ಪುಟ:ಅರಮನೆ.pdf/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮೮ ಅರಮನೆ ಭಾವನೆ ಮಾಡಿಕೋ, ವಬ್ಬರಿಗಿಂತ ಹೆಚ್ಚು ತಂದೆಯಂದಿರು ಯಿರುವುದು ಅದ್ರುಷ್ಟವಲ್ಲವೇನು?' ಯಂದು ಮುಂತಾಗಿ..... ಯಿದು ಆಡಬವುದಾದ ಮಾತಾ.. ಯಿದು ಕೇಳಬವುದಾದ ಮಾತಾ.. ಚಿನ್ಮಸಾನಿ ಗೆಳತಿಯ ಕಡೇಕ ತೀಕ್ಷವಾಗಿ ನೋಡಿದಳು.. ಪರಂಗಿ ಮಂದಿಗೆ ಸಂಬಂಧದ ರೀತಿ ರಿವಾಜು ಅರವಾಗುವುದಿಲ್ಲ. ಭೂಮಿಗೆ ಆಕಾಶ ವಂದೇ ಹೆಂಗೋ ಹಂಗೆ ಮಕ್ಕಳಾದವರಿಗೆ ತಂದೆ ವಂದೇ.. ಮನೆ ಬೇಸರವೆನ್ನಿಸಿ ತಾನಿಲ್ಲಿಗೆ ಬಂದಿದ್ದಳು.. ಯಿಲ್ಲಿ ನೋಡಿದರೆ ಗೆಳತಿ ಬಹು ಪಿತ್ತುತ್ತನ್ನು ಸಮರಿಸುತ್ತಿರುವಳು. ತನ್ನ ಹೆಸರಿನ ಮುಂದೆ ಸಾನಿಯಂಬ ಯಿಶೇಷಣ ಯಿರುವುದರಿಂದಲ್ಲವೇನು ಮೇಕೆ ಹಿಂಗೆ ಬೇಕಾಬಿಟ್ಟಿ ನುಡಿಯುತ್ತಿರುವುದು, ಹಂಗಿಸುತ್ತಿರುವುದು.. ಯಿನ್ನು ತಾನಿಲ್ಲಿ ಯಿರಕೂಡದು. ಮುಂದೆಂದೂ ಯಿಲ್ಲಿಗೆ ತಾನು ಬರಲೇಕೂಡದು. ಗೆಜ್ಜೆ, ಕಂಜರಾ, ಯಿತ್ಯಾದಿಗಳನ್ನಲ್ಲೇ ಬಿಟ್ಟು..... - ಛೇ.. ಛೇ.. ತಾನು ಯಂಥ ಕೆಲಸ ಮಾಡಿಬಿಟ್ಟೆ.. ಹೇಳದೆ ಕೇಳದೆ ತಾನು ಬರಬಾರದಾಗಿತ್ತು. ತನ್ನನ್ನು ತಡೆಯಲೆಂದು ಆಕೆ ಬಾಗಿಲವರೆಗೆ ಮೋಡೋಡಿ ಬಂದಳಲ್ಲ... ಗೆಜ್ಜೆಯ ನಾದ ತನ್ನನ್ನು ತಡೆಯಲೆತ್ನಿಸಿತಲ್ಲ.. ಯಿಷ್ಟು ದಿನದ ತಮ್ಮಿಬ್ಬರ ಸ್ನೇಹ ಯಿಂದಿಗೆ ಮುಗಿತೋ, ಯೇನೋ? ಅತ್ತ ತಾಯಿಯ ಯಿಸ್ವಾಸವನ್ನು ತಾನು ವುಳಿಸಿಕೊಳ್ಳಲಾಗುತ್ತಿಲ್ಲ.. ಯಿತ್ತ ಗೆಳತಿಯ ಸ್ನೇಹವನ್ನೂ ವುಳಿಸಿಕೊಳ್ಳಲಾಗಲಿಲ್ಲ.. ಸಾರೋಟಿನಿಂದ ಯಿಳಿಯುತ್ತ ಮನೆ ಕಡೆ ನೋಡಿದಳು. ಕುದುರೆಯ ಖರಪುಟದ ಸದ್ದು ಕೇಳಿದೊಡನೆ ತನ್ನ ತಾಯಿ ಮೋಡೋಡಿ ಬಂದು ತನ್ನನ್ನು ಸ್ವಾಗತಿಸುತ್ತಿದ್ದಳು. ಆದರೆ ಆಕೆಯ ಸುಳಿವಿಲ್ಲ.. ಮನೆ ಮುಂದಿನ ರಂಗವಲ್ಲಿ ಮ್ಯಾಲ ಆಕೆಯ ಹೆಜ್ಜೆ ಗುರುತುಗಳಿಲ್ಲ. ಮುಂದೆ ನಡೆದಳು. ವಂದೊಂದು ಹೆಜ್ಜೆ ವಂದೊಂದು ಮಣ ಭಾರ.. ವಳಗೆ ಯಿರಬೇಕಾದ ಕಡೆ ತನ್ನ ತಾಯಿ ಯಿಲ್ಲ.. ವುಪ್ಪರಿಗೆ ಖೋಲಿಯೊಳಗ ಮಲಗಿದ್ದಲ್ಲಿಗೆ ಹೋಗಿ “ಯಾಕವ್ವಾ ಯಷ್ಟೊತ್ತಿಗೆ ಮಲಗಿರುವಿಯಲ್ಲ” ಯಂದು ಕೇಳಿದಳು. “ಯಾಕೋ ಚಳಿ ಚಳಿ ಅದಂಗಾತು ಮಗಳ... ಅದಕಃ ಮಲಕ್ಕಂಡೆ' ಯಂದಳು. ಯಷ್ಟಿದ್ದರೂ ತಾಯಿಯಾಗಿರುವಾಕೆ. ಮಗಳು ಅಂದರ ತಾನೆ.. ಮಗss ಅಂದರೂ ತಾನೇ.. ಹಿಂಸೆ ಕೊಡುವುದು ಥರವಲ್ಲ... ದುಕ್ಕ ವುಮ್ಮಳಿಸಿ ಬಂತು, ಯೀ ಕ್ಷಣ ತಾನು ಸಣ ಕಂದಮ್ಮನಾಗಲೇಬೇಕು, ಹೊತಾ ಹೋಗಿ ಮಗ್ಗುಲು ಮಲಗಿ ಯವ್ವಾ