ಪುಟ:ಅರಮನೆ.pdf/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬೨ ಅರಮನೆ ವುತ್ತೇಜಿತಗೊಂಡು ವುತ್ಪಲಮಾಲಾರುತ್ತದಲ್ಲಿ ಯೀ ಪ್ರಕಾರವಾಗಿ ಯೇನು ಪದ್ಯಕಟ್ಟಿ ಹಾಡುತ್ತ ಹಿಂದೆ ಸರಿದನೆಂದರೆ... ಅಪುತ್ರವತಿಯಾದ ದಿತಿಯು ಯಮ್ಮೆಯಂತೆ ನಿಂತು ತಪಸ್ಸು ಮಾಡಲು ಬ್ರೆಮ್ಮದೇವನು ಪ್ರತ್ಯಕ್ಷನಾಗಿ ಕೋಣದಂತಿರುವ ಮಗನು ಜೆನಿಸುವನೆಂದೂ.. ರುಂಡ ಮಾತ್ರಮಹಿಷದಂತೆ ಯಿರುತ್ತದೆಂದೂ.. ವರವನಿತ್ತು ಅದುಶ್ಯನಾದನು. ಯಿ ಪ್ರಕಾರವಾಗಿ ಅವತರಿಸಿದ ಮಹಿಷಾಸೂರನು ದಿನಕ್ಕೊಂದು ಛಂದದಲ್ಲಿ ಬೆಳೆದು ಪ್ರಮುಢನಾದನು. ಅವನು ಘನಘೋರ ತಪವನ್ನಾಚರಿಸಲು ಶಿವನು ಪ್ರತ್ಯಕ್ಷನಾದನು. ಆಗ ಅಸುರನು ತನಗಾವ ಪುರುಷನಿಂದಲೂ ಮರಣ ಸಂಭವಿಸಬಾರದೆಂಬ ವರವ ಕೇಳಲು.... (ಸೂರನು ಕಥೆ ಕೇಳುತಾ ಕೇಳುತಾSS ಮಯ್ಯ ಮರತು ವಂದೊಂದೆ ಹೆಜ್ಜೆ ಹಾಕೂತ ಅಗಸೆಬಾಗಿಲು ಪ್ರವೇಶ ಮಾಡಿದನು. ಮುಂದೇನಾತು ಯಂದು ಕೇಳುವ ಆತುರದಲ್ಲಿ ಯಿದ್ದ ಅವಯ್ಯಗೆ ಗೊಂಡ್ರಸಾಂಬಯ್ಯ ಗಾಂಜಾ ತೊಪ್ಪಲು ಕೊಟ್ಟಿದ್ದೂ ತಡ ಆಗಲಿಲ್ಲ. ಆತನು ಗಬಗಬ ತಿಂದದ್ದೂ ತಡ ಆಗಲಿಲ್ಲ... ಅಮಲು ತಲೆಗವರತೊಡಗಿದ್ದು ತಡ ಆಗಲಿಲ್ಲ... ವಾಲಾಡುತಾss ವಾಲಾಡುತಾSSS) ಅಂಥ ವರವನ್ನು ಪಡೆದ ಮಹಿಷಾಸುರನು ಮೀರೇಳು ಲೋಕಂಗಳನ್ನು ಗೆದ್ದು ದೇವಾನುದೇವತೆಗಳ ಪಾಲಿಗೆ ಭಯೋತ್ಪಾದಕನಾದನು.. ಆಗ ತ್ರಿಮೂರಿಗಳು ಗವುರಿಯ ಬಳಿಗೆ ಬಿಜಯಂಗಯ್ತು.” ರಾಮರಾಜುವಿನ ಕಂಠ ಗದ್ಗದಿತವಾಗಿ ಬಿಕ್ಕೊಂಡಿತು. ಸೂರನು ಕೆಳಗಣ್ಣು, ಮ್ಯಾಲಗಣ್ಣು ಮಾಡಲಾರಂಭಿಸಿದನು.. ಸರೀರ ಸ್ವಾಧೀನ ತಪ್ಪಿತು. ಪಂಚೇಂದ್ರಿಯಂಗಳು ಪಲ್ಟಿ ಹೊಡೆಯತೊಡಗಿದವು.. ಗೊಲ್ಲರೀರಯ್ಯನ ನೇತ್ರುತ್ವದಲ್ಲಿ ಪಯಿಲುವಾನ ಮಾರುದ್ರನ ಗರಡಿಮನೆಯ ಪಡ್ಡೆ ಹುಡುಗರು ಸೂರನ ಕುತ್ತಿಗೆಗೆ ತೊಡೆಗಡುತರದ ಮಿಣಿ ಬಿಗಿದರು. ಕಾಲಿಗೊಂದು ಸರಪಳಿ ಬಿಗಿದರು..... ಅಯ್ಯೋ ಮೋಸಾತು.. ಘಾತವಾತು ಅಂತ ಸರಸಿ, ಸಂಗೀಯರೇ ಮೊದಲಾದ ಮಹಿಷ ಸ್ತ್ರೀಯರು ಡುರುಕಿ ಹಾಕುತ, ಅವರಿವರನ್ನು ಹಾಯುತ ಪ್ರತಿಭಟನೆ ಮಾಡತೊಡಗಿದರು.. ಯಚ್ಚರಾಗು ಯಚ್ಚರಾಗು ಯಂದು ತಮ್ಮ ಪ್ರಿಯಕರನನ್ನು ಬೇಡಿಕೊಳ್ಳತೊಡಗಿದರು.. ವಂದು ತೆಕ್ಕೆ ಗಾಂಜಾ ತೊಪ್ಪಲನು