ಪುಟ:ಅರಮನೆ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೭೫ ಯಂಬ ವುದ್ದೇಸದಿಂದ ಕರವ್ವನ ಬಾವಿಯೊಳಗೆ ಕಪ್ಪೆಗಳು ಠಣಕು ಠಣಕು ಜಿಗಿದು ತಮ್ಮ ತಮ್ಮ ಸುರಂಗದರಮನೆಗಳನ್ನು ಸೇರಿಕೊಂಡವು. ಯೀ ಪ್ರಕಾರವಾಗಿ... ಅತ್ತ ಬಳ್ಳಾರಿ ವಳಿತದೊಳಗಿದ್ದ ಥಾಮಸು ಮನೋ ಸಾಹೇಬನು ಬಾಳೆಹಣ್ಣು ತಿಂಬುತ ವಂದು ಪುಸ್ತಕವನ್ನು ಮೋದಿ ಮುಗಿಸಿದನು, ಸೇಬುಹಣ್ಣು ತಿಂಬುತ ಯಿನ್ನೊಂದು ಪುಸ್ತಕವನ್ನು ಮೋದಿ ಮುಗಿಸಿದನು, ದರಾಕ್ಷಿ ಹಣ್ಣು ತಿಂಬುತ ಮತ್ತೊಂದು ಪುಸ್ತಕವನ್ನು ಮೋದಿ ಮುಗಿಸಿದನು. ಅಂಜೂರಿ ಹಣ್ಣು ತಿಂಬುತ ಮಗುದೊಂದು ಪುಸ್ತಕವನ್ನು ಮೋದಿ ಮುಗಿಸಿದನು, ಅದೆಲ್ಲ ತಿಂದಾದ ಮ್ಯಾಲ ವಂದು ಜಾಮು ನಿಂಬೆಹಣ್ಣಿನ ಸರಬತ್ತನ್ನು ಕುಡಿದು ಹಾಸಿಗೆ ಮ್ಯಾಲ ಮಯ್ಯ ಚೆಲ್ಲಿದನು. ತಾನು ಮುಚ್ಚಬೇಕೆಂದಿದ್ದ ಕಣ್ಣುಗಳೊಳಗೆ ತರಾವರಿ ವಯಸರಾಯಿಗಳು, ಗವರುನರುಗಳು ಮುಡುಮುಡನೆ ಮೂಡಿ ಮರೆಯಾಗತೊಡಗಿದರು. ಲಂಡನ್ನಿನ ಬಂಕಿಂಗು ಹ್ಯಾಮು ಅರಮನೆ ತನ್ನೆಲ್ಲ ಗತ್ತು ಗಯರತ್ತುಗಳೊಡನೆ ತೇಲಾಡತೊಡಗಿತು, ಮಹಾಸಾಗರದ ಯದೆ ಮ್ಯಾಲ ನಿಶ್ಚಲ ಸೂಯ್ಯನ ಕಡೆಗೆ ಗುರಿಯಿಟ್ಟು ಸಾಗುತ್ತಿರುವ, ತನ್ನನ್ನು ಬೆಂಬತ್ತಿ ಬರುತ್ತಿರುವ ಚಂಡಮಾರುತಗಳನ್ನು ಹಿಂದೆ ಹಾಕುತ ಚಲಿಸುತ್ತಿರುವ ಬಹುದೊಡ್ಡ ಹಡಗಿನಂತೆ.. ಸೂರನನ್ನು ತಲುಪುವ, ತಲುಪಿ ಹಿಡಿದು ಬಂಧಿಸಲೇ ಬೇಕೆಂಬ ಅದರ ಹಠಮಾರಿತನ ಕಂಡು ನಗುವುದೋ? ಅಳುವುದೋ? ಅದು ಯಷ್ಟು ದಿನಾಂತ ದಣಿವರಿಯದೆ ಪ್ರಯಾಣ ಮಾಡಲು ಸಾಧ್ಯ? ಅದರೊಳಗಿನ ಸಂಪನ್ಮೂಲಗಳು ತೀರಿದಲ್ಲಿ, ಅಟ್ಟಹಾಸ, ಅಹಂಕಾರದ ಜಾಗದಲ್ಲಿ ಹಾಹಾಕಾರ ತುಂಬಿದಲ್ಲಿ ಮುಳುಗಿ ಕಡಲ ತಳದಡಿ ನಿಶ್ಲೇಷವಾದಲ್ಲಿ, ಮನೋ ದಿಗ್ಗನೆ ಯಚ್ಚರಗೊಂಡ. ಮುಳುಗಲಿರುವ ಸಹಸ್ರಾರು ಮಂದಿ ಪಯ್ಕೆ ಮೋಗ್ಯನಾದ ತಾನು, ಹಡಗಿನ ಚುಕ್ಕಾಣಿ ಹಿಡಿದಿರುವ ಸಹಸ್ರಾರು ಕಯ್ಯಗಳ ಪಯ್ಕೆ ತನ್ನಯರಡು ಕಯ್ಕೆಗಳಿವೆ ಯಂದು ಭಾವಿಸಿದವನಾದ ತಾನು.. ವಳಿತು ಕೆಡಕುಗಳ, ಸರಿ ತಪ್ಪುಗಳ, ಪಾಪ ಪುಣ್ಯಗಳ, ತ್ರಿಕಾಲ ಸತ್ಯಗಳ, ಯಿತಿಹಾಸದ ಪುಟಗಳ ಕಾಲಧೂಳಿನಲ್ಲಿ ಕೊಚ್ಚಿ ಹೋಗುತ್ತಿರುವ ತಾನು, ಆಸೆ ಆಮಿಷಗಳೆಂಬ ಬಿಸಿಲುಗುದುರೆಗಳನ್ನು ಬೆಂಬೆತ್ತಿರುವ ತಾನು, ಬಿರುದು ಬಾವಲಿಗಳೆಂಬ ಮುಗ ಜಲಧಿಯಲ್ಲಿ ಯೇಜುತ್ತಿರುವ ತಾನು, ವಾಲಾಗಿ ಗುಲಾಮರಲ್ಲಿ ಗುಲಾಮನಾಗಿರುವ ತಾನು..