ಪುಟ:ಅರಮನೆ.pdf/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೫೦ ಅರಮನೆ ಬೇಕಾದರೂ ಸುಲಭವಾಗಿ ಆಕ್ರಮಿಸಬಹುದು.. ಯವರು ಪಾವಂತರಾಗಲಕ.. ಮನೋ ಸಾಹೇಬನು ಮಾತ್ರುಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕೆಂದು ನಿದ್ದರಿಸಿ ಕೂಲಂಕಷ ಯೋಜನೆಯನ್ನು ತಯಾರಿಸಿ ಸರಕಾರದ ವರಿಷ«ರಿಗೆ ಕಳುಹಿಸಿರದೆಯಿರಲಿಲ್ಲ.. ಅದನ್ನು ಕಂಡು ಅವರು ಹುಬ್ಬೇರಿಸಿರದೆ ಯಿರಲಿಲ್ಲ. ತಮ್ಮ ಸರಕಾರದ ರೀತಿ ರಿವಾಜುಗಳನ್ನು ಅರ ಮಾಡಿಕೊಳ್ಳುವ ಸಲುವಾಗಿ, ಆಡಳಿತದಲ್ಲಿ ಸ್ವಾಮಿನಿಷೆ«ಯಿಂದ ಭಾಗಿಯಾಗುವ ಸಲುವಾಗಿ ಸದರಿ ದೇಶದ ಸಾಮಾನ್ಯ ಪ್ರಜೆಗಳಿಗೆ ಯಿಂಗ್ಲೀಷು ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕೆಂದು ತಾಕೀತು ಮಾಡದೆ ಯಿರಲಿಲ್ಲ... ಸರಕಾರದ ಯೀ ಸಮಾಜ ಯಿರೋಧಿ ನಿಲುವಿನಿಂದ ತನಗೆ ನಿರಾಸೆಯಾಗದೆ ಯಿರಲಿಲ್ಲ.. ಆದರೆ ತಾನೇನು ಮಾಡಲಾದೀತು. ಯಲಮೋ ಮನೋ! ಯಂದು ತನ್ನನ್ನು ತಾನು ಸೊಯಂ ನಿಂದನೆ ಮಾಡಿಕೊಳ್ಳದ ಹೊರತು.... ಮನ್ನೇ ಯೀಗ ಸದ್ಯ ಬರೆಯುತಲಿರುವ ಗ್ರಂಥ ಯಾವುದಪ್ಪ ಅಂದರ.. ಅದು ತನ್ನ ಆತುಮಸಾಕ್ಷಿಗೆ ಸಂಬಂಧಿಸಿದ್ದು... ತಾನು ನಿಮ್ಮುತ್ತನಾದ ನಂತರ.. ಅಷ್ಟೇ ಯಾಕೆ ತನ್ನ ಮರಣಾನಂತರ ಪ್ರಕಟವಾಗಲಿರು ವಂಥಾದ್ದು.. ಮತ್ತೋ ಅಂದರೇನು ಎಂಬುದನ್ನು ಮಾನವ ಕುಲಕ್ಕೆ ಅಚಂದ್ರಾರವಾಗಿ ಪರಿಚಯಿಸಲಿರುವಂಥಾದ್ದು.. ಅದರೊಳಗ ತಾನು ಕಂಡುಂಡ ಅನುಭವಗಳನ್ನು ದಾಖಲು ಮಾಡುತವನೆ, ಅದರೊಳಗ ತನ್ನ ಅಸಹಾಯಕತೆಯನ್ನು ದಾಖಲು ಮಾಡುತವನ. ಅತ್ತ ಅವತ್ತು ಬಳ್ಳಾರಿ ಕೇಂದ್ರಕಾರಾಗ್ರಹದೊಳಗ ಫಲಾನ ದಿವಸ ಫಲಾನ ಮೂರದಂದು ರೆಡ್ಡಿಲೋ ರೆಡ್ಡಿಯೆನಿಸಿದ್ದ ಬೊಬ್ಬಿಲಿ ಯಂಬ ಬಿರುದನ್ನು ಜನಸಾಮಾನ್ಯರಿಂದ ಪಡಕೊಂಡಿದ್ದ ತನ್ನ ತುಟಿ ನಡುವೆ ಮುಗುಳುನಗೇನ ಮುಡಕೊಂಡಿದ್ದ, ವಂದೇ ಮಾತಲ್ಲಿ ಹೇಳಲಕಂದರೆ ಆಗ ತಾನೆ ಹುಟ್ಟಿದ ಮಗುವಿನಿಂತಿದ್ದ ನಾಗಿರೆಡ್ಡಿಯ ಆರೋಗ್ಯ ತಪಾಸಣೆ ಮಾಡಿದ ವಯ್ಯ ಬಿಕು ಬಿಕ್ಕಿ ಅಳುತ್ತ ಹೋದ. ಅವನೆದುರು ಮಂತ್ರಪಠಣ ಮಾಡುವಾಗ ಜೋಷಿ ಗದ್ಗದಿತನಾದ.. ಕುಂಪಣಿ ಅಧಿಕಾರಿಯೋಲ್ವ “ನಿನ್ನ ಅಂತಿಮ ಆಸೆಯೇನು?” ಯಂದು ಕೇಳಿದ್ದಕ್ಕೆ ಯೇನೂ ಇಲ್ಲ ಯಂಬಂತೆ ತಲೆಯನ್ನು ಅಲ್ಲಾಡಿಸಿದ. ನಿಲುವಂಗಿ ತೊಡಿಸಿ.. ಫಲಾನ ಜಾಗಕ್ಕೆ ಕರೆದೊಯ್ದರು. ಅದೇ ಪನಿಗೆಂದು ನಲಮಲಗೂಡೇಮಿನಿಂದ ವಂದೇ ಮಾತಿಗೆ ಬಂದಿದ್ದ...