹಿಡಿದು ಕೊಂದರೆಂದು ಕೆಲವರೂ, ಕಾಡುಮೃಗ ಗಳಿಂದ ಕೊಲಿಸಿದರೆಂದು ಇನ್ನು ಕೆಲವರೂ ಹೇಳುತ್ತಾರೆ. ಜೂಜಿನಲ್ಲಿ ಸೋತವರೇ ಹೊಟ್ಟೆಯ ಕಿಚ್ಚಿನಿಂದ ಕೊಂದರೆಂದು ತಾರಾಪತಿಯು ಹೇಳು ತ್ತಾನೆ. ಅದು ಹೇಗೂ ಇರಲಿ. ಆ ಮೇಲೆ ನಮ್ಮ ರಾಜನಾದ ಶತ ಬಲಿಯು ಇಲ್ಲಿಗೆ ಬಂದು, ಈ ರಾಷ್ಟ್ರವನ್ನೆಲ್ಲಾ ವಶಮಾಡಿಕೊಂಡನು. ಆಗ ತಾರಾಪತಿಯು ಶರಣಾಗತನಾಗಿ ವರ್ಷವರ್ಷವೂ ಏಳು ಮಂದಿ ಯುವಕರನ್ನೂ ಏಳು ಮಂದಿ ಕನ್ನಿಕೆಯರನ್ನೂ ಕಪ್ಪಕೊಡುವುದಾಗಿ ಒಪ್ಪಿಕೊಳ್ಳಲು, ಈ ರಾಜ್ಯವನ್ನು ಪುನಃ ಆತನಿಗೆ ಕೊಟ್ಟು ಹಿಂದೆರಳಿದನು. ಅಂದಿನಿಂದ ಪ್ರತಿವರ್ಷವೂ ಅಷ್ಟು ಮಂದಿ ಯುವಕ ಯುವತಿಯರನ್ನೂ ಒಂದು ಕರಿಯ ಹಾಯಿಯ ಹಡಗಿನಲ್ಲಿ ತೆಗೆದುಕೊಂಡು ಹೋಗುತ್ತಲಿ ದ್ದೇನೆ ! " ಎಂದನು.

ಈ ಮಾತನ್ನು ಕೇಳಿದ ಕೂಡಲೆ ಅಜಿತನು ಕೋಪದಿಂದ ಅವುಡುಗಳನ್ನು ಕಚ್ಚುತ್ತ, “ನೀನು ರಾಜದೂತನಾಗಿ ಹೋದೆ! ಇಲ್ಲದಿದ್ದರೆ