ಪುಟ:ಅರಮನೆ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xxiii ಬೇಲ್ದಾರನ ಭಿನ್ನಹ ಅರಮನೆ ಐತಿಹಾಸಿಕಮೋ, ಪೌರಾಣಿಕಮೋ, ಸಾಮಾಜಿಕಮೋ ನನಗಿನ್ನು ಸ್ಪಷ್ಟವಾಗಿಲ್ಲ. ಆದರೆ ಒಂದಂತೂ ನಿಜ ಈ ಮೂರರ ಹೊರತಾಗಿ ನಾಲ್ಕನೆಯ ಆಯಾಮಮೂಉಂಟು. ಅದು ಇನ್ನೂ ನನ್ನ ಅರಿವಿಗೆ ನಿಲುಕಿಲ್ಲ. ಬಾಣಂತಿಯ ಹೆರಿಗೆ ನೋವು ಕೂಸಿನ ಸಮಕ್ಷಮ ಗೌಣ.. ಆದರೂ ನಾಲ್ಕು ಮಾತುಗಳನ್ನು ಪೀಠಿಕಾ ರೂಪದಲ್ಲಿ ಹೇಳಿ ಕೊಂಡಲ್ಲಿ ಕಾದಂಬರಿಯ ಗ್ರಹಿಕೆ ಸರಳವಾದೀತು. ಕುಂವೀ ನಾನು ಸ್ವಭಾವತಃ ಇತಿಹಾಸದ ವಿದ್ಯಾರ್ಥಿ, ಇತಿಹಾಸಕ್ಕೆ ಸಂಬಂಧಿಸಿದ್ದೆಲ್ಲವನ್ನೂ ಓದುತ್ತ ಬಂದಿರುವೆನು. ಜೊತೆಗೆ ಕೋಟೆ, ಗುಡಿ, ಗುಂಡಾರ, ಶಾಸನ, ವೀರಗಲ್ಲು, ಮಾಸ್ತಿಗಲ್ಲುಗಳನ್ನು ನೋಡುವ ಸಲುವಾಗಿ ಅನೇಕ ಊರುಗಳನ್ನು ಸುತ್ತಿರುವೆನು, ಅರಮನೆ ಎಂಬ ನಾಲ್ಕಕ್ಷರದ ಮಾಯಾವಿನಿ ಶಬ್ದದಿಂದ ಪರವಶ ಗೊಂಡಿರುವೆನು. ಅರಮನೆ ಒಳಹೊರಗಿನ ವಿದ್ಯಾಮಾನಗಳನ್ನು ಸೃಜನಶೀಲವಾಗಿ ಕಲ್ಪಿಸಿಕೊಳ್ಳುವುದೇ ಒಂದು ಸೊಗಸು.ಕಲ್ಪನೆ ಜ್ಞಾನಕ್ಕಿಂತ ಶಕ್ತಿಶಾಲಿ ಎಂಬ ಮಾತು ಅಕ್ಷರಶಃ ನಿಜ. ಅಸ್ತಿತ್ವದಲ್ಲಿರುವ ನಯನ ಮನೋಹರವಾದ ಅರಮನೆಗಳಿಗಿಂತ ಅಂತರ್ಧಾನವಾಗಿರುವ ಚಿಕ್ಕಪುಟ್ಟ ಪಾಳ್ಯಪಟ್ಟುಗಳ ಅಗೋಚರ ಅರಮನೆಗಳ ಹೆಚ್ಚು ಸುಂದರ. ಇಂಥ ಅರಮನೆಗಳ ಕುರುಹುಗಳು ಜರಿಮಲೆ, ಗುಡೇಕೋಟೆ, ರಾಯದುರ್ಗ, ಹರಪನಹಳ್ಳಿ ಸೇರಿದಂತೆ ಅನೇಕ ಕಡೆ ಇರುವವು. ಅವುಗಳನ್ನು ನೋಡುವುದು, ಅವುಗಳಿದ್ದ ಕುರುಹುಗಳ ಮೇಲೆ ತಿರುಗಾಡುವುದು ದಯನೀಯ ಸ್ಥಿತಿಯಲ್ಲಿರುವ ಅವುಗಳ ವಾರಸುದಾರರೊಂದಿಗೆ ಮಾತಾಡುವುದು ರೋಮಾಂಚನದ ಸಂಗತಿ, ಹೇಳುವುದನ್ನೆಲ್ಲ ಹೇಳಿಯಾದ ಮೇಲೆ ಕೇಳುವುದನ್ನೆಲ್ಲ ಕೇಳಿಯಾದ ಮೇಲೆ ಕೇವಲ ಪುಡಿ ಕಾಸಿಗಾಗಿ ಕೈ ಚಾಚುವ ಅವರನ್ನು ನೋಡಿದರೆ ಎಂಥವರಿಗೂ ಮರುಕ ಹುಟ್ಟದೆ ಇರದು. ಕೂಲಿ ಕುಂಬಳಿ ಮಾಡಿ ಹೊಟ್ಟೆ ಹೊರೆಯುತ್ತಿದ್ದರೂ ಕೆಲವು ರಾಜವಂಶಸ್ಥರು ರಾಜರ ಗತ್ತು ಗೈರತ್ತು ಬಿಟ್ಟಿಲ್ಲ. ಇದಕ್ಕೆ ಉದಾಹರಣೆ ಜರಿಮಲೆ ರಾಜರನ್ನೇ ತೆಗೆದುಕೊಳ್ಳೋಣ. ಈಗವರು ಇರುವುದು ಗುಡಿಸಿಲು, ಮಣ್ಣಿನ ಮನೆಗಳಲ್ಲಿ, ಭೂಮಿಹೀನರಾದ ಅವರೀಗ