ಪುಟ:ಅರಮನೆ.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೮ ಅರಮನೆ ಕಟ್ಟಿ ಕೆಡವುತಲಿದ್ದನು..... ಆತನ ವಂದೊಂದು ಮಾತು ಕೇಳಿ ಮಂದಿ ಅಡಲ್ಲಾಗಿ ಹೋತ.. ಮಾನುಭಾವ ಮೋಬಯ್ಯನ ಸರೀರದ ನಾಡಿ ಬಡಿತಕ್ಕೆ ದೇವಿ ಭಾಗವತದ ಹೋಲಿಕೆ ಮಾಡುತಯ್ಕೆ.. ಆತನ ವುಸುರಾಟಕ ಸುಳುದಾಡುವ ತಂಗಾಳಿಯ ರೂಪ ಕಲ್ಪಿಸುತಯ್ಕೆ.. ಅವಯ್ಯನ ಸರೀರದ ಪುಣ್ಯಬಲದಿಂದಾಗಿ ರೋಗ ರುಜಿಣ, ಜಡ್ಡು ಜಾಪತ್ತು, ಭೂತ ಪಿರೇತ ಪಿಚಾಚಿಗಳು ಹೆದರಿ ದೂರ ಸರಕಂತವ ಯಂದು ತಮ್ಮಟಕ ತಾವೆಭಾವನೆ ಮಾಡತಯ್ಕೆ. ಆ ಸರೀರದ ತೊಟ್ಟಿಲೊಳಗೆ ತಮ್ಮ ಪಟ್ಟಣ ಕೋಸಿನೋಪಾದಿಯಲ್ಲಯ್ಕೆ ಯಂದಂದರಗಳಿಗೆ ತರುವಾಯು ಅಲಲಾ ತಮ ಪಟ್ಟಣದ ಸವುಭಾಗ್ಯಾವೇ.. ಅಂದು ಸಾಮಾನ್ಯ ದಿವಸವಾಗಿರಲಿಲ್ಲ.. ಅಂದು ವುದಿಸಿದ ಸೂರಪರುಮಾತುಮನು ಸಾಮಾನ್ಯ ಸೂರಾಮನಾಗಿರಲಿಲ್ಲ.. ಅಂದು ಆಕಾಸದೊಳಗೆ ಹಾರಾಡುತಲಿದ್ದ ಪಕ್ಷಿಗಳು ಸಾಮಾನ್ಯ ಪಕ್ಷಿಗಳಾಗಿರಲಿಲ್ಲ.. ಅಂದು ಬೀಸುತಲಿದ್ದ ಗಾಳಿ ಸಾಮಾನ್ಯ ಗಾಳಿಯಾಗಿರಲಿಲ್ಲ... ಅಂದು ಸಾವುರ ಸಾವುರ ಸಂಖ್ಲಿ ನೆರೆದಿದ್ದ ಮಂದಿ ಸಾಮಾನ್ಯ ಮನುಷ್ಯರಾಗಿರಲಿಲ್ಲ. ಅಂದಿನ ಸಂವತ್ಸರ ಸಾಮಾನ್ಯ ಸಂವತ್ಸರ ಆಗಿರಲಿಲ್ಲ.. ಅಂದಿನ ನಕ್ಷತ್ರವು ಸಾಮಾನ್ಯ ನಕ್ಷತ್ರವು ಆಗಿರಲಿಲ್ಲ. ಅಂದಿನ ಗಳಿಗೆ ಸಾಮಾನ್ಯಗಳಿಗೆ ಆಗಿರಲಿಲ್ಲ. ಅಂದಿನ ಸನ್ನಿವೇಶವು ಸಾಮಾನ್ಯ ಸನ್ನಿವೇಶವು ಆಗಿರಲಿಲ್ಲ.. ಅಂದಿನ ಪಟ್ಟಣವು ಸಾಮಾನ್ಯ ಪಟ್ಟಣವಾಗಿರಲಿಲ್ಲ...... ಅವ್ವಾ ಯಂಬುವ ದಯಾಸಾಗರವು ಕುದುರೆಡವು ಪಟ್ಟಣ ಯಂಬುವ ಮಣ್ಣಿನ ಬೋಗುಣಿಯೊಳಗೆ ತುಂಬಿದ ಲಗಾಯ್ತು ಯಾರೊಬ್ಬರು ರೆಪ್ಪೆಗೆ ರೆಪ್ಪೆ ಅಂಟಿಸಿ ನಿದುರೆ ಮಾಡದಾದರು. ನೂರೊಂದು ವದಕನಗಳನ್ನು ತಮ್ಮ ತಮ್ಮ ಮಯ್ಯ ಮಾಲೆಳೆದುಕೊಂಡರು. ಸಾಂತಿ ಪೂಜಾದಿಗಳಿಗೆ ಕರಿಯಗಂಬಳಿಗಳನ್ನು ಜೋಡಿಸುತ್ತಿದ್ದವರೆಷ್ಟೋ, ವಸೀಕರಣ, ಭೂತೋಚ್ಚಾಟನೆ ಕಾರ ಕರುಮಗಳಿಗೆ ಬಿಳಿಗಂಬಳಿಗಳನ್ನು ಜೋಡಿಸುತ್ತಿದ್ದವರೆಷ್ಟೋ? ಮೋಬಯ್ಯನ ಯಡ ಬಲ ಸುಳುದಾಡುತಲಿದ್ದ ಗಂಟಲಯ್ಯನ ಬಾಯಿಗಂತೂ ಪುರುಸೊತ್ತಂಬುದಿರಲಿಲ್ಲ. ಬೆನ್ನ ಹರಿಹರ ರುದ್ರಾದಿಗಳಿಂದಲೂ, ಸಪ್ತರುಷಿ, ದೇವದಾನವ ಕಿನ್ನರ ಕಿಂಪುರುಷ, ಗಂಧವ್ಯ ಭೂಚರ ಖಚರ ಜಲಚರಗಳಿಂದ ಪೂಜೆ ಪುನಸ್ಕಾರ ಮಾಡಿಸಿಕೊಂಡಂಥವಳಾದ ದೇವಿಯು