ಪುಟ:ಅರಮನೆ.pdf/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೮೭ ಹೇರಂಭ ಗಣಪತಿ ಯಂದು ಹಾಡುವಷ್ಟರ ಮಟ್ಟಿಗೆ ಜೆನ್ನಿಫರಮ್ಮ ಕಲಿತುಕೊಂಡಿದ್ದಳು.. ಅದೆಲ್ಲದಕ್ಕೂ ಮಕುಟಪ್ರಾಂತವಾಗಿ ಮಗುವನ್ನು ತೊಟ್ಟಿಲೊಳಗಿರಿಸಿ ತೂಗುವುದನ್ನೂ, ತೊಳ್ಕೊಳ್ಳಾಯಿ ಯಂದು ಹಾಡುವುದನ್ನೂ ಕಲಿತುಕೊಡಿದ್ದಳು.. ಅವರಿಬ್ಬರು ವಟ್ಟಿಗೆ ವುಂಬುವಷ್ಟರ ಮಟ್ಟಿಗೆ, ವಟ್ಟಿಗೆ ಯಲಡಕೆ ನಮಲುವಷ್ಟರ ಮಟ್ಟಿಗೆ, ವಟ್ಟಿಗೆ ತಬ್ಬಿಕೊಂಡು ಮಲಗುವಷ್ಟರ ಮಟ್ಟಿಗೆ, ಆಕೆ ಬದಲಿಗೆ ಯೀಕೆ, ಯೀಕೆ ಬದಲಿಗೆ ಆಕೆ ಕಿಲಕಿಲ ನಗುವಷ್ಟರ ಮಟ್ಟಿಗೆ, ವಟ್ಟಿಗೆ ವಂದೇ ಸಾರೋಟಿನಲ್ಲಿ ಪಟ್ಟಣದ ಹತ್ತಾರು ಕಡೆ ಹೋಗಿ ಬರುವಷ್ಟರ ಮಟ್ಟಿಗೆ ಅನ್ನೋನ್ಯದಿಂದ ಯಿರಲಾರಂಭಿಸಿದ್ದರು. ನೋಡುವ ಮಂದಿಯು ಜೆನ್ನಿಪರಮ್ಮಳನ್ನೇ ಚಿನ್ನಾಸಾನಿಯಂದೂ, ಚಿನ್ನಾಸಾನಿಯನ್ನೇ ಜೆನ್ನಿಫರಮ್ಯಳೆಂದು ಭ್ರಮಿಸುತಲಿದ್ದರು.. ಯೀ ಪ್ರಕಾರವಾಗಿ ಅವರಿಬ್ಬರು ವಂದೇ ಯರಕದಿಂದ ಮಾಡಲ್ಪಟ್ಟವರಂತೆ, ವಂದೇ ತಾಯಿ ಯೆದೆ ಹಾಲು ಕುಡಿದವರಂತೆ ಅನ್ನೋನ್ಯವಾಗಿ ಕಾಲ ಕಳೆಯುತಲಿದ್ದರು.... ತನ್ನ ಮನೆ ಮುಂದೆ ವಂಟೆಯ ಲದ್ದೆ ನೋಡಿದಲಾಗಾಯ್ತು.. ಯೇ ಯಿಳಿ ವಯಸ್ಸಿನಲ್ಲಿ ತನ್ನ ತಾಯಿಗೆ ಯಿದೆಲ್ಲ ಬೇಕಾಗಿತ್ತೇ ಯಂಬಂಥ ಅನುಮಾನ ಮೂಡಿದಲಾಗಾಯ್ತು ಚಿನ್ನಾಸಾನಿ ಜಾವ ಜಾವಕ್ಕೊಮ್ಮೆ ಛೇ ಛೇ ಯಂದೆನ್ನಲಾರಂಭಿಸಿದ್ದಳು. “ಯಾಕ ಯೇಂಜಲೂ? ಮೊನ್ನೆಯಿಂದ ಯೇನನ್ನೋ ಮನಸಿನಾಗಿಟ್ಟುಕೊಂಡು ವಬ್ಬಾಕೆ ನೋವನು ತಿಂಬುತಿರುವಿಯಲ್ಲಾ” ಯಂದು ಚೆನ್ನಿಫರಮ್ಮ ಕೇಳಿದ್ದಕ್ಕೆ ಯೀ ತರುಣಿಯು ಮೊದಮೊದಲಿಗೆ ಹೇಳಲಾರದೆ ಮುಖವನ್ನು ತಿರುವಿದಳು. ತಡಕೊಳ್ಳಲಾರದೆ ತನ್ನ ಮುಖವನ್ನು ಆಕೆಯ ವಕ್ಷಸ್ಥಳದ ಮ್ಯಾಲಿರಿಸಿ ಗೊಳೋ ಯಂದು ಬಿಕು ಬಿಕ್ಕಿ ಅತ್ತಳು. ಜೆನ್ನಿಫರು ಅಳೂ.. ಅಳೂ.. ಮತ್ತಷ್ಟು ಅಳೂ ಯಂದು ತಬ್ಬಿಡಿದುಕೊಂಡಳು. ಕೊನೀಕೆ ತಡೀಲಾರದೆ “ಗೆಳತೀ... ನನ ತಂದೆ ಯಾರಿರಬೌದು ಯಂಬ ಪ್ರಶ್ನೆ ಬಗೆಹರಿವಲ್ಲದು, ಯೇಸು ದಿನ ಬುಗುಡಿ ನೀಲಕಂಠಪ್ಪನೇ ತಂದೆ ಯಂದು ತಿಳಕೊಂಡಿದ್ದೆ.. ಯೀಗ ನೋಡಿದರ ಯೀರ ಭೋಜನೆಂಬಾತ.. ಛೇಛೇ..” ಯಂದು ಮುಂದಕ ಹೇಳಲಾರದೆ ಗದ್ಗದಿತಳಾದಳು ಜೆನ್ನಿಫರಮ್ಮ ಕೇಳಿ ಅಚ್ಚರಿಪಟ್ಟಳು.. ಯೀ ಸದರಿ ಯಿಂಡಿಯಾವು ಪುರಾಣ ಕಾಲದಿಂದ ಪಿತ್ರುತ್ವ ಮಾತ್ರುತ್ವದ ಹಕ್ಕುದಾರಿಕೆಯನ್ನು ವುಳಿಸಿ, ಬೆಳೆಸಿಕೊಂಡು ಬಂದಿರುವುದಲ್ಲಾ.. ಯಿದೂ ವಂದು ಗಹನ ಸಮಸ್ಯೆಯಾ? “ಗೆಳತೀ ಅವರಿಬ್ಬರನ್ನೂ ತಂದೆಯೆಂದೇ