ಪುಟ:ಅರಮನೆ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಕಣ್ಣು ತೆರೆದು ನೋಡಿದ.. ನಿಧ ನಿಧಾನವಾಗಿ ಆವರಿಸುತ್ತಿರುವ ಕತ್ತಲು.. ಹಗಲನ್ನೂ ಕಬಳಿಸಲು ಹೊಂಚಿರುವ ಕತ್ತಲು, ತನ್ನದೆಯಿಂದ ಪ್ರವಹಿಸುತ್ತಿರುವ ಕತ್ತಲು, ಕುಂಪಣಿ ಸರಕಾರದ ದಫರುಗಳೊಳಗಿಂದ ಹರಿಯುತ್ತಿರುವ ಕತ್ತಲು, ಯಿಂಗ್ಲೀಷು ಭಾಷೆಯ ಬೀಜಾಕ್ಷರ ಗಳೊಳಗಿನಿಂದ ಜಿನುಗುತ್ತಿರುವ ಕತ್ತಲು, ಬೆಳಕನ್ನು ನಿತ್ರಾಣ ಮಾಡುತ್ತಿರುವ ಕತ್ತಲು.. ತನ್ನ ಆತ್ಮಯಿಸ್ವಾಸವನ್ನು ಕಬಳಿಸಲು ಹೊಂಚುಹಾಕಿರುವ ಕತ್ತಲು.. ಕತ್ತಲ ವಿರಾಟ್‌ರೂಪವನ್ನು ಯಂದೂ, ಯಾವತ್ತೂ ಕಡರಿಯದಿದ್ದ, ಅನುಭವಿಸಿರದಿದ್ದ ಮನ್ನೇ ತನ್ನ ಕಣ್ಣುಗಳನ್ನು ಮತ್ತಷ್ಟು ಹಿಗ್ಗಲಿಸಿ ನೋಡಿದ.. ಅಗೋ ಅಲ್ಲಿದೆ ಲಾಂದ್ರ.. ತಳಮಟ್ಟ ಕುಟುಕು ಬೆಳಕನ್ನು ಸಹಿಸಿಕೊಂಡಿರುವ ಲಾಂದ್ರ.. ಕಯ್ಯಳತೆಯಿಂದ ದೂರ ಸರಿದಿರುವ, ಸರಿಯುತ್ತಿರುವ ಲಾಂದ್ರ.. ಅತ್ತ ರೆಬರೋ ನಿಚ್ಚಾಪುರದವರ ಸಾಯದಿಂದ ಜರುಮಲಿಯನ್ನೂ, ಜರುಮಲಿಯವರ ಸಾಯದಿಂದ ನಿಚ್ಚಾಪುರವನ್ನೂ ಹಣ್ಣುಗಾಯಿ ನೀರುಗಾಯಿ ಮಾಡಿ ಮದರಾಸಿನ ಅಯಿಷಿನ್ ಸ್ಪೆನ್ ಮಾಶಯನಿಂದ ಮೆಚ್ಚುಗೆ ಪಡೆದುಕೊಂಡಿದ್ದನು. ತನಗೆ ಬಡತಿ ದೊರಕಬೌದೆಂದು ಕಣಸು ಕಾಣುತ್ತಲೇ ಕೂಡ್ಲಿಗಿಯ ಯಡ್ಡವರನ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದನು. ತಮ್ಮತ್ತ ಕಣ್ಣು ಕೆಂಪಗೆ ಮಾಡಿಕೊಳ್ಳದಿರಲೆಂದು ಮಲ್ಲಾಕನಹಳ್ಳಿ ತಿಮ್ಮಲಾಪುರ, ಕಂದಗಲ್ಲು, ದೂಪದಹಳ್ಳಿಯೇ ಮೊದಲಾದ ಕೂಡ್ಲಿಗಿ ವಳಿತದೊಳಗಿದ್ದ ಚವೀಸು ಗ್ರಾಮಗಳ ಸೂಯಂ ಘೋಷಿತ ರಾಜರುಗಳಾದ ಶ್ರೀರಂಗದೇವರಾಯಲು, ಗಂಡುಪಾಲ ನಾಂಕ, ಗಾದೆಪ್ಪನಾಯಕ, ಚವುಡಪ್ಪನಾಯಕ, ದುರುಗಪ್ಪ ನಾಯಕ, ಕೆಂಗಪ್ಪನಾಯಕರೇ ಮೊದಲಾದವರು ಉಂಗುರ, ಸರ, ಕಡಗ, ಡಾಬು ಯವೇ ಮೊದಲಾದ ಆಭರಣಗಳನ್ನೂ, ನವಿಲು, ಮೊಲ, ಮಾತಾಡುವ ಗಿಣಿ, ಬೇಟೆನಾಯಿ, ಅಯ್ದುಕಾಲಿನ ಆಕಳು, ಮೂರು ಕೋಡಿನ ಟಗರು, ಹಾರಲಾರದ ದೊಡ್ಡ ರೆಕ್ಕೆಯ ಪಕ್ಷಿ ಯಿವೇ ಮೊದಲಾದ ಪ್ರಾಣಿ ಪಕ್ಷಿಗಳನ್ನೂ ಮೂಳಿಗಕ್ಕೆ ಸಮರರೂ ನಂಬುಗಸ್ಥರೂ ಆದ ಹೆಣ್ಣಾಳು, ಗಂಡಾಳುಗಳನ್ನೂ ದೇವಾಲಯಗಳ ಪ್ರತಿಕ್ರುತಿಗಳನ್ನೂ ಬರೋಬ್ಬರಿ ನಲವತ್ತು ತುಂಬಿದ್ದ ಯಡ್ಡವರನಿಗೆ ಕಾಣಿಕೆ ರೂಪದಲ್ಲಿ ಸಂದಾಯ ಮಾಡಿದರು. ಬಗೆಬಗೆಯ ಕೇಶಾಲಂಕಾರ ಮಾಡಿಕೊಂಡಿದ್ದ ಆಯಾ ರಾಜರುಗಳನ್ನುದ್ದೇಸಿಸಿ ಜೆನ್ನಿಫರಳು ಅಹಿಂಸೆ, ಪ್ರಾಣಿ ದಯೆ ಕುರಿತು ಅಮೋಘವಾಗಿ ಮಾತಾಡಿದಳಲ್ಲದೆ ಪ್ರತಿಯೊಂದು ಮೊರೊಳಗೆ ಕುಂಪಣಿ ಸರಕಾರದ ಪ್ರೀತ್ಯಕ್ಷವಾಗಿ ವಂದಾದರೂ ಮುಗಾಲಯ