ಪುಟ:ಅರಮನೆ.pdf/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪೨

ಅರಮನೆ

ಕಡೇಲಿಂದ ಬರಲಿ.. ಆ ಸಾಹೇಬ ಬಂದು ನಮ್ಮ ಗುಡಿಸೊಳಗೆ
ಯೇಕಾಂಗಿಯಾಗಿ ವುಣ್ಣಲಿ.. ಯೇನಂತೀಯೋ ಗೆಳೆಯಾ?” ಯಂದು
ಹೇಳಿದನಂಬಲ್ಲಿಗೆ...
ಅತ್ತ ಹರಪನಹಳ್ಳಿ ಪ್ರಾಂತದೊಳಗೆ ಅರಾಜಕತೆ ವುಂಟಾಗಿದ್ದ ಮೂರುಗಳ
ಪ್ರಜೆಗಳನ್ನು ಯಲ್ಲಾಪ್ರಕೊರಚರಟ್ಟಿಯ ಜೋರಾಗ್ರೇಸರು ಅಲಾಯದವಾಗಿ
ಭೆಟ್ಟಿಯಾಗಿ ನಿಮ್ಮನಿಮ್ಮ ರಾಜರುಗಳಿಗಿಂತ ಯಷ್ಟೋ ಪಾಲು ವಾಸಿ ಅದೀವಿ..
ನಾವು ಮಾಡಿದ ಮತ್ತು ಮಾಡುತ್ತಿರುವ ಕಳುವು ಕಾರ್ಯೇವುಗಳಿಗೆ ವಂದು
ನ್ಯಾಯವುಂಟು.. ವಂದು ಧರುಮವುಂಟು.. ನಾವು ಕಯ್ಲಾಗದೋರಿಗೆ ಸಾಯ
ಮಾಡುತ ಬಂದೀವಿ.. ಅದಕ ನಿಮಗ ನಾವು ಸಾಯಾ ಮಾಡಬೇಕೆಂದದೀವಿ..
ನಮಗ ಯಾಕ ನೀವು ನಿಮ್ಮ ನಿಮ್ಮ ಅರಮನೆಗಳನ್ನು ತಪ್ಪಿಸಬಾರದು.. ನಮ್ಮ
ಆಡಳಿತ ನಿಮಗೆ ಸರಿ ಕಾಣಲಿಲ್ಲಾಂದರ ನಾವು ಬಿಟ್ಟು ಹೋಗಲಕ ಸಿದ್ದ,
ವಂದು ಅವಕಾಸ ಕೊಡಿರಿ ಯಿದರಾಗ ತಾರಾ ತಿಗಡಿ ಬಾರಾ ಯಿದ್ಯೆಯಿಲ್ಲ”
ಯಂದು ಅಂಗಲಾಚುತಲಿದ್ದದ್ದು ಹಳೆಯ ಸಂಗತಿ. ಗುಂಡಗತ್ತಿ ತುಂಬರಗುದ್ದಿ,
ಚಿರಸ್ತಳ್ಳಿ ಗ್ರಾಮಸ್ಥರು ರಾಜರ ಯೇಸದ ಕಳ್ಳರಿಗಿಂತ ಕಳ್ಳರನ್ನೇ ರಾಜರನ್ನಾಗಿ
ಮಾಡುವುದೇ ವಾಸಿಯಂದು ಯೋಚಿಸಿ “ಆಗಲಿ ಕನರಪ್ಪಾ' ಯಂದು ವಪ್ಪಿದ
ಪರಿಣಾಮವಾಗಿ ಲಾಗಯ್ಯನು ಗುಂಡಗತ್ತಿಯಯ ಸಿಮ್ಮಾಸನವನ್ನು ಲಾಗನಾಯಕ
ಯಂಬ ಹೆಸರಿನಿಂದಲೂ, ಅಗುಳಯ್ಯನು ತುಂಬರ ಗುದ್ದಿಯ ಲಟಗೂ
ಪುಟುಗೂ ಸಿಮ್ಮಾಸನವನ್ನು ಅಗುಳನಾಯಕ ಯಂಬ ಹೆಸರಿನಿಂದಲೂ,
ಕನ್ನನಾಯಕ ಚಿರಸ್ತಳ್ಳಿಯ ಸಿಲ ಸಿಲಾರೂಪಿ ಸಿಮ್ಮಾಸನವನ್ನು ಕನ್ನನಾಯಕ
ಯಂಬ ಹೆಸರಿನಿಂದಲೂ ಅಲಂಕರಿಸಿದರೆಂಬಲ್ಲಿಗೆ...
ಗುಂಡಲಳ್ಳಿ, ಯಾಸಾಪ್ರ, ಕಣುವಳ್ಳಿಯ ಪ್ರಜೆಗಳು ವುಭಯ ಸಂಕಟವನ್ನು
ಅನುಭವಿಸಿಯಾದ ಮ್ಯಾಲ “ಬ್ಯಾಡಿರಪ್ಪಾ ಬ್ಯಾಡಿರಿ” ಯಂದು ವಾಪಾಸು
ಕಳಿಸಿದರು. 'ಭೂಗತಗೊಂಡು ತಮಗ ಕಿರುಕುಳ ಕೊಡುತಲಿರುವ ರಾಜರನ್ನು
ಅಮೂಲಾಗ್ರವಾಗಿ ನಿಗ್ರಹ ಮಾಡಲು ಕುಂಪಣಿ ಸರಕಾರ ಸಹಾಯ ಸಯ್ನ
ಪದ್ದತಿ ಯೋಜನೆ'ಯ ನೆರವನ್ನು ಪಡೆಯಬೇಕೆಂದು ನಿರ್ಧರಿಸಿ ತಮ್ಮ ವಂದು
ನಿಯೋಗವನ್ನು ಹರಪನಹಳ್ಳಿಯ ವುಸ್ತುವಾರಿ ನೋಡಿಕೊಳ್ಳುತಲಿರುವ
ನಿಕೋಲಾಸ್ ಯಂಬ ಅಧಿಕಾರಿ ಬಳಿಗೆ ಕಳಿಸಿದರೆಂಬಲ್ಲಿಗೆ....
ಹನುಮಾಪ್ರ, ಕೆಂಚಿಕೆರೆ, ಹುಣುಸಳ್ಳಿಯ ಗ್ರಾಮಸ್ಥರನ್ನು ಕೆಲವು ಸಾಧು