ಪುಟ:ಅರಮನೆ.pdf/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೩೩


ಜೀವನಾಧಾರವು.. ಪಕ್ಷಿಗಳೇ ಅವರಿಗೆ ಯಿದೇಸಿ ಯಿನಿಮಯವು..
ಆತುಮಮೊಂದರ ಮೂರು ಡಿಂಬಗಳಂತಿರುವ ಅವರು ಬ್ಯಾಟೆ ಆಡಲಕೆಂದು,
ಅಪರೂಪದ ಪಕ್ಷಿಗಳನ್ನು ಅರೆಜೀವ ಮಾಡಿ ಭೂಮಿಗೆ ಕೆಡವಲಕೆಂದು ನಸಿಗ್ಗೀಲೆ
ತಮ ಹಟ್ಟಿಯಿಂದ ಹೊರಟು ಬಂದಿದ್ದರು. ಪಕ್ಷಿ ಸಾಸ್ತರಗ್ನರಾದ ಅವರು,
ಪಕ್ಷಿಗಳ ಸೊರವನ್ನು ಅನುಕರಣೆ ಮಾಡುವಲ್ಲಿ ನಿಷ್ಣಾತರಾದ ಅವರು, ಪಕ್ಷಿ
ಸಗುನ ನಿಷ್ಣಾತರಾದ ಅವರು, ಅಗೋ ಅದಲ್ಲಿ ಅಮುತಾರ.. ಅದಾಗಿರುವುದಿಲ್ಲ,
ಯಿಗೋ ಯಿಲ್ಲಿ ಅಮುತಾರ ಯಿದಾಗಿರುವುದಿಲ್ಲ.. ಸಾಂಬಾರು ಕಾಗೆ
ಹದ್ದಾಗಿಬಿಡುತಯ್ತೆ.. ಕವುಜಗ ಕಾಗೆಯಾಗಿ ಮಾರ್ಪಾಡಾಗಿ ಬಿಡುತಯ್ತೆ...
ಕಾಡುಕೋಳಿ ಗುಬ್ಬೆಮ್ಮ ಆಗಿ ಪುಸಕ್ಕೊಂಡು ಹೋಗಿಬಿಡುತಯ್ತೆ.. ಯೀ ಮಾಯೆ
ಯಿವತ್ತು ಆರಂಭವಾಗಿರುವಂಥದ್ದಲ್ಲ.. ಬರೋಬ್ಬರಿ ವಾರೇಳು ದಿವಸಗಳಿಂದ
ಯಿಂಚು ಮಿಂಚು ಸಾಂಬವಿ ಕರಗಲ್ಲಿನ ಬಳಿ ವಸ್ತಿ ಮಾಡಿದಲಾಗಾಯ್ತು..
ಪಕ್ಷಿ ಮಾವುಸಯಿಲ್ಲದ ವಣಕೂಳನು ವುಂಡೂ ವುಂಡೂ ಅವರ ನಾಲಗೆಗಳು
ಬತಗೆಟ್ಟು ಹೋಗಿರುವವು. ನೆಂಜಿಕೊಳ್ಳಲಕ ವಂದೇ ವಂದು ಕವುಜಗದ
ಕಾಲೊಂದಿದ್ದಲ್ಲಿ ಆ ಸೊಗಸೇ ಬ್ಯಾರೆ. ತಾವು ಮಾಡೋ ಯತ್ನ ಪ್ರಯತ್ವಂಗಳನು
ಮಸ್ತು ಮಾಡುತಾವರೆ. ಆದರ ಸಿವ ಕಣ್ಣು ತಗಿತಾಯಿಲ್ಲ.. ಸಾಂಬವಿಯ
ಝಳ ಯಿಲ್ಲೆಲ್ಲ ತಗುಲಿದಂಗಿರುವುದು.. ತಾಯಿ ನೆಲ ಬಿಟ್ಟು ಯೇಳುವವರೆಗೆ
ಯಾರೊಬ್ಬರೂ ಮಾವುಸವನ್ನು ಕಣಸು ಮಣಸಿನಲ್ಲೂ ನೆನೆಯಕೂಡದೆಂದು
ಪಟ್ಟಣಸ್ವಾಮಿಗಳು ಹಾಕಿಸಿದ ಟಾಮುಟಾಮನು ಬಲಗಿವೀಲಿ ಕೇಳಿ ಯಡಗಿವಿ
ದ್ವಾರ ವದಲಿದ್ದರು.
ವದೊಂದು ಪಕ್ಷಿಯನ್ನು ಗ್ಯಾಪಿಸಿಕೊಂಡಾಗಲೆಲ್ಲ ನಾಲಿಗೆ ಮ್ಯಾಲ ಸುಟು
ಸುಟು ಕಡುತ. ಬಿಲ್ಲು ಹಿಡಕೊಂಡಿರುವ ಕಯ್ಯ ಬೆರಳುಗಳಲ್ಲೊಂದು ನಮೂನಿ
ಠೆವ್ವ ರೆವ್ವ ಕಡುತ.. ಹೆಜ್ಜೆ ಹೆಜ್ಜೆಗೊಂದೊಂದು ಹಿಡಿ ಹಿಡಿ ಜೋಲ್ಲು ಚೆಲ್ಲಾಡುತ
ಅಲೆಯಲಕ ಹತ್ತಿರುವರು ಆ ಜಾನುಮಲೆ ಅಡವಿಯೊಳಗ.. ವಂದೊಂದು
ಪ್ರಾಣಿಯೂ ಅಹಿಮುಸಾ ರೂತವನ್ನು ತಾಯಿ ಸಲುವಾಗಿ ನಿಷೆ«ಯಿಂದ
ಪರಿಪಾಲನೆ ಮಾಡುತಲಿದ್ದ ಜಾನುಮಲೆ ಅಡವಿಯೊಳಗ.. ಅಲೆದಲೆದು ಸುಸ್ತಾದ
ಅವರು ರೋಸಿ ತಾವಿನ್ನೇನು ಬಿಲ್ಲನ್ನೊಂದು ಕಡೇಕ, ಬಾಣವನ್ನೊಂದು ಕಡೆ
ವತಾ ವಗೆದು ತಾವಿನ್ನು ಮುಂದೆ ಬೇಟೆ ಆಡುವುದಿಲ್ಲ ಯಂದ ಘನ ಘೋರ
ಸಪಥ ಮಾಡಬೇಕೆನ್ನುವಷ್ಟರಲ್ಲಿ...