ಪುಟ:ಅರಮನೆ.pdf/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೫೨ ಅರಮನೆ ಯಿಂಥ ದೇವರಂಥಾ ಮನುಷ್ಯನಿಗೆ ಅಪರಾಧ ಪಟ್ಟ ಕಟ್ಟಿರುವುದಲ್ಲಾ ಕುಂಪಣಿ ಸರಕಾರ... ಯಿಂಥಾತನನ್ನು ಕಾಯಿದೆ ಶೀರs ಕೊಲ್ಲಲಕ ತನ್ನನ್ನು... ಸಿವ ಸಿವಾಳ ಮುಖದೊಳಗ ಮುಖಯಿಟ್ಟು ನೋಡಲಕಂದರ ಯದೆ ನಡುಗಿತು. ನಡುಗುವ ಕಯ್ಯಗಳಿಂದ ತಲೆಗೆ ಕರಿ ಚೀಲವನ್ನು ಕೊರಳಿಗೆ ವುರುಳ ಸರಗಂಟನ್ನು... ರೆಡ್ಡಿಗೆ ಮರಣದಂಡನೆ ಯಿಧಿಸಲಾಯಿತೆಂಬ ಸುದ್ದಿ ಅದಾವ ಮಾದಿಯಿಂದಲೋ.. ಯಷ್ಟೋ ಕಡೇಕ? ಯಷ್ಟೋ ಮಂದಿ ತಮಗ ಹೆಂಗ ತೋಚಿತೋ ಹಂಗಂಗ ಸತ್ತರು.. ಮುನುಸೋಬಯ್ಯ ರೆಡ್ಡಿಯ ಕಳೇಬರ ಪಡೆಯಲಕೆಂದು ಸಂಗಡಿಗರೊಡನೆ ಸೆರೆಮನೆಯ ಅಧಿಕಾರಿಗಳೊಂದಿಗೆ ಮಾತಿಗೆ ಯಿಳಿದಿದ್ದ ಹೊತ್ತಿನಲ್ಲಿ... ಕೊಂಡಲಪಲ್ಲಿ ವಜ್ವರಯ್ಯ ಅಳುತ್ತ ಯತ್ತಲೋ ಹೋದ ಹೊತ್ತಿನಲ್ಲಿ ರೆಡ್ಡಿಂಯ ಕಳೇಬರ ಯಿದ್ದ ಶವಪೆಟ್ಟಿಗೆ ಹೇಳುಮಲ್ಲಿಗೆ ತೂಕದ್ದಾದಂಗಯೆ ಯಂದು ಕಾರಾಗ್ರಹದ ಸಿಪಾಯಿಗಳು ಪರಸ್ಪರ ಮಾತಾಡಿಕೊಳ್ಳುತಲಿದ್ದ ಹೊತ್ತಿನಲ್ಲಿ.... ಅತ್ತ ಗಡೇಕಲ್ಲೊಳಗ ದೇವರ ಮ್ಯಾಲ ಭಾರ ಹಾಕಿ ಭೀಮಲಿಂಗೇಶ್ವರ ಸ್ವಾಮಿ ರಥ ಸಾಗಯ್ತಿ. ಸ್ವಾಮಿ ರಥಾರೂಢನಾಗಿದ್ದು ವುತ್ತರ ನಕ್ಷತ್ರದ ಮೂರನೇ ಪಾದದಲ್ಲಿ.. ನಾಗಿರೆಡ್ಡಿ ಬಂದು ಮಿಣಿ ಹಿಡಿಯದ ರಥ ಮುಂದಕ ಚಲಿಸಂಗಿಲ್ಲ.. ಯಾರೊಬ್ಬರು ಮಿಣಿಗೆ ಕನ್ನ ಹಚ್ಚುತಾಯಿಲ್ಲ.. ಸ್ವಾಮಿಯೇ ತನ್ನ ಕಂದಯ್ಯನ ನಿರೀಕ್ಷೆಯಲ್ಲಿರುವನು. ದೂರದ ಬಳ್ಳಾರಿ ಪಟ್ಟಣದೊಳಗ ಮಘ ನಕ್ಷತ್ರದಲ್ಲಿ ಮರಣದಂಡನೆಗೆ ವಳಗಾಗುವ ರಡ್ಡಿಯು ಬರುವುದುಂಟಾ.. ಮಿಣಿ ಹಿಡಿಯುವುದುಂಟಾ? ಯಂಥ ಪರೀಕ್ಷೆಯಿದ್ದೀತಪ್ಪಾ ಯಿದು? ಹಿಂಗss ವಬ್ಬಬ್ಬರ ಮನದೊಳಗ ವಂದೊಂದು ತರದೂದು.. ವುತ್ತರ ನಕ್ಷತ್ರಮೂರನೇ ಪಾದದಿಂದ ನಾಲಕನೆಯ ಪಾದಕ್ಕೆ ಕಾಲಿರಿಸಿತು.. ಯಿನ್ನೊಂದರ ಗಳಿಗೆಯಲ್ಲಿ ಪ್ರಶಸ್ತ ಮೂಲಾ ನಕ್ಷತ್ರಕಾಲಿರಿಸಲಿರುವುದು. ಆ ಮೂಲಾನಕ್ಷತ್ರದಲ್ಲಿ ಸ್ವಾಮಿ ಮುಂದಕ ಮೂರೇ ಮೂರು ಹೆಜ್ಜೆಯಿಡದಿದ್ದಲ್ಲಿ ರಥೋತ್ಸವದ ಕಥೆಯು ಯಿಂದಿಗೇ ಪರಿಸಮಾಪ್ತಿಯಾಗಲಿರುವುದು. ಜಯ್ ಭೀಮಲಿಂಗೇಶ್ವರ.. ಜಯ್ ಭೀಮಲಿಂಗೇಶ್ವರ.. ಯಂದು ಕೂಗುತ ರವುಸ ತುಂಬುವ ಪ್ರಯತ್ನವ ಮಾಡುತಲಿರುವರು.. ಯಿನ್ನೇನು ಮೂಲಾನಕ್ಷತ್ರದ ಮೊದಲ ಚರಣ ಕಾಲಿರಿಸಿತು... ಮಂದಿ