ಪುಟ:ಅರಮನೆ.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೬ ಅರಮನೆ ಪರಿವಾರ ಆಕೆಯದುರು ಜಿಗಿದು ನಿಂತು ನೀನೇನಾರ ಕುಡಿಸಿ ಯಿದಕ ಜೀವ ತುಂಬವ್ವಾ..” ಯಂದು ತಮ್ಮ ತಮ್ಮ ಕೂಸು ಕುನ್ನಿಗಳನು ಆಕೇಯಾ ಸಮುಚ್ಚಮ ಚಾಚುತಲಿದ್ದರು. ಮತ ಮತ್ತ ಮುಂದಕ ಹೋದರ ಆಕೆಯ ಸಮುಚ್ಚಮ ತಾಯಂದಿರು ನುತಾ ನುಗ್ಗಿ ಪರಪರನಂತ ತಮ್ಮ ತಮ್ಮ ಪೋಲಕಗಳನ್ನು ಹರದು ತಮ ದುರದಯವಿ ಮೊಲೆಗಳನ್ನು ಹಿಡಿದು ಚಾಚುತ ಯಿವುಗಳ ನೀನಾರ ಕುಡುದು ನಿನ್ನೊಡಲು ತುಂಬಿಸಿ ಕೊಳ್ಳವ್ವಾ” ಯಂದು ಕಾಡತೊಡಗಿದರು.. ಮತ ಮತ್ತ ಮುಂದಕ ಹೊದರಲ್ಲಿ ತಾಯಂದಿರು ತಮ್ಮ ತಮ್ಮ ಕಜ್ಜಿ ಪುಳ್ಳೆ ಕಂದಮ್ಮಗಳನ್ನು ಅಡ್ಡಡ್ಡ ಮಲಗಿಸೂತ.. “ನಿನ ಸೂಚುಮ ಪಾದಗಳ ಇವುಗಳ ಮ್ಯಾಲಿಟ್ಟು ಗತಿ ಕಾಣಿಸೆವ್ವಾ ಪುಣ್ಯ ಬರತಯಿತೇ” ಯಂದು ಗೋಗರೆಯತೊಡಗಿದರು. ಮತಮತ ಮುಂದಕ್ಕೆ ಹೋಗುತಲಿದ್ದ ರಾಜಮಾತೆಯದುರು ಹೆಂಡಂದಿರು ತಮ್ಮ ತಮ್ಮ ಗಂಡಂದಿರನು ತರುಬಿ “ನಿನ್ನ ಮುಖದ ನಗೆಯನ್ನಿವಕೆ ಧಾರೆಯರೆಯವ್ವಾ.. ನಿನ್ನ ಕಣ್ಣು ಹುಬ್ಬುಗಳನ್ನಿವಕ್ಕೆ ಮುಡಿಸೆವ್ವಾ.” ಯಂದು ಬಲು ಜಲುಮೀಲೆ ಕೇಳತೊಡಗಿದರು... ರಾಜಮಾತೆಯ ಸರೀರವು ಮೊದಲೇ ರುದ್ಯಾಪ್ಯದಿಂದ ಮುದುಡಿ ಮುಪ್ಪಡರಿಸಿಕೊಂಡಿತ್ತು. ಹೆಜ್ಜೆ ಹೆಜ್ಜೆಗೆ ಮುದುಡುತ್ತ ಮುದುಡುತ್ತ ಗುಬ್ಬಚ್ಚಿ ಆತು.. ಗೋಲಿ ಗಜ್ಜುಗವಾತು.. ಆಕೆಯ ಸರೀರದಿಂದ ರಾಜಸತ್ತೆಯ ಗತ್ತು ಗಝತ್ತು ವುತಾರ ಆಗೀ ಆಗೀ.. ಸಾಂಬವೀ ಯಂಬ ಪದವು ಪಂಕಜದೋಪಾದಿ ಯಲ್ಲಿ ಆಕೆಯ ಬೊಚ್ಚು ಬಾಯೊಳಗಿಂದ ವಡಮೂಡಿತು.. ಅರಳಿ ಹೊರ ಚಾಚಿತು.. ಸಾಂಬವೀss ತಾಯೇ... ನೀನು ನನ್ನ ಸರೀರವನ್ಯಾಕೆ ಬಗುಸಲಿಲ್ಲ... ನನ್ನ ವುಗುಳು ಹಿಡಿಯೋನ ಮಯ್ಯೋಳಗ ತೂರಿಕೊಂಡು ನೀನು ನಿನ್ನ ದಯವಸ್ತುವಕ್ಕೆ ದಕ್ಕೇನ ತಂದು ಬಿಟ್ಟೆಯಲ್ಲಾ.. ಪುತ್ತಲ ರಾಜ ವಮುಸಸ್ಥರು ನಿನಗೇನು ಕಡಿಮೆ ಮಾಡಿದ್ದರೇ.. ನಿನ್ನ ನಾಮಾವಳೇಲಿ ಮೊರಿಗೊಂದೊಂದು ಗುಡಿ ಕಟ್ಟಿಸಿರುಲಿಲ್ಲವಾ.. ವಂದೊಂದು ಬೇಯಿನಮರದ ಪೊಟರೇಲಿ ಕೋಲುಗಳನ್ನಿಟ್ಟಿರಲಿಲ್ಲವಾ.. ಪ್ರತಿ ನವರಾತಿರೇಲಿ ದೇವಿಪುರಾಣ ಮೋದಿಸುತ್ತಿರಲಿಲ್ಲವಾ.. ಹೋಗೀಗ ಕುಂಪಣಿ ಸರಕಾರದಿಂದಾಗಿ ಕಚ್ಚಿ ಬಾಯಿ ಆಡದಂಗಾಗಯ್ಕೆ, ಸರೆ ಸರೇ... ತುಪ್ಪದ್ದೀಪದ ಬದಲು ಹಳ್ಳೆಣ್ಣೆ ದೀಪ ಹಚ್ಚಲಕವಿ, ಸರೆ ಸರೇ.. ಪುರಾಣದ ಬದಲಿಗೆ ಭಜನೆ ಮಾಡಿಸಲಕವಿ, ಸರೇ ಸರೇ... ಅನ್ನ ಸಂತರುಪಣೇಯಾ. ಅಯ್ಯೋ ಅರಮನೆಯೋರಾದ ನಾವೇ ಮೂರೊಪ್ಪತ್ತು ವುಂಬಲಕ ಹತ್ತೀವಿ ತಾಯೇ.. ಯೀ ಪ್ರಕಾರವಾಗಿ