ಪುಟ:ಅರಮನೆ.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೬೫ ಸಿವನೇ.. ಪಟ್ಟಣಸೋಮಿಗಳು ತಮಗೆ ಫಲಾನಯಂಥ ಕಡೇಕ ಮೋಬಯ್ಯನ ಸರೀರವು ಬೀಡು ಬಿಟ್ಟಯ್ಕೆ ಯಂದು ಸಾವಾಸಯ್ಯ, ವನುವಾಸಯ್ಯರು ಸುದ್ದಿ ಮುಟ್ಟಿಸಿದಲಾಗಾಯ್ತು ಪ್ಲಾ... ಅದು ಆ ಕಡೇಲಿಂದ ಬರಲಿ, ಯಿದು ಯೀ ಕಡೇಲಿಂದ ಬರಲಿಯಂದು ತಲಾವಬ್ಬೊಬ್ಬರು ನೂರು ಜೊತೆ ಕಾಲು, ನೂರು ಜೊತೆ ಕಯ್ಯಗಳನ್ನು ಮುಡಕೊಂಡು ಬಿಟ್ಟಿದ್ದರು ಹಾಂ, ಸಾಂಬವಿಯು ಮೋಬಯ್ಯನ ಸರೀರವನ್ನು ಪುಷ್ಟಕ ಮಿಮಾನ ಮಾಡಿಕೊಂಡು ಸೊರಗದ ಕಡೇಕ ಹೋಗಿದ್ದಿರಬೌದೆಂದೇ ತಾವೆಲ್ಲ ನಂಬಿದ್ದ ಪಟ್ಟಣದ ಭೋಪಾಲು ಮಂದಿ ನಂಬುಗೆ ಮತ್ತು ಅಪನಂಬುಗೆಗಳ ನಡುವೆ ಜೋಕಾಲಿ ಆಡುತಲಿದ್ದರು ಪ್ಲಾ. ಸಾವಾಸಯ್ಯ, ವನುವಾಸಯ್ಯಂದಿರನ್ನು ಪರಾಂಬರಿಸುತ್ತ ಯೇನು ಕಂಡಿರಿ? ಯೇನು ಬಿಟ್ಟಿರಿ? ಅಲ್ಲಿ ಮೋಬಯ್ಯನ ಸರೀರ ದೊರಕಲಿಲ್ಲಾಂದರೆ ನಿಮ್ಮನೂರ ಮಂದಿ ವುಳಗೊಡುವರೇನು? ಯಂದು ಗತ್ತು ಹಾಕತೊಡಗಿದರು. ಯೀ ಸೋದರರೀಲ್ವರು ಸುಳ್ಳು ಹೇಳಿರಲಿಕ್ಕಿಲ್ಲ ಯಂಬ ಬಲವಾದ ನಂಬಿಕೆಯಿಂದ.... ರೇಳು ಲೋಕಗಳ ಸಂಭರವು ತುಂಬಿದ ಪರಿಣಾಮವಾಗಿ ಕುದುರೆಡವು ಪಟ್ಟಣವು ವಂದು ಲಕ್ಷ ಕಣ್ಣುಗಳನ್ನು ಮುಡಿದು ಪಿಳಿಪಿಳಿಗುಟ್ಟಲಾರಂಭಿಸಿತು, ಯರಡು ಲಕ್ಷ ಕಯ್ಯಕಾಲು ಗಳನ್ನು ಮುಡಕೊಂಡು ಚಲನೆಗೆ ಹಾತೊರೆಯಲಾರಂಭಿಸಿತು, ವಂದು ಲಕ್ಷ ಬಾಯಿಗಳನ್ನು ಮುಡಕೊಂಡು ಮಾತಾಡಲಾರಂಭಿಸಿತು. ನೂರು ಗಾವುದುದ್ದದ ರೆಕ್ಕೆಗಳನ್ನು ಮುಡಕೊಂಡು ಕುಂತಳ ಸೀಮೆ ವುದ್ದಗಲಕ್ಕೂ ಹರಡಲಾರಂಭಿಸಿತು. - ಆ ಕಡೇಲಿಂದ ಹಲಗೆ, ತಮ್ಮಟೆ, ಡೊಳ್ಳು ರುಮ್ಮಿ, ಸೊನಾಯಿ, ಬಾಜಾಭಜಂತ್ರಿಗಳ ನಾದ ಪ್ರವಾಹದೊಡನೆ ಆಗಮಿಸಿದ್ದು ತಡ ಆಗಲಿಲ್ಲ. ಮನೆಮನೆಯಿಂದ ಮುತ್ತಯೇರು ಕಳಸ ಹಿಡಕೊಂಡು ಹೊರ ಬಿದ್ದದ್ದು ತಡ ಆಗಲಿಲ್ಲ. ಮೋಬಯ್ಯನ ಪಾದಗಳು ನೆಲ ಸೋಂಕದಂತೆ ಮಾಡಿ ಕರೆತರುವ ಸಲುವಾಗಿ ಅಯಿವತ್ತೊಂದು ಮಂದಿ ಮಡಿವಾಳರು ನೂರಾರು ಜರತಾರಿ, ಪೀತಾಂಬರಿ ಸೀರೆಗಳನ್ನು ತಮ್ಮ ತಮ್ಮ ಹೆಗಲ ಮ್ಯಾಲ ಯಿಳಿಬಿಟ್ಟುಕೊಂಡು ಸಜ್ಜಾಗಿ ಬಂದದ್ದು ತಡ ಆಗಲಿಲ್ಲ. ಯೇಳೆಂಟು ದೂರುಗಳ ನೂರೆಂಟು ಜೋಗತೇರು ಚವುಡಿಕೆಗಳನ್ನು ಭಾರಿಸೂತ ವುದೋ ವುದೋ ಯಂದು ವುದ್ದಾರ ತೆಗೆಯುತ್ತ ಬಂದದ್ದು ತಡ ಆಗಲಿಲ್ಲ.