ಪುಟ:ಅರಮನೆ.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೭೧ ಹೆಪ್ಪು ಗಟ್ಟುತಾ ಹೋಯಿತು. ಹನುಮನೆಂಬ ಹುಂಜವು ತಾನಿದ್ದ ಗೂಡೊಳಗೆ ಕಣ್ಣು ಮುಚೋದು ತೆರೆಯೋದು ಮಾಡುತಲಿತ್ತು. ಸದ್ದಡಗಿತೆಂದರೆ ಅದಕ್ಕೆ ಬಲು ತ್ರಾಸು. ಗೂಡಿನಿಂದ ಕತು ಹೊರ ಚಾಚಿ ಮುಗುಲ ಕಡೇಕ, ಮೂಡಲಕ ಕಡೇಕ ನೋಡೋದು, ವುಳಕೊಂಡಲ್ಲೇ ವುಳಕೊಂಡಿವೆಯಲ್ಲಾ.. ಯಿವುಗಳ ಕಾಲಿಗೆ ಬರಬಾರದ ಬ್ಯಾನೆ ಬಂದಿರುವುದೋ ಯೇನೋ ಯಂದು ಚುಕ್ಕಿಗಳನ್ನು ಸಾಪಳಿಸೋದು ಮತ್ತೆ ಕತ್ತನ್ನು ವಳ ಯಳಕೊಳ್ಳೋದು ಮಾಡುತಲಿತ್ತು.. ಮಯ್ಯ ಸಾಬರಿಕೇದು ಯಿದ್ದಂಗಯ್ದೆ ಯಂದು ಬೆಳ್ಳಿಯನ್ನು ಬಯ್ಯಂತು. ಅದೀಟು ಹೊತ್ತಿಗೆ ಮೂಡಲ ಕಡೇಲಿ ತಲೆ ತುರಾಯಿ ತೂರಿಸಬೇಕಿತ್ತು. ಯಲ್ಲರಂಗೆ ಅದೂ ಕತ್ತಲ ಕೊಚ್ಚೆಯಲ್ಲಿ ಸಿಕ್ಕುಹಾಕಿ ಕೊಂಡಿರು ವುದೋ ಯೇನೊ? ಅದು ಮೂಡದ ಹೊರತು ಸೂರೆ ಮೂಡೊಲ್ಲ, ಸೂರೆ ಮೂಡಿದರೇನೆ ಯೇ ಕುದುರೆಡವು ಪಟ್ಟಣದೊಳಗೆ ನಡೆಯಬೇಕಾಗಿರೋ ಅನಿಯಮಿತ ಕಾರಕ್ರಮಗಳಿಗೆ ಹೊಸ ಚಾಲನೆ ಸಿಗಲಕ ಸಾಧ್ಯ ಯಂದು ತನಗೆ ತಾನ ಅಂದುಕೊಂಡ ಅದು ಹೊತ್ತು ಯಷ್ಟಾದರು ಆಗಿರಲಿ ತಾನು ಕೂಗಿಯೇ ಬಿಡುವುದೆಂದು ನಿರರಿಸಿತು. ಗೂಡಿನಿಂದ ಹೊರಗೆ ಬಂದು ನೋಡತಯ್ಕೆ ಸುತ್ತಮುತ್ತ ಯಡಕೂ ಬಲಕೂಸ, ಮ್ಯಾಲಕೂ ಕೆಳಗು ಯಲ್ಲಿ ನೋಡಿದರು ಕತ್ತಲ ರಾಡಿ. ಅದು ತನ್ನ ಮಯ್ಯಗೆಲ್ಲ ವರಕೊಂಡಂತೆ ಭಾಸವಾಯಿತು. ಕತ್ತಾಲು ಯಿಲ್ಲದ ಜಗೇವು ಯಲ್ಲಯಿತಂತ ಹುಡುಕೋದು? ಠಣ್ಣ... ಠಣ್ಣ ಜಿಕ್ಕೋತ ಜಿಕ್ಕೋತ ಹೋತೂ ಹೋತು.. ಹಾರಿ ಕಾವಲಿ ಅಂಜಿನಕ್ಕನ ಗುಡ್ಡು ಒಂದಲ ಮೋಟುಗೋಡೆಯೇರಿ ಸುತ್ತಮುತ್ತ ಸಿಮಾವಲೋಕನ ಮಾಡುತಯ್ಕೆ, ಅಗಾ.. ಅಲ್ಲಂದರ ಕತ್ತಾಲು.. ಯಿಗಾ ಯಿಲ್ಲಂದರ ಕತ್ತಾಲು.. ಅಲ್ಲಿಂದ ಯೇನು ಮಾಡಿತದು.. ಜಿಕ್ಕೋತ ಜಿತ ಗೊಂಜಾಗ್ಧರ ಅಡಿವೆಪ್ಪನ ತಿಪ್ಪೆಯ ಶಿಖರಾಗ್ರದ ಮ್ಯಾಲ ಕ್ರಿಯಿಕ್ರಮನಂತೆ ನಿಂತಿತು. ಬೆಳ್ಳಿಯ ಬೆಳಕಿನ ಪಯ್ಕೆ ವಂದು ನೂಲಿನೆಳೆ ಯಷ್ಟಾದರೂ ಅಯಿತೋ ಯಿಲ್ಲವೋ? ಮೂಡಣದ ಸದರ ಕಡೇಕ ತಲೆ ನಿಗುರಿಸಿ ನೋಡಿತು. ಅಲ್ಲೆಲ್ಲೂ ನೀರುಮಜ್ಜಿಗೆ ಯಷ್ಟಾದರೂ ಬೆಳಕು ಯಿರಲಿಲ್ಲ. ತಾನು ಕೂಗಿದರೆಲ್ಲಿ ಹೊತ್ತಲ್ಲದ ಹೊತ್ತಲ್ಲಿ ಬೆಳಕು ಮೂಡಿ ಬಿಡುವುದೋ? ಕೂಗದಿದ್ದಲ್ಲಿ ಬೆಳಕು ಮೂಡಿ ತನ್ನ ಮುಂಗೋಳಿತನಕ್ಕೆ ಅಪಚಾರ ವದಗುವುದೋ..? ಹಿಂಗ ಸಂದಿಗ್ಧಕ್ಕೆ ಸಿಲುಕಿದ ಅದು ಮತ್ತೆ ಹನುಮಕ್ಕನ ಮೋಟು ಗೋಡೆ ಮ್ಯಾಲ ರೆಪ್ಪೆ ರೆಪ್ಪೆ ಅಂಟಿಸದೆ