ಪುಟ:ಅರಮನೆ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೯೫ ಯೀಗ ನಿನ ಮಮ್ಮಿ ಮ್ಯಾಲ ಕೂದಲಿಲ್ಲಾಂದರ ಪುವು ವಮುಸಕ್ಕೆ ಅವಮಾನ... ಪದ ಭದ್ರವ ರಾಜ ಕಟ್ಟಿಸಿರೋ ಯೀ ಅರಮನೆಗೇ ಅವಮಾನ.. ಅದಕ ನೀನು ಅರಮನೆ ಬಿಟ್ಟು ಕದಲ ಬ್ಯಾಡ.. ಹೊರಗೆ ಹೋಗ ಬ್ಯಾಡ... ನಾಕು ಮಂದಿ ಕಣ್ಣಿಗೆ ಬೀಳಬ್ಯಾಡ.. ಬಿದ್ದು ಕಿಸುರಾಗಬ್ಯಾಡಪ್ಪ.. ಪಾಲಿಗೆ ಬಂದದ್ದು ಪಂಚಾಂಬುತ ಅಂತ ತಿಳಕೊಂಡು ವಳಾಗ ಯಿರಬೇಕಪ..” ಯಂದು ಹೇಳಿತಲ್ಲದೆ ರಾಜಪರಿವಾರದ ಮಂದಿಗೆ, ಪರಿಚಾರಕ ಮಂದಿಗೆ ಯೀ ಸುದ್ದಿ ಅರಮನೆ ಬಿಟ್ಟು ಸೋರಿ ಹೊರಗೆ ಹೋಗಧಂಗ ನೋಡಿಕೊಳ್ಳಿರೆಂದು ತಾಕೀತು ಮಾಡಿತು. ಪುವ್ವಲ ರಾಜರ ಪಯಿತ್ರದವು ಯಂಬ ಕಾರಣಕ್ಕೆ ರೋಮಗಳನ್ನೆಲ್ಲ ಬಳಿದು ಪಿತಾಂಬರದ ಬಟ್ಟೆಯೊಳಗಿಟ್ಟು ಗಂಟು ಕಟ್ಟಿದರು ಸಿವನೇ.. ಅದು ಮೊದಲೇ ರಾಜ ವಮುಸದವರ ರೋಮವಪ್ಪಾ ತುಳಿದ ಕಾಲಿಗೆ ಕೇಡು, ಬಿದ್ದ ನೆಲವೆಲ್ಲ ಬೀಳುಬೀಡು.. ಅದನ್ನು ಗಂಗಾನದಿಯೊಳಗೆ ಯಿಸರನೆ ಮಾಡಬೇಕು.. ಯಿದೆಲ್ಲ ವಂದಲ್ಲಾ ಎಂದು ತಿಕ್ಕಡಿ ಹತ್ತಿರೋ ಅರಮನೆಯಿಂದ ಆಗದ ಮಾತು. ಮುಂದೊಂದಿವಸ ಚರಾಸ್ತಿ ಸಿಗಲಿ. ಆಗ ಬಿಟ್ಟುದ ಬಿಟ್ಟು ಮಾಡಿದರಾಯಿತು. ಅದೇ ಹೊತ್ತಿಗೆ ಗುಟ್ಟಾಗಿ ಕರೆದಿದ್ದ ಕಾರಣಕ್ಕೆ ಬಂದಿದ್ದ ವೈಯ್ದನೂ, ಜೋತಿಷಿಯೂ ಆದಂಥ ವಂಟೇಮಲ್ಲಯ್ಯನು (ತನ್ನ ಹರೆಯದ ಕಾಲದಲ್ಲಿ ಗುಂಡುಮುಳುಗು ಸಮುಸ್ಥಾನಿಕರಿಂದ ಭಕ್ಷೀಸು ರೂಪದಲ್ಲಿ ವಂಟೆಯನ್ನು ಪಡಕೊಂಡು ಅದರ ಮ್ಯಾಲ ಅಡ್ಡಾಡುತಲಿದ್ದ ಕಾರಣಕ್ಕೆ ಆ ಹೆಸರು ಪ್ರಾಪ್ತವಾಗಿತ್ತು. ಅಡಚಣೆ ಯಿಂದಾಗಿ ಬಕರೀದು ಆಚರಿಸಲಿದ್ದ ಮಸೂದಿಪುರದ ಮುಸಲಮಾನರಿಗೆ ಮಾರಿದ್ದನು) ನಾಡಿಯೊಂದಲ್ಲದೆ ವಾತಕಫ ಪಿತ್ತಾದಿಗಳನ್ನು ಕೂಲಂಕಷ ಪರಿಶೀಲಿಸಿ ಅಂಟರಪುಳಕ, ಯಾಲಪಿ, ಮಯ್ಸತುತ್ತ ಸೇಂದ್ರೀಯ ಲವಣ, ಕಾಗೆ ಪಿಚ್ಚೆ ಯಿವನೆಲ್ಲ ಅರೆದು ಕಾಟಯ್ಯ ಸರೀರದಾದ್ಯಂತ ಲೇಪನ ಮಾಡಿ ವಾರೊಪ್ಪತ್ತು ದಿವಸ ಮಿಸುಕಾಡದಿರುವಂತೆ ಸೂಚಿಸಿದನು. ಯಿನ್ನು ಜೋತಿಷ್ಯ ಗುಣಾಕಾರ ಭಾಗಾಕಾರ ಮಾಡಿ ಯಿದು ಭೂತ ಚಾಷ್ಟಿಯಂದೂ, ಹೊಗೆ ಹಾಕುತ್ತಿರಬೇಕೆಂದೂ ಹೇಳಿ ಲೋಬಾನ ಮಂತ್ರಿಸಿ ಕೊಟ್ಟನು. ಯೀ ಪ್ರಕಾರವಾಗಿ ನಖಶಿಖಾಂತ ಕರಮಂಟ ಗೊಂಡವ ನಾದ ಕಾಟನಾಯಕನು.. ಯಷ್ಟು ಬಂದೋಬಸ್ತು ಮಾಡಿದ್ದರೂ ಯೀ ರಮ್ಯಾತಿ ರಮ್ಯ ಸುದ್ದಿಯು ಅರಮನೆಯ ಅಸಂಖ್ಯಾತ ರಂಧ್ರಗಳ ಮೂಲಕ ಹೊರ ಹರಿದು ಸಮಸ್ತ ಪಟ್ಟಣವನ್ನು ತೊಯ್ದು ತಪ್ಪಡಿ ಮಾಡಿತು. ರಾಜ ಬೋಳಪ್ಪನಾಗಿರುವನಂತಲ್ಲಾ...