ಪುಟ:ಅರಮನೆ.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅರಮನೆ

೧೨೯


ಬಾಬತ್ತು ಅರಮನೆ ನೋಡಿಕೋತದ.. ನಾನಿನ್ನು ಹೊಂಡುತೀನಿ” ಯಂದು
ಕಟ್ಟೆಯಿಂದ ಯಿಳಿದು ಅದೇ ತಾನೆ ಕಾಮಗಾರಿಯಾಗಿದ್ದ ಡೋಲಿ ವಳಗೇರಿ
ಕೂತಳೆಂಬಲ್ಲಿಗೆ.. ಮಂದಿ ಕಡೇಲಕಿಂದ ತಲಾ ವಂದೊಂದು ಮಾತುಗಳು
ಕೂರ್‍ದಸೆಯೋಪಾದಿಯಲ್ಲಿ ಅರಮನೆ ಕಡೇಕ ಮುಖ ಮಾಡಿದ್ದ ಆಕೆಯ ಕಿವಿ
ತಮಟೆಯನ್ನು ಘಾಸಿಗೊಳಿಸಿದವೆಂಬಲ್ಲಿಗೆ, ಡೋಲಿಗೆ ಯದುರಾಯ್ದ
ಗಂಟಲಯ್ಯನು “ಯಂಥಾ ಹುಚ್ಚೆಣುಮಗಳದೀ ಯವ್ವಾ. ಸಾಂಬವಿ ಪ್ರವೇಸ
ಮಾಡಿರೋ ಯೀ ಪಟ್ಟಣದೊಳಗ ನೀನು ಡೋಲಿ ವಳಗೆ
ಹೊಂಟಿರುವಿಯಲ್ಲಾ.. ವುಪ್ಪರಿಗೆ ಯೇರುತೀಯಲ್ಲಾ.. ನಿನಗಿನ್ನು ಬುದ್ದಿ
ಬರಲಿಲ್ಲಾ..” ಯಂದು ಮುಂತಾಗಿ ಹಾಡತೊಡಗಿದ ಯಂಬಲ್ಲಿಗೆ..
ಯೀ ಪ್ರಕಾರವಾಗಿ ಅರಮನೆಯ ಮೇಟಿಗೂಟವು ರಾಜಮಾತೆ
ಭಯಮಾಂಬೆಯ ರೂಪದಲ್ಲಿ ಅತ್ತ ಹೋಗುತ್ತಲೆ, ಯಿತ್ತ ಮಂದಿಗೆ ಮಂದಿ
ಸೇರಿ ಪರಿಶೆ ನೆರೆಯಿತು. ಕಯ್ಯ ಸಂಗನೆ, ಬಾಯಿ ಸಂಗನೆ, ಅಂಗ ಸಂಗನೆಗಳನ್ನು
ಅರ ಮಾಡಿಕೊಳ್ಳಬಲ್ಲಂಥವರ ಕಾರ್ ಯಾರಾರ ಅಂತಸ್ತಿಗನುಗುಣವಾಗಿ ಹೆಂಗ
ನಿಲ್ಲಬೇಕು, ಹೆಂಗ ಬಿಡಬೇಕು ಯಂಬಂಥವರ ಹುಡುಕಾಟದ ಕಾವ್ಯ ಧಯರ,
ಯಕ್ತಿಗತ ಸ್ವಾಭಿಮಾನವುಳ್ಳಂಥವರ ಹುಡುಕಾಟದ ಕಾರ್ ಗಂಟೆ ಜಾಗಟೆ
ಭಾರಿಸಿದಂತೆ ಸ್ಪುಟವಾಗಿ ಮಾತಾಡಬಲ್ಲಂಥವರ ಹುಡುಕಾಟದ ಕಾರ
ಸಮಯಕ್ಕನುಸಾರವಾಗಿ ಮಾತ್ರುಭೂಮಿಗಾಗಿ ಸೊಯಂ ಬಲಿದಾನ
ಮಾಡುವಂಥವರ ಹುಡುಕಾಟದ ಕಾರ, ನಾನು ಹೋಡುತೀನಿ, ತಾನು
ಹೋಡುತೀನಿ ಯಂದು ಮುಂದೆ ಬಂದವರ ದಹ್ಹಿಕಾಂಗ, ಮಾನಸಿಕ
ನ್ಯೂನತೆಗಳನ್ನು ಪತ್ತೆ ಹಚ್ಚಿ ವಜಾ ಮಾಡುವ ಕಾರ ಯೇಕ ಪ್ರಕಾರವಾಗಿ
ಆರಂಭವಾಯಿತು. ಯುದ್ಧಗಳಲ್ಲಿ ಭಾಗವಹಿಸಿ ರಣರಂಗದ ಮರುಮ
ಬಲ್ಲಂಥವರ ಮನೆಗಳಿಗೆ, ಯುದ್ಧಗಳಲ್ಲಿ ಭಾಗವಹಿಸಬೇಕೆಂಬ
ರಣೋತ್ಸಾಹವುಳ್ಳಂಥವರ ಮನೆಗಳಿಗೆ ಯಡತಾಕೀs ಯಡತಾಕಿದ
ಪರಿಣಾಮವಾಗಿ ಹಿರೀಕರ ಅಂಗಾಲೊಳಗ ಆಣೆಗಳು ವುಲ್ಬಣಗೊಂಡವು.
ಯಿರೋನೊಬ್ಬ ಮಗನರಪ್ಪಾ ಯನ್ನುವ ತಂದೆ ತಾಯಿಗಳು, ಯಿರೋನೊಬ್ಬ
ಗಂಡನರಪ್ಪಾ ಯನ್ನುವ ಹೆಂಡಂದಿರು, ಯಿರೋನೊಬ್ಬ ಅಣ್ಣನರಪ್ಪಾ ಯನ್ನುವ
ತಮ್ಮಂದಿರು, ಯಿರೋನೊಬ್ಬ ತಮ್ಮನರಪ್ಪಾ ಯನ್ನುವ ಅಣ್ಣಂದಿರು,
ಯಿರೋನೊಬ್ಬ ಪ್ರಿಯತಮನರಪ್ಪಾ ಯನ್ನುವ ಪ್ರಿಯತಮೆಯರು, ಯಿರೋನೊಬ್ಬ
ಅಳಿಯನರಪ್ಪಾ ಯನ್ನುವ ಮಾವಂದಿರು, ಹಿಂಗs ಮೋಡೋಣಿಗೊಂದು