ಪುಟ:ಅರಮನೆ.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೪ ಅರಮನೆ ಸಾಹೇಬನು ಆಗಾಗ್ಗೆ ಬೀರುತಲಿದ್ದ ವಾರೆಗಣ್ಣ ನೋಟವನ್ನು ಯದುರಿಸಲಿಕ್ಕಾಗದೆ ಅವರು ತಮ್ಮ ತಮ್ಮ ಮುಖಗಳನ್ನು ಮತ್ತುವುದೂ, ಯಿಳಿಸುವುದೂ ಮಾಡುತಲಿದ್ದರು. ಸದ್ಯಕ್ಕೆ ಅವರಾರೂ ನಾಗಿರೆಡ್ಡಿಯಿಂದ ಪ್ರಾಣಾಪಹರಣಕ್ಕೆ ತುತ್ತಾಗಿರಲಿಲ್ಲ. ಅದು ಅವರವರ ಹೆಂಡರ ಪುಣ್ಯ ಸತ್ತ ಮ್ಯಾಲ ಸಿರಿಸಂಪತ್ತನ್ನ ಸಂಗಾಟ ವಯ್ಯಾರ ಯಂದು ತಮ್ಮ ಗಂಡಂದಿರನ್ನು ತರಾಟೆಗೆ ತೆಗೆದುಕೊಳ್ಳುವ ಅವರವರ ಹೆಂಡಂದಿರ ನಾಲಗೆಗಳ ಪುಣ್ಯ. ತಮ್ಮ ಪಯ್ಕ ವಂದಿಬ್ಬರು ತಮ್ಮ ಗಂಡಂದಿರುಗಳಿಗೆ ಗೊತ್ತಾಗದಂತೆ ಮಾರುಯೇಸದಲ್ಲಿ ಬಂದಿದ್ದಂಥ ನಾಗಿರೆಡ್ಡಿಯನ್ನು ಯಣ್ಣಾ ಯಂದು ಕರೆದು ಮಂಗಳಾರತಿ ಯತ್ತಿದವರುಂಟು, ದೀಪಾರತಿ ಯ ದವಸ ದಾನ್ಯವು ತುಂಬಿದ ಅವುಗಳನ್ನು ಆಪದ್ಭಾಂದವ ರೆಡ್ಡಣ್ಣಗೆ ತಪ್ಪಿಸಿದವರುಂಟು, ತಾವೇ ಮುಂದೆ ನಿಂತು ಗಂಜಿ ಕೇಂದ್ರಗಳನ್ನು ತೆರೆದು ದಾನ ಧರುಮವ ಮಾಡಿದವರುಂಟು. ಯಿಂಥ ವಾತ್ಸಲ್ಯಮಯಿ ಅಕ್ಕತಂಗೇರು ಸದರಿ ಪ್ರಾಂತದ ಪ್ರತಿಯೊಂದು ಮನೆಯಲ್ಲಿರುವುದರಿಂದಾಗಿ ನಾಗಿರೆಡ್ಡಿ ತಮ್ಮ ಕುಂಪಣಿ ಸರಕಾರದ ವಸವಾಗುತ್ತಿಲ್ಲ. ಸದರಿ ಪ್ರಾಂತದ ಪ್ರತಿಯೊಂದು ದೂರಿನ ಬಡಬಗ್ಗರು ಆ ಮಾನವ ರೂಪೀದೇವರ ಸುಳಿವು ಕೊಟ್ಟಲ್ಲಿ ರವುರವ ನರಕ ಪ್ರಾಪ್ತವಾಗುತ್ತದೆ ಯಂದು ಹೇಳುತ್ತಿರುವ ಪರಿಣಾಮವಾಗಿ ನಾಗಿರೆಡ್ಡಿಯು ಅಜೇಯ ನಾಗಿರುವನು. ಬಡಬಗ್ಗರೆಂದರ ಬಿದ್ದು ಸಾಯುತಲಿರುವ ಅವಯ್ಯನು ಯಾರೊಬ್ಬರಿಗಾರ ಪ್ರಾಣಾಪಾಯ ಮಾಡಿರುವುದುಂಟಾ? ಕಾಲು ಕಚ್ಚಿ ತೆಗೆದಿರುವುದುಂಟಾ? ವಾಕರಿಕೆ ಮಾತಾಡಿರುವುದುಂಟಾ? ಬ್ಯಾಸರಿಕ ಮಾತಾಡಿರುವುದುಂಟಾ? ಅವರ ಮನೆಯ ವಡವೆ ವಸ್ತವ ತಂದಿವರ ಮಯ್ಯ ಮ್ಯಾಲ ಹಾಕಿ ಬಡಮಕ್ಕಳ ಮದುವಿ ಮಾಡಿರುವುದೊಂದು ಅಪರಾಧವಾ? ಪ್ರಾಮಸರಿ ನೋಟುಗಳನ್ನು ಜುಲುಮಿ ಮಾಡಿ ತಿಜೋರಿಯಿಂದ ಕಿತ್ತು ಸುಟ್ಟಿರುವುದು ಅಪರಾಧವಾ? ಹಸಗೊಂಡ ಹೊಟ್ಟೆಗಳಿಗೆ ಬಾನ ನೀಡಿರುವುದು ಅಪರಾಧವಾ? ಮುತ್ತಯ್ಡತನವನ್ನು ಕಾಪಾಡಿರುವುದು ಅಪರಾಧವಾ? ಕಣ್ಣೀರೊರೆಸಿರುವುದು ಅಪರಾಧವಾ? ತನ್ನ ಸೀಮಂತಿಕೆಯನ್ನು ಬಡಬಗ್ಗರಿಗೆ ಹಂಚಿಕೊಟ್ಟಿರುವುದು ಅಪರಾಧವಾ? ದುಡಿದುಂಬ ಬೇಕೆಂದು ತಾನು ತನ್ನ ಹೆಂಡರು ಮಕ್ಕಳಿಗೆ ಹೇಳಿರುವುದು ಅಪರಾಧವಾ? ಯಾತಕ್ಕಂತ ಅಧಿಕಾರಿಗಳು ನಾಗಿರೆಡ್ಡಿನ ಹಿಡಿದು ಮರಣದಂಡನೆ ಗುರಿಪಡಿಸಬೇಕೆಂದು ಕುಂಪಣಿ ಸರಕಾರದ ಮಾಲ ವತ್ತಡ