ಪುಟ:ಅರಮನೆ.pdf/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೩೦ ಅರಮನೆ ಹಂಗಂತ ಸುಮಕ ಬಿಡಲಕ ಅಯ್ತದಾ.. ದಯವಸ್ಥ ಮಂದಿ ಅದನು ಬಂಧಿಸುವ ಯಿಷಯದಲ್ಲಿ ಮಸ್ತು ಯತ್ನ ಪ್ರಯತ್ನಗಳನ್ನು ಮುಂದುವರಿಸದೆ ಯಿರಲಿಲ್ಲ.. ಸಾಂಬವಿ ತಮಗ ವಡ್ಡಿರುವ ಪರೀಕ್ಷೆಗಳಲ್ಲಿ ಯಿದೂ ಎಂದು ಯಂದು ಭಾವನೆ ಮೂಡಿತು. ಅದರ ಫಲವಾಗಿ ಖಡುಗ, ಭಲ್ಲೆ, ಗುರಾಣಿ ಹಿಡಕೊಂಡು ಹೋಗಿ ಮತ್ತು ಹುಣಸೆಹಣ್ಣು ಮಾಡಿಕೊಂಡು ವಾಪಾಸಾದವರೆಷ್ಟೋ? ಹೆಂಡ ಕುಡಿಸಲು ಹೋಗಿ ವದೆ ತಿಂದವರೆಷ್ಟೋ? ಸೂರ ಯಂಬುದು ಪ್ರಸ್ಮಾರಕ ಚಿನ್ನೆಯಾಗೇ ವುಳಿಯಿತೆಂಬಲ್ಲಿಗೆ.. ಅದಕ ಜವಾಬು ಅಲ್ಲುಂಟಾ? ಯಿಲ್ಲುಂಟಾ? ಯಲ್ಲುಂಟು? ಯಂಬಲ್ಲಿಗೆ.... ಅನಂತಪುರದ ಕಡೇಕ ಹೊರಡುವ ಮೊದಲು ತನ್ನ ಸರೀರದ ಮ್ಯಾಲಿಂದ ಬೊಬ್ಬಿಲಿ ನಾಗಿರೆಡ್ಡಿಯ ದಿರಿಸನ್ನು ವುತಾರ ಮಾಡಲು ನಾನಾ ರೀತಿಯಲ್ಲಿ ಮನೋ ಸಾಹೇಬ ಪ್ರಯತ್ನವ ಮಾಡದೆ ಯಿರಲಿಲ್ಲ.. ಆದರದು ಬಡಪೆಟ್ಟಿಗೆ ವುತಾರಾಗಲಿಲ್ಲ... ಬಲು ತ್ರಾಸು ಕೊಟ್ಟಿತು.. ಅದೆಂಗ ಳುವುತೀರೋ ಯಳುವು ಯಂದು ಸವಾಲು ಹಾಕಿದಂತೆ, ಬಿಚ್ಚಲಕ ಹೋದಾಗ ಚರುಮ ಅದರೊಟ್ಟಿಗೆ ಕಿತ್ತುಕೊಂಡು ಬಂದಂತೆ ಭಾಸವಾಯಿತು.. ಕೊನೆಗೂ ಸರೀರದಿಂದ ಕಳಚುವಲ್ಲಿ ತಾನು ಸಫಲಗೊಂಡಿದ್ದುಂಟು.. ಆ ದಿರಿಸು ಅಂಗಲಾಚಿದಂತೆ, ಹಂಗಿಸಿದಂತೆ, 'ಅದೆಂಗ ಹೋತೀಯೋ ಹೋಗು' ಯಂದು ಯಚ್ಚರಿಸಿದಂತೆ ಭಾಸವಾಯಿತು. ಯದರೊಳಗ ತನ್ನದೇನು ತಪ್ಪಿಲ್ಲ... ಅವಯ್ಯ ಮಾಮೂಲು ಮನುಷ್ಯನಂತೆ, ಯಿತಿಹಾಸದೊಳಗ ನಷ್ಟವಾಗದಂತೆ ನೋಡಿಕೊಳ್ಳಬೇಕೆಂಬ ವುದ್ದಿಶ್ಯದಿಂದಾಗಿಯೇ ತಾನು ಯಂಥ ಕುತ್ಯ ಯಸಗಬೇಕಾಯಿತೆಂದೂ, ಹುತಾತುಮ ಪಟ್ಟ ಯೇರದ ಯಾರೊಬ್ಬರನ್ನೂ ಯಿತಿಹಾಸ ತನ್ನೊಳಗೆ ಅನುವು ಮಾಡಿಕೊಟ್ಟಿಲ್ಲವೆಂದೂ ಆ ದಿರಿಸಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದನು. ನಾಗಿರೆಡ್ಡಿಗೆ ಲಭಿಸಲಿರುವುದು ಮರಣದಂಡನೆಯಲ್ಲ. ಅದೊಂದು ಅನೂಹ್ಯ ಬಲಿದಾನ.. ಯಂಜಲು ಅದಲು ಬದಲು ಮಾಡಿಕೊಂಡ ನಂತರ ಅವಯ್ಯ ನಿರಮ್ಮಳತೆಯಿಂದ ಯಿದ್ದದ್ದು ತನಗೆ ಸರಿ ಕಾಣಲಿಲ್ಲ. ತನ್ನ ಯಿರುದ್ಧ, ಕುಂಪಣಿ ಸರಕಾರದ ಯಿರುದ್ಧ ಹೋರಾಡಬೇಕಿತ್ತು.. ಹೋರಾಟವೇ ಹುತಾತುಮ ಮಟ್ಟದ ಪ್ರಥಮ ಸೋಪಾನ ಯಂದು ತಿಳಿಯಬೇಕಿತ್ತು. ಸದರಿ ರೂರಲ್ಲಿಂಡಿಯಾ ಮಂದಿಯೇ ಯಿಷ್ಟು.. ಹಿಂದು ಮುಂದು ಆಲೋಚನೆ ಮಾಡದೆ ಕೆರಳುವುದು,