ಪುಟ:ಅರಮನೆ.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೬

ಅರಮನೆ


ರುಥಾ ಆಗದ ವುಳಕೊಂಡಿದ್ದ ರಕ್ಕಸರ ನೆತ್ತರು ಮನುಷ್ಯ ರೂಪ ಪಡದು
ಪರಂಗಿ ಮಂದಿ ಆಗವರೈ... ಅವರು ಪ್ರಜೆಗಳ ಸುಖಸಾಂತಿಯನ್ನು ಅಪಹರಣ
ಮಾಡುತಲಿದ್ದಾರೈ... ಪರಂಗಿ ಮಂದಿ ಜಂಬೂದ್ವೀಪದ ನೆಲವನ್ನೆ ನಾಕಲಕ
ಹತ್ತಿರುವರೈ ಪ್ರಭುವೇ... ಯಂದು ಮುಂತಾಗಿ ನಾರದ ಮುನಿಯು ನೀಡಿದ
ಖೇದದ ನುಡಿಗಳನ್ನಾಲಿಸಿದ ಸಿವನು ನಾಗರಾಜನ ಕುರಿತು “ಯಲಯ್
ನಾಗರಾಜನೇsss ನೀನು ಯೀಗಿಂದೀಗಲೆ ಭೂಲೋಕಕ್ಕಧಿಕವಾಗಿರುವಂಥ
ಗಡೇಕಲ್ಲು ಗ್ರಾಮದೊಳಗೆ ಭೀಮಲಿಂಗಾರೆಡ್ಡಿ ಲಚುಮಮ್ಮ ಯಂಬ ದಂಪತಿಗಳ
ವುದರದರಲ್ಲಿ ಜೆನಿಸಿ, ನಾಗಿರೆಡ್ಡಿಯಂಬಭಿದಾನ ಧರಿಸಿ, ಲೋಕಕಂಟಕರಾಗಿರುವ
ಜಮೀಂದಾರರ ಯಿರುದ್ಧ ಪರಂಗಿ ಮಂದಿ ಯಿರುದ್ಧ ಹೋರಾಡತಕ್ಕದ್ದು
ಯಂದು ಆಗ್ನೆ ಮಾಡಿದನ್ಯೆ. ಅಗಿದ್ದು ನಾಗರಾಜನು, ತಮ್ಮ ಚಿತ್ತ ಮಾದೇವss..
ಆದರೆ ನಿನ್ನ ಚರಣ ಕಮಲ ಸೇವೆಯ.. ಯಂದು ಯಾಕುಲಚಿತ್ತನಾಗುತ್ತಿದ್ದಂತೆ
ಸಿವನು ನಾನು ಗಡೇಕಲ್ಲೊಳಗಿರುವ ಭೀಮಲಿಂಗೇಶ್ವರ ಲಿಂಗದೊಳಗೆ ವಸ್ತಿ
ಮಾಡುವುದಾಗಿ ಮಾತು ಕೊಟ್ಟನ್ಯೆ... ಆ ಸುರಲೋಕದ ನಾಗರಾಜನೇ ಯಿವತ್ತಿನ
ಬೊಬ್ಬಿಲಿ ಬಿರುದಾಂಕಿತ ನಾಗಿರೆಡ್ಡಿಯಯ್.. ಗಡೇಕಲ್ಲ ವುದ್ದವಲಿಂಗ
ಭೀಮಲಿಂಗೇಸ್ವರ ಸ್ವಾಮಿಯ ಪರಮ ಭಕುತನಯ್... ರಾತ್ರಿಹೊತ್ತು
ಭೀಮಲಿಂಗಯ್ಯನು ರೆಡ್ಡಿಯ ಸಂಗಾಟ ಚದುರಂಗದಾಟವನಾಡುತ್ತಾನೆಂಬ
ಸಂಗತಿ ಜನಜನಿತವೈ... ರೆಡ್ಡಿಯ ಕಯ್ತುತ್ತುಗಳನ್ನುಂಬುವನೆಂಬ ಪ್ರತೀತಿಯ್ಯೆ...
ಭೀಮಲಿಂಗಯ್ಯನ ದಯಯಿರುವನಕ ನಾಗಿರೆಡ್ಡಯ್ಯನ ವಂದೇ ರೋಮವನ್ನು
ಅಲುಗಿಸುವ ತಾಕತ್ತು ಯಾರಿಗೆ ತಾನೇ ಯಿರುವುದೈ...
ಅದೆಲ್ಲ ಅಲ್ಲೇಯಿರಲಿ, ಯಿದೆಲ್ಲ ಯಿಲ್ಲೇ ಯಿರಲಿ.. ಗುಂತಕಲ್ಲು ಪ್ರಾಂತದ
ಪಾಲಿಗೆ ಗಡೇಕಲ್ಲ ಭೀಮಲಿಂಗೇಶ್ವರ ಅಪರಾವತಾರವೇ ನಾಗಿರೆಡ್ಡಿಯು...
ಅಂಥಾತನನ್ನು ಹಿಡಿಯುವುದೆಂದರೇನು? ಅಂಥಾತನ ಜನಪ್ರಿಯತೆಯನ್ನು
ತಗ್ಗಿಸುವುದೆಂದರೇನು?
ಬಳ್ಳಾರಿಯ ಅಠಾರ ಕಛೇರಿವಳಗ ಬ್ರೂಸು, ಮ್ಯಾಕೂ, ಯಾಂಡಿಯೇ
ಮೊದಲಾದ ವುನ್ನತಾಧಿಕಾರಿಗಳಿಗೆ ನಾಗಿರೆಡ್ಡಿಯ ಅಜೇಯತನ ಕುರಿತು ಚಿಂತನ
ಮಂಥನ ನಡೆಸುತಲಿದ್ದ ಥಾಮಸು ಮನ್ರೋನನ್ನು ಮುನುಸೋಬಯ್ಯ ಕಂಡು
ಸಾಹೇಬರೇ ತಗೊಳ್ಳಿ ರಾಜಿನಾಮೆಯ” ಯಂದು ಯೇಳೆಂಟು ಪುಟಗಳ
ಕಡತವನ್ನು ಕೊಟ್ಟನು. ಅದರೊಳಗ ತಾನು ಬೊಬ್ಬಿಲಿ ನಾಗಿರೆಡ್ಡಿಯ