ಪುಟ:ಅರಮನೆ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೨ ಅರಮನೆ ನಿದ್ದೆ ಮಾಡುತ್ತಿರುವಾಗ್ಗೆ, ವುಳಿಕೆ ಹಿಮ್ಮೇಳದ ಹುಂಜಗಳು ಹನುಮ ಕೂಗುವುದನ್ನೇ ಕಾಯುತ್ತಿರುವಾಗ್ಗೆ, ಅರಮನೆಯು ಪ್ರಹರಿಗಳೂ ಕಾಯುತ್ತಿರುವಾಗ್ಗೆ. ಹುಂಜಗಳು ಕೂಗಲು ಹೆದರಿಕಂಡವೆ ಯಂದು ಕಾವಳದ ನೀರವತೆ ಮೀಸೆ ತಿರುವುತ್ತಿರುವಾಗ್ಗೆ... ಅದೇ ಥಳಗೇರಿಯ, ಅದೇ ಹಾದಿಯ ಕೊನೇಲಿದ್ದ ಹುಲಿಕುಂಟೆಪ್ಪನ ಮಗಳು, ಅಂದರ ನೆಟಕಲ್ಲಯ್ಯನ ಹೆಂಡತಿ, ಅಂದರ ಸಿಡೇಗಲ್ಲು ಗ್ರಾಮದ ಬುಸ್ವಪ್ಪನ ಮಗಳು, ಅಂದರ ಕರಿಯಮ್ಮನ ತಂಗಿ, ಅಂದರ ಸಕ್ಕರಮ್ಮನ ಅಕ್ಕಳಾದ ಬೂವಮ್ಮ ತಿಂಬುತಲಿದ್ದ ಹೆರಿಗೆ ಬ್ಯಾನಿಗೆ ನೆಲ ನಡುಗುತಲಿತ್ತು. ಹೆರಿಗೆ ಮಾಡಿಸಲೋಸುಗ ಆಕೆ ಸುತ್ತಮುತ್ತ ಟೊಂಕ ಕಟ್ಟಿ ನಿಂತಿದ್ದ ಅರೆಕರೆ ಬೋರಣ್ಯ, ಗುಡಿಮುಂದಲ ಬನಜ್ಜಿ ಕರಸಲ ಸಿವಕ್ಕೆ “ನೋವು ಹೆಂಗೆಂಗೆ ತಿಂಬುತಾ ಹೋದರ ಕೂಸು ಹಂಗಂಗ ತಿರುಗುತಾ ದ್ವಾರದ ಬುಡಕ ಬರತಯ್ಕೆ ಕನವ್ವಾ.. ಬ್ಯಾನೆ ತಿಂಬು.. ಬ್ಯಾನೆ ತಿಂಬು” ಅನ್ನುತಲಿದ್ದರು. ಕಿಬ್ಬೊಟ್ಟೆಮಾಲ ಹಳ್ಳೆಣ್ಣೆ ಹಚ್ಚಿ ನೀವಿದಾಗ ಕೂಸು ಮುಂದಕ ಜರುಗೋದು, ಹಿಂದಕ ಸರಿಯೋದು ಮಾಡುತಲಿತ್ತು. ಭೂಲೋಕದ ಮಾಲ ವುದುರುಲಕ ಹಿಂದು ಮುಂದು ನೋಡುತಲಿತ್ತು ಬಲು ತ್ರಾಸು ಕೊಡಲಕ ಹತ್ತಿತ್ತು, ಗರುಭಿಣಿ ಬ್ಯಾನೆ ತಿಂಬೂ ತಿಂಬೂ ಅಂದರ ಹೆಂಗ ತಿಂದಾಳು? ಯೇಟಂತ ತಿಂದಾಳು? ಮೊದಲೇ ಆಕಿ ಮಯ್ಯ ನೆರೆತು ವರುಷ ತುಂಬಿರಲಿಲ್ಲ. "ಯವ್ವಾss ಬ್ಯಾನೆ ತಿಂಬೋದು ನನ ಕಯ್ಲಿ ಆಗಲಕಿಲ್ಲವ್ವಾ, ಸಾಯೋದೆ ಮ್ಯಾಲನಸತಯ್ಕೆ.. ನಾನು ಸತ್ತರೆ ನನ ಗಂಡಗೆ ನನ ತಂಗಿ ಕರಿಯವ್ವನ್ನ ಕೊಟ್ಟು ಮದುವಿ ಮಾಡಿರವ್ಯಾ. ನನ ಗಂಡ ಛಲೋತ ಅದಾನ.. ಯಲ್ಲಾದನ ಕರೀರವ್ವಾ ಆತನ್ನ.. ಆತನ ಮಾರೀನ ನೋಡಿ ಪಿರಾಣ ಬುಡುತೀನಿ.” ಯಂದು ಚೀರಾಡಲಕ ಹತ್ತಿದ್ದಳು.. ಹೊರಗಡೆ ಪಳುಗಟ್ಟೆ ಮ್ಯಾಲ ಆಕೀ ಗಂಡ ನೆಟಕಲ್ಲ ಬಲು ದುಕ್ಕ ಮಾಡುತ ಕಂಗಾಲಾಗಿ ಕೂಕಂಡಿದ್ದನು, ಮಾವ ಹುಲುಕಂಟೆಪ್ಪ ಕಂಗಾಲಾಗಿದ್ದನು, ಅತ್ತೆ ಗೂಳೆವ್ವ ಕಂಗಾಲಾಗಿದ್ದಳು, ಕಾದು ಕುಂತಿದ್ದ ವರಮಾನವು ಕಂಗಾಲಾಗಿದ್ದಿತು. ಆಕೆ ಯೇನು ಸುಮ್ಮಕ ಮನೆ ತುಂಬಿದಾಕೆಯಲ್ಲ. ಅಯಿದತ್ತು ತೆರವು ತಿಂದಿರುವಾಕೆ. ಸಿಡೇಗಲ್ಲು ಕುಲಕರುಣಿ ಕಿಷ್ಟಯ್ಯನು ರೂಪಾಯಿ ಪಾವಲಿ ತೆರಿಗೆ ಕಟ್ಟಿಸಿಕೊಂಡು ಮದುವೆಗೆ ಪರವಾನಿಗಿ ಬರೆದುಕೊಟ್ಟಿದ್ದನು. ಮಯ್ಯ ನೆರೆಯದಿದ್ದರೂ ವುಂಡಕಂಡು ತಿಂದಕಂಡು ಪಿಳ್ಳೆ ವಳ್ಳೆ ಟಗರಿನಂಗೆ ಮಯ್ಯ ಬಿಟ್ಟಿತ್ತು. ಮನೆ ಹೊಲದ ದಗದ ವದಕನಗಳನ್ನು ಮತ್ತು ಮಾಡಿ ಕೊಂಡು