ಪುಟ:ಅರಮನೆ.pdf/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೪೩


ಸಂತರು, ಅವಧೂತರು ಧರುಮೋ ರಕ್ಷತಿ ರಕ್ಷೇಯೇತ್ ಯಂದು ಹೇಳುತ
ತಡವಿಕೊಂಡು ಮಾನವರ ಸೇವೆಯೇ ಮಾಧವ ಸೇವೆ.. ಧರುಮಕ್ಕ ನೀವೆಲ್ಲ
ಸರಣ ಹೋಗಿ.. ನಮಗss ರಾಜ್ಯಾಡಳಿತವನ್ನು ವಪ್ಪಿಸಿ, ನೆಮ್ಮದಿಯಿಂದ ಬಾಳಿರಿ
ಯಂದು ಕಲೆ ಬಿದ್ದಿದ್ದರೆಂಬಲ್ಲಿಗೆ ಸಿವಸಂಕರ ಮಾದೇವಾss ..
ಅತ್ತ ಕೂಡ್ಲಿಗಿ ಪಟ್ಟಣದೊಳಗ ಆದರ್ಸ ದಾಂಪತ್ಯ ಯೋಜನೆ
ಮೊದಮೊದಲಿಗೆ ಫಲಕಾರಿ ಯಾದದ್ದುಂಟು.. ಕೊನೆ ಕೊನೀಕೆ ಯಿಫಲವಾಗಲಕ
ಹತ್ತಿತ್ತು.. ಅದರ ರೂವಾರಿಯಾದ ರಾಯನು ಜೆನ್ನಿಫರಮ್ಮಗ ಮಾಡೋ ಯವಸ್ಥೆ
ಮಾಡಿ ರಜೆ ಚೀಟಿ ಹಿಡಕೊಂಡು ಯಡ್ಡವರ್ಡನ ಬಳಿಗೆ ಹೋದೊಡನೆ ಆ
ಸಾಹೇಬನು “ಯೇನರೀ ರಾಯರೇ.. ನೀವು ನಿಮ್ಮ ಗುಹಸ್ಥಾಶ್ರಮ ಧರುಮವನ್ನು
ನಿರ್ಲಕ್ಷೆ ಮಾಡಿರುವುದು ಸರಿಯೇನು? ನೀವು ತಾಮಸ ಆಹಾರ ಸೇವನೆ
ಮಾಡದವರಲ್ಲದಿದ್ದರೂ ತಾಮಸ ಸಂಬಂಧೀ ಯೋಚನೆಗಳನ್ನು ಯಶಸ್ವಿಯಾಗಿ
ಮಾಡುತ್ತಿರುವಿರೆಂಬ ಆಪಾದನೆಗಳು ಕೇಳಿಬರುತ್ತಿರುವವಲ್ಲಾ.. ಸದ್ಯಕ ನಿಮ್ಮ
ಆದರ್ಸ ದಾಂಪತ್ಯ ಯೋಜನೆಯನ್ನು ಸ್ಥಗಿತ ಮಾಡಬೇಕೆಂದಿರುವೆವು.. ಅದಕ
ಮೊದಲು ನೀವು ನಿಮ್ಮ ಯಿವಾಹಿತ ಪತ್ನಿಯನ್ನು ಕರೆದುಕೊಂಡು ಬಂದು
ಗ್ರುಹಸ್ಥರಾಗಬೇಕು” ಯಂದು ನಿರೂಪ ನುಡಿದನು. ಆತ ಹೇಳಿದ್ದರಲ್ಲಿ ಸುಳ್ಳು
ಮಿಸ್ರಿತ ಸತ್ಯವುಂಟು. ತಾನು ತನ್ನ ಕಣ್ಣುಗಳ ಮೂಲಕ, ಬಲಗಯ್ಯ ತುದಿ
ಬೆರಳುಗಳ ಮೂಲಕ ಗ್ರುಹಸ್ಥ ಧರುಮವನ್ನು ವುಲ್ಲಂಘನೆ ಮಾಡಿರಬಹುದೇ
ಹೊರತು... ವಾದ ಮಂಡಿಸಲಕಾಗದೆ ರಾಯನು ತನ್ನ ಮ್ಲಾನವದನ
ಸಾರುವಜನಿಕವಾಗಿ ಕಾಣಬಾರದೆಂಬ ಹಿನ್ನೆಲೆಯಲ್ಲಿ ಫಲಾನ ದಿವಸದಂದು
ಸೂರ್ಯೋದಯಕೂ ಪೂರುವದ ಬ್ರಾಮ್ಮಿ ಮೂರ್ತದ ಸಮಯದಲ್ಲಿ ಸದರಿ
ಪಟ್ಟಣದಿಂದ ತನ್ನ ಪತ್ನಿಯಿದ್ದಂಥ ಫಲಾನ ಮೂರಿನ ಕಡೇಕ ಪಯಣ
ಬೆಳೆಸಿದನೆಂಬಲ್ಲಿಗೆ..
ಯೀ ಸುದ್ದಿ ತಿಳಿದು ತಾಯಕ್ಕ ಅನಿರ್ವಚನೀಯವಾದ ಸಂಕಟವನ್ನು
ಅನುಭವಿಸದೆಯಿರಲಿಲ್ಲ. ಯಿವಾಹಿತನೂ, ಯೇದಸಾಸ್ತರ ಪಾರಂಗತನೂ,
ರಾಜನೀತಿ ನಿಪುಣನೂ, ಯೋಗಧ್ಯಾನ ಪ್ರಾಮಾಯಾಮಗಳ ಸಾಧಕನೂ,
ತೇಜಸ್ವಿಯೂ ಆದ ಅವಯ್ಯನ ಕುರಿತು ಯಾವುದ್ಯಾವುದೋ ಕನಸು ಕಂಡಿದ್ದಳು.
ಸತ್ಕರಿಸುವಾಗ ಪರೀಕ್ಷಿಸಲೆಂದೇ ಸ್ಪರ್ಷಿಸುತ್ತಿದ್ದುದುಂಟು, ಅವನು ರೋಮಾಂಚನ
ಗೊಳ್ಳುತ್ತಿದ್ದುದನ್ನು ನೋಡಿ ಪುಳಕಗೊಳ್ಳುತ್ತಿದ್ದುಂಟು, ಯಿನ್ನೂ ಯೀ ಯಿಷಯದಲ್ಲಿ