ಪುಟ:ಅರಮನೆ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ದೂರದಲ್ಲಿದ್ದ ಬೇಯಿನ ಮರದ ಬುಡಕೆ ಹೋದನು. 'ಯಕ್ಕೋಮ್' ಯಂದೊಂದು ಸಲ ಕೂಗಿದೇಟಿಗೆ ಯಚ್ಚರಗೊಂಡಾಂಯವ್ವಗೆ ಹಿಂಗಂಗವ್ವಾ ಅಂತ ಯಿವರಿಸಿದನು ಹೇಳಾಕೋ ಬ್ಯಾಡಲೋ ಅಂತ. ವುದ್ದನೆಯ ಕಾಲುಳ್ಳವಳಾದ ಆಕೆಯು ನಡಕೋತ ಹೋಗಿ ಮುಟ್ಟಿ ಬಾಣಂತನಕ ಕಯ್ಯ ಹಚ್ಚಿದಳು. ತಗಾದಿ ಯಡಕಾಗಲಿ ಯಂದು ಸಿವಸರಣೆ ಚನ್ನವ್ವನೂ, ಬಾಗಾದಿ ಬಲಕಾಗಲಿಯಂದು ಧರುಮದೇವತೆಯು ಹರಸಿದರು. ನಿಮ್ಮ ಸೂಲಗಿತ್ತಿಯಾದ ಜಗಲೂರೆವ್ವಗೂ ಆ ಬಾಣಂತನ ಕಯ್ಯಾರ ಮೀರಿರದೆ ಯಿರಲಿಲ್ಲ. ಕೂಸು ಕೆಳಕ್ಕಿಳಿಯೋದೂ, ಮಾಲಕೇರೋದು ಮಾಡುತಲಿತ್ತು. ಆಕೆ ತನ್ನ ಕುಲದಯವವಾದ ಜಗಲೂರೆಜ್ಜನ ಮ್ಯಾಲ ಭಾರ ಹಾಕಿ ಮಿಕ್ಕು ಯತ್ನವ ಮಾಡಿದಳು. ಹುಟ್ಟಿದಾರಾಭ್ಯ ತನ್ನ ರೆಟ್ಟೇಲಿದ್ದ ತಾಯಿತವನ್ನು ಬಾಣಂತಿಯ ರೆಟ್ಟೆಗೆ ಕಟ್ಟಿದಳು. ಬಾಣಂತನಕ ಕಂಟಕಪ್ರಾಯವಾಗಿದ್ದ ಡಕ್ಕಿ, ಡಮರುಗ ಯಂಬಿವೇ ಮೊದಲಾದ ಪಿಚಾಚಿಗಳನ್ನು ಲೋಬಾನದ ಹೊಗೆ ಹಾಕಿ ಮೋಡಿಸಿದಳು. ಅದಾದ ಸೋಲುಪ ಹೊತ್ತಿಗೆ ಕೂಸು ಸುಸೂತ್ರವಾಗಿ ಕವುದಿ ಮ್ಯಾಲುದುರಿ ಅವ್ವಾ ಯಂದು ಅಳಲಾರಂಭಿಸಲು... ಮೋಟು ಗೋಡೆ ಮ್ಯಾಲಿದ್ದ ಕಾವಲಿ ಅಂಜಿನವ್ವನ ಹುಂಜವು ಮುಗುಲಿಗೆ ಮುಖ ಯತ್ತಿ ಕೊಕ್ಕೋಕೋ ಯಂದು ಕೂಗು ಹಾಕಿತು. ಅದು ಯಲ್ಲಿಯವರೆಗೆ ಕೇಳಿಸಿತೆಂದರೆ ವಂದು ಗಾವುದ ದೂರದವರೆಗೆ, ಪಟ್ಟಣದೊಳಗ ಸತ್ತವರಂಗ ಮಲಿಕ್ಕೊಂಡಿದ್ದ ಮಂದಿಯ ಕಪಾಳಕ್ಕೆ ಛಟಾರಂತ ಬಾರಿಸಿತು ಆ ಕೂಗು. ಥಳಗೆ ಹರಿದ ಬೆಳಕಿಗಷ್ಟು ದೂರಕ ಪಟ್ಟಣವು ನಿಂತು ಆಕಳಿಸುತ್ತ ಮಯ್ಯ ಮುರಕಂತು, ದಂತದಾವನ ಮಾಡಿಕೊಳ್ಳಲೆಂದು ಬರುವವರನ್ನು ತಮ್ಮ ತಮ್ಮ ಕಿರು ಕೊಬೆರೆಂಬೆಗಳ ಕಡೀಕ ಕಂ ಚಾಚಲೆಂದು ಬರುವವರನ್ನು ಸ್ವಾಗತಿಸಲಿಕೆಂದು ಬೇಯಿನ ಮರಗಳು ಮಯ್ಯ ವನದಾಡಿ ಸಜ್ಜುಗೊಂಡವು. ಚಿನಬೊಮ್ಮಂತರಾಜನು ಕಟ್ಟಿಸಿದ್ದೆನ್ನಲಾದ ಗಾದರಿಪಾಲನಾಯಕ, ಯತ್ತಪ್ಪ ಜುಂಜಪ್ಪ, ದಮೂರು ಯಂಕಪ್ಪ ತಾತ, ತೆಕ್ಕಲಕೋಟೆ ಕಾಡುಸಿದ್ದಪ್ಪ ತಾತ, ಗೂಳ್ಳದ ಗಾದಿಲಿಂಗಪ್ಪ ತಾತ, ಸುಡುಗಾಡಪ್ಪ ತಾತ, ಸೀಪುರದ ಸಿಪಾಯಿ ತಾತ, ಮಾದಾಪುರದ ಮುನುಸೋಬ ತಾತರೇ ಮೊದಲಾದ ತ್ರಿಷಷಿ« ಪುರಾತನರು ಮಜ್ಜಣ ಮಾಡಿದ್ದರೆನ್ನಲಾದ ಮೂರು ತೂಬುಗಳಿದ್ದ ಕೆರೆಯ ನೀರ ಯಿಸ್ತಾರದ ಮ್ಯಾಲ ಬೆಳಕಿನ ಕೋವಿಗಳು ಕುಣುದಾಡಲಕ ಹತ್ತಿದವು. ಬಾಯಿ ಮುಕ್ಕಳಿಸಲಕ, ಮುಖಮಾರೆ ತೊಳಕೊಳ್ಳಲಕ ಮಂದಿ ಬರುತಾರ