ಪುಟ:ಅರಮನೆ.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೨೭ ಸರಕಾರ ಬಂದ್ಯಾಕ ವದಗಿರೋ ಸಂಕಟಾನ ಪರಿಹಾರ ಮಾಡಬಾರದಂತೀನಿ..? ಯಂದು ಮುಂತಾಗಿ ರೋಧನ ಮಾಡಿದಳಂತೆ.. ಯದರೊಳಗ ಯಷ್ಟು ಖರೇಮೋ? ಯಷ್ಟು ಸುಳ್ಳೋ? ಆ ಭಗವಂತನಿಗೇ ಗೊತ್ತು? ಅದರ ಷಂತು ನಿಜ. ಯಿಡೀ ಪಟ್ಟಣದ ನಾಲಗೆ ಮ್ಯಾಲ ಕುಂಪಣಿ ಸರಕಾರ ಯಂಬ ಸಬುಧದ ಯೇಳು ಅಕ್ಷರಗಳು ಚಿಣಿದಾಂಡು ಆಟವನ್ನು ಆಡಲಾರಂಭಿಸಿದವು.. ಸರಕಾರ ಅರಮನೆಯ ಬೆನ್ನ ಮ್ಯಾಲ ಬರೆಯಳದರ ಸಾಂಬವಿಯ ಪಟ್ಟಣದ ಬೆನ್ನಮ್ಯಾಲ ಬರೆಯಳೆದಿರುವಳು. ಯೆವೆರಡಕ್ಕೂ ಸಂಬಂಧಯಿಲ್ಲ ದಿಲ್ಲ... ಕುಂಪಣಿ ಸರಕಾರಕ್ಕೆ ಅಹವಾಲು ಮುಟ್ಟಿಸುವುದಾದರೂ ಹೆಂಗೆ? ಅಲ್ಲಿಗೆ ಯಾರನ್ನು? ಯಾವ ರೀತಿ ಕಳುವುದು? ಅರಮನೆಯವರ ಪಯ್ಲಿ ಯಾರಾದರೊಬ್ಬರು ಹೋಗಿ ಸುದ್ದಿ ಮುಟ್ಟಿಸಲಿ ಯಂಬ ಪ್ರಶ್ನೆ ವುದ್ಭವಿಸಿದಾಗ.. ರಾಜಸತ್ತೆಯೇ ಯಿಲ್ಲವೆಂದಾಗ ಅವರು ರಾಜರು ಹಂಗಾತಾರೆ. ಆಳುವಿಕೆಯನ್ನು ಕಿತ್ತುಕೊಂಡಿರುವಾಗ ಅರಮನೆಯೊಳಗ ಅರಮನೆತನ ಯಲ್ಲಿಂದ ಬಂದೀತು..? ಅವರೂ ನಮ ತಮ್ಮಂಗ ಮಾಮೂಲು ಮನುಷ್ಯರು ಯಂಬ ಜವಾಬೂ ತೇಲಿ ಬಂತು. ರಾಜಪರಿವಾರದ ಮಂದಿಗಳೆಂಬುವ ಕಾಳೊರಗಗಳ ಬಾಯೊಳಗ ಅವುಸದಕ ಬೇಕೆಂದರೂ ವಂದಾದರೂ ಯಿಲ್ಲ ಹಲ್ಲು.. ಬಲು ನಿತ್ರಾಣವಾಗಿರೋ ಅರಮನೆಗೆ ಯಾಕ ಅಂಬುವಿರಿ.. ಅದರದಕಃ ಮಸ್ತು ಆಗಯ್ತಿ.. ಅದನು ಅದರ ಪಾಡಿಗೆ ಬಿಟ್ಟು ಮುಂದಿನದನ್ನು ಯೋಚನೆ ಮಾಡುವುದು.. ಅಚ್ಚ ಕಡೇಕ ಹಿರೀಕನೂ ಅಲ್ಲದ, ಯಿಚ್ಚೆ ಕಡೇಕ ಕಿರೀಕನೂ ಅಲ್ಲದ ನಡುಲ ವಯಸ್ಸಿನ ಗಣುಮಗ ಅಂದಾಡಿದ್ದು ಯಲ್ಲಾರಿಗೂ ಪಾಡನ್ನಿಸಿತು... ಮದ್ದು ಅರೆಯೋರ ಮೋಣಿಯೊಳಗವರಿವರು ಆಡಿದ ಮಾತು ಅದೆಂಗ ತೆವಳಿಕೋತ ಹೋಗಿ ಅರಮನೆಯ ಕಿವಿ ಮೂಗಿತೋ? ಅಯ್ಯೋ ತನ ದುರವಸ್ತೆಯೇ ಯಂದು ಮಲನ ಮರುಗುತಲಿದ್ದ ಅರಮನೆಯೊಳಗೆ ಪ್ರಜೆಗಳು ತನ್ನನ್ನು ಯಾತಕ್ಕೂ ಕರಿತಾ ಯಿಲ್ಲವಲ್ಲಾ ಯಂದು ರಾಜಮಾತೆ ಭದ್ರವಾಂಬೆಯು ಕಲ್ಲಾವುಲ್ಲಿಯಾಗಿಬಿಟ್ಟಳು. ಯೀ ಯಿಳಿಕೆ ವಯಸ್ಸಿನಲ್ಲಿರೋ ನೀನು ಯಾಕ ಮರ ವುಸಾಬರೀನ ಮಮ್ಮಿ ಮ್ಯಾಲ ಹಾಕ್ಕೋತಿ ಯಂದು ಸೂರು ಯಷ್ಟು ಗಲಗಲಾಂದರೂ.. ಅದೆಂಗ ಅರಮನೆಯಿಂದ ಹೊರಬಿದ್ದಳೋ? ಯಲವೋ ಅಡವೆಜ್ಜ ನೀನು ಬಾ.. ಜಡೆಪ್ಪ ತಾತ ನೀನು ಬಾ ಯಂದು ಅದೆಂಗ ಕೂಗಿಕರೆದಳೋ? ವಟ್ಟಿನಲ್ಲಿ ಚಾವಡಿಯಲ್ಲಿ ನಾಕುಮಂದಿ ಹಿರೀಕರು ಸುತ್ನಾಕಡಲಕಿಂದ ಬಂದು