ಪುಟ:ಅರಮನೆ.pdf/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨೮ ಅರಮನೆ ಯೀ ಪ್ರಕಾರವಾಗಿ ಅಲ್ಲೆಲ್ಲ ಅಲಾಯಿ ಆಡಿದ ಸೂರನು ಹಂಪಜ್ಜ ಅಡುವಯ್ಯ, ಬೀರಯ್ಯ, ಪಾಲಯ್ಯ, ಬೋರಯ್ಯ ಮೊದಲಾದ ಹಿರೀಕರು ದುರುಗುಟ್ಟಿ ಅಲ್ಲಿಂದ ಸೀದ ನಡೆದು ಅರಮನೆಯ ಹಿತ್ತಲಗೋಡೆಯನ್ನು ಡಿಕ್ಕಿ ಹೊಡೆದು ಬೀಳಿಸಿದನು.. ನೆಲಗೆದರಿ ಧೂಳೆಬ್ಬಿಸಿ ಅರಗಳಿಗೆ ಅರಮನೆಯನ್ನು ಮಂಗಮಾಯ ಮಾಡಿದನು. ಅಲ್ಲಿಂದ ಸೀದ ನಡೆದು ರಣದಿಬ್ಬವನ್ನೇರಿ ಪಟ್ಟಣವನ್ನು ಸಿಮಾವಲೋಕನ ಮಾಡಿ ಯಿಳಿದನು. ತರುವಾಯ ಮಹಿಷಿಕಾ ಸಾನಿಯರೊಂದಿಗೆ ಯೇಕಾಸೂರಿಯ ಗುಡ್ಡದ ತಪ್ಪಲ ಕಡೇಕ... ಅರರೆ ಯಿದೇನಿದು? ಅಯ್ತಾವತದೋಪಾದಿಯಲ್ಲಿ ಮಾಬಲಿ ಯಿಲ್ಲೆಲ್ಲ ಅಡ್ಡಾಡಿ ಹೋದಂಗಾತಲ್ಲಾ, ತಮಗಾವಾಗ್ಗೆ ಮಯ್ಯೋಳಗ ಕಸುವಿಲ್ಲದಂಗಾಗಿತ್ತಲ್ಲ. ಯಂದನ ಕಂತ ಪ್ರತಿಯೊಬ್ಬರು ಕ್ರಮಕ್ರಮವಾಗಿ ಸಹಜ ಸ್ಥಿತಿಗೆ ಮರಳಲಾರಂಭಿಸಿದರು. ಯಾವತ್ತೂ ಕವಿದಿರದಿದ್ದ ಮಾಯಾದ ನಿದ್ದೆ ಅಂಬುದು ಸದರಿ ಕುದುರೆಡವು ಪಟ್ಟಣವನ್ನು ಕವಿದು ಸೋಲುಪ ಹೊತ್ತು ಅಳ್ಳಾಡಿಸಿಬಿಟ್ಟಿತ್ತು.. ಯಾವತ್ತು ಹೊತ್ತು ಮುಳುಗಿತ್ತೋ? ಯಾವತ್ತು ಬೆಳಗಾತೋ? ತಾವು ಮಲಗಿದ್ದೆವೋ? ಯಚ್ಚರಿದ್ದೆವೋ? ನಿದ್ದೆಯಚ್ಚರಗಳ ನಡುವೆ ಜುವ್ವಾಲೆ ಆಡುತಲಿದ್ದೆವೋ..? ನೀನೇ ಹಿಂಗ ಮಲಿಕ್ಕಂಡಿದ್ದರ ಹೆಂಗಪ್ಪಾ.? ತಾನೇ ಹಿಂಗ ಮಯ್ಯ ಮರತರ ಹೆಂಗಪ್ಪಾ.? ಅವರನ್ನಿವರು, ಯಿವರನ್ನವರು ಹೇಳೋದು, ಕೇಳೋದು ಮಾಡುತಲಿದ್ದರು ಸಿವನss ಯಿಲ್ಲೊಂದ ಅಲ್ಲ. ಅಲ್ಲೊಂದ ಅಲ್ಲ... ಸಮಸ್ತ ಪಟ್ಟಣದ ತುಂಬೆಲ್ಲ ಸಿವನೇ.. ಸಂಪೂಗ್ಲ ಯಚ್ಚರಾಣ ಆಗೋರಾಗಿ ತಮ್ಮ ತಮ್ಮ ಮನೆಗಳಿಂದ ಹೊರಬಂದು ನೋಡುತಾರ.. ಕಣ್ಣೆದುರುಗೇ ತಮ ತಮ್ಮ ಮಣಕಗಳು ಹೋದುವಲ್ಲ... ಅವುಗಳನ್ನು ತರುಬುವ ತಾಕತ್ತು ತಮ್ಮಲ್ಲಿ ವುಡುಗಿತ್ತಲ್ಲ.. ಯಾಕ ಹಂಗಾತು? ಯಾಕ ಹಿಂಗಾತು? ಯಿದಕೆಲ್ಲ ಜಗಲೂರೆವ್ವನ ಕೋಣವೇ ಕಾರಣ ಯಂಬ ನಿರಣಯಕ ಸಮಸ್ತ ಪಟ್ಟಣವು ಯಷ್ಟೋ ಹೊತ್ತಿನ ಮ್ಯಾಲ ಬಂತು.. ಮೂಲಿಂಟಿ ನಾಗಯ್ಯ ನಡುಲಿಂಟಿ ನಗಾರಯ್ಯ, ಕುಂಬಾರ ಅಳ್ಳೆಪ್ಪ, ಜೋಡಿಗರ ಬಾಲಯ್ಯ, ಮದೇಟಿ ಬಂದೆವ್ವ ಯವರೇ ಮೊದಲಾದ ನೂರಾರು ಮಂದಿ ತಮ್ಮ ತಮ್ಮ ಮಣಕಗಳಿಗಾಗಿ ಹುಡುಕ್ಕೋತ ಹುಡುಕ್ಕೋತ ಯೇಕಾಸೂರಿ ಗುಡ್ಡವ ತಲುಪದೆ ಯಿರಲಿಲ್ಲ. ತಮ್ಮ ತಮ್ಮ ರಾಸುಗಳನ ಗುರುತಿಸದೆ ಯಿರಲಿಲ್ಲ... ಬರೆವ್ವಾ..