ಪುಟ:ಅರಮನೆ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಸಮಾಧಾನಪಡಿಸಿದಳು. “ಹುಚ್ಚಪ್ಪಾ ಹೆತ್ತ ತಾಯಿಗಿಂತ ನಾನು ಯಾವುದರಲ್ಲಿ ಕಡಿಮೆ ಅದೀನಪ್ಪಾ” ಯಂದಳು. “ಯಿದರಲ್ಲಿ ನಿನಗೆ ಅರ ಆಗದ ರಾಜಕಾರಣ ಅಯ್ಯಪ್ಪಾ.. ನಾಳೆ ಸಿಮಾಸನದ ಮಾಲ ಕೂಡೋ ನೀನೇ ಯಿದನು ಅರಮಾಡಿಕೊಳ್ಳದಿದ್ದರ ಹೆಂಗ?' ಯಂದಾಕೆ ಹೇಳಿದೊಡನೆ ಕಾಟಯ್ಯ ಸಿಮಾಸನವನ್ನು ಕಣ್ಣಲ್ಲಿ ತುಂಬಿಕೊಂಡು ಕರಗಿ ಹೋದನು. ಆ ಕ್ಷಣ ರಾಜಾಧಿರಾಜನಂತೆ ಗಂಭೀರನಾದನು. ತಮ ಗಂಡ ಮುಂದೊಂದು ಸಲಕ ರಾಜನಾತಾನಂತಂತ ಅಯ್ತುಮಂದಿ ಹೆಂಡರಿಂದ ಸಯೋಪಚಾರ ಮಾಡಿಸಿಕೊಂಡು ಮೊದಲಿನಂತಾಗದಿದಾನಾ ಕಾಟಯ್ಯನಾಯಕ? ಯಾವ ಗಳಿಗೆಯಲ್ಲಾದರೂ ರಾಜನಾಗಲಿರುವ ತಾನು ಹೆಂಗಿರಬೇಕೋ ಹಂಗೇ ಯಿರುವುದಾಗಿ ತನ್ನ ವುಸಾಬರಿ ವಳಿತದೊಳಗಿದ್ದ ಯಲ್ಲಾರಿಗೂ ಮನದಟ್ಟುಮಾಡಿಕೊಟ್ಟವನಾದ ಕಾಟಯ್ಯನು ಪಿಕದಾನಿ ನೋಡುತ್ತಲೇ ಗುಡಿ ಹಿ೦ದಲ ಮನೆಯ ಮೂಳೆ ಮೋಬಯ್ಯನನ್ನು ಗ್ರಾಹಕ ಮಾಡಿಕೊಂಡನು. “ಯಮೋಯೇನು ಯೋಚನೆ ಮಾಡಿದಿ ತಾಯಿ” ಅಂದುದಕೆ ರಾಜಮಾತೆಯು ಅವನೊಬ್ಬನೇ ಪುವ್ವಲ ರಾಜಮನೆತನಕ್ಕೆ ಸೊಕ್ಕಿನಿಂದ ಬರೆ ಯಳದಿರು ವನಪ್ಪಾ.. ಕಲೆಬ್ರುಸಾಹೇಬ ವಂದು ತೂಕ ಆಗಿದ್ದರೆ, ಅವನೊಬ್ಬನೆ ವಂದು ತೂಕ ಆಗವನ ಕಣಪ್ಪಾ.. ನೀನಿನ ಗೂಢಾನ ಭೇದಿಸಿಕೊಂಡು ಬಂದರ ಸಮ್ಮಿ ಅಂತೀನಿ ನೋಡು ಯಂದು ಎಂದು ವುಸುರು ಬಿಟ್ಟಳು. ಅದು ಅವನ ಯದೆಯೊಳಗೆ ಮುರುಕಂತು, "ಯವ್ವಾ ಯೀ ಯಿಳಿ ವಯಸಿನಾಗ ಊಟೊಂದು ಯಸನ ಮಾಡಬ್ಯಾಡವ್ವಾ.. ಅವನಾದರೂ ವುಮಂತ ಮೊದಿದರ ವುದುರಿ ಬೀಳಂಗದಾನ.. ಅವನ ವುಸಾಬರೀನ ನನಗ ಬಿಡು.. ನೀನು ವುಟ್ಟುಂಡು ನೆಮ್ಮದಿ ಯಿಂದಿರು” ಯಂದು ಆಶ್ವಾಸನೆ ನೀಡಿದ ಬಳಿಕ ತಾನು ಸುಮ್ಮಕಯಿರಲಿಲ್ಲ... ಆಗಿಂದಾಗಲೆ ಕರೆಸಿದೊಡನೆ ಬಂದವರಾದ ಆಮಾತ್ಯ ಗವುಡಿಕೆ ಸಣಸಿದ್ದಪ್ಪ ಸೇನಾಧಿಪತಿ ಗೋಯಿಂದಪ್ಪ ಭಂಡಾರಿ ಸನ್ಯಾಸಪ್ಪಂದಿರನ್ನು ಅರಮನೆಯ ವುಪ್ಪರಿಗೆ ಮ್ಯಾಲ ಕುಂಡಿರಿಸಿಕೊಂಡು ಸಮಾಲೋಚನೆ ನಡೆಸಿದನು. ಯಾವ ಕಾರಣಕ್ಕೂ ಮೋಬಯ್ಯನ ಸರೀರದ ತಂಟೆಗೆ ಮಾತ್ರಹೋಗಬ್ಯಾಡಿ, ಯಾವ ಹುತ್ತದೊಳಗ ಯಾವ ಹಾವಿರುವುದೋ ಯೇನೋ ಯಂದು ತಮ ತಮ್ಮ ಹೆಂಡರು ಹೇಳಿ ಕಳುವಿದ್ದರೂ ನಾಲಿಗೆ ಚಪಲ ತೀರಿಸಲೋಸುಗ ನಾಕು ಮಾತು ವಗೆದರು. ಅವರೆಲ್ಲರ ಯದೆ ವಳಾಗೆ ಅಳುಕು ಯಿಲ್ಲದಿರಲಿಲ್ಲ.