ಪುಟ:ಅರಮನೆ.pdf/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೬೫ ಕಣ್ಣಳತೆಯಲ್ಲಿರುತಲಿದ್ದವು. ತನ್ನ ಕೂಗಳತೆಯಲ್ಲಿರುತಲಿದ್ದವು.. ನೋಡಿದೊಡನೆ ಮೋಡೋಡಿ ಬರುತಲಿದ್ದವು.. ಕೂಗಿದೊಡನೆ ಮರು ಜವಾಬು ನೀಡುತಲಿದ್ದವು.. ಅಷ್ಟ ದಿಕ್ಕಿಗೆ ಹರಿದಾಡಿದಳು. ಮೊದ ಹುಬ್ಬಿಗೆ ಕನ್ನ ಹಚ್ಚಿ ನಿರುಕಿಸಿದಳು. “ಯ್ಯೋಯ್ ವುಲುಗಿ ನೀನ್ನೋದ್ದೇನೆ? ಯೋಯ್ ಯೇರಿ ನೀನ್ನೋದ್ದೇನೆ' ಅಂತ ಹಾದು ಹೋಗುವವರನ್ನೆಲ್ಲ ತರುಬಿ ಕೇಳಿದಳು. ಗಂಟಲವರೆಗೆ ಬಂದ ಮಾತುಗಳಿಗೆ ಸಬುಧದ ಸೂತಕ ತಗುಲಿದ್ದ ಅವರು ಬಾಯಿಗೆ ಸೆರಗನ್ನಡಯಿಟುಕೊಂಡು ಬಿಕ್ಕಳಿಸುತ ಹೊರಟು ಹೋದರು. ಡ್ಯೂನಾತಿವೆ.. ಯದೆಯಾಗಿನ ಮಾತನ್ನು ಯದೆಯಾಗ ಮಿಟುಕೊಂಡು ಹೋತಾವಲ್ಲಂತೀನಿ.. ಯಂದನಕಂತ ತಾನು ತನ್ನ ಕರುಳ ಕೂಗಿಗೆ ಗಮನ ಕೊಟ್ಟಿದ್ದಳೇ ಯಿನಾ ವಡಲ ಕೂಗಿಗೆ ಗಮನಕೊಟ್ಟಿರಲಿಲ್ಲ. ವಡಲು ಸುರುಸುರು ಅನ್ನಲಕ ಹತ್ತಿತು. ಹೊತ್ತಾರೆ ಮಡೆಪ್ಪನೋರ ಹೊಲದಲ್ಲಿ ಬೆಳೆಸೆಗಾಳುಜ್ಜಿಕೊಂಡು ತಿಂದಂಥಾಕೆ. ಕಡುದಮ್ಮನ ಹಳ್ಳದಿಂದ ಯರಡು ಬೊಗಸೆ ನೀರು ಕುಡಿದಿದ್ದಾಕೆ, ಯೇನೇನೋ, ಯಂಥೆಂಥವೋ ಅನುಮಾನಗಳಿಂದಾಗಿ ತನಗ ತನ್ನ ಮ್ಯಾಲ ವಂಚೂರಾರ ಖಜುರು ಯಿರಲಿಲ್ಲ.. ಹಂಗss ವಂದೇ ಸಮಕ ಕೂಗುತಾss ಕೂಗುತಾ ಹಾದಿಯಿಲ್ಲದ ಕಡೆ ಹಾದಿ ಮಾಡಿಕೊಂಡು ಹೋಗುತಲಿದ್ದ ಪರಸ್ಥಳದ ಮಂದಿ ಆಡುತಲಿದ್ದ ಸಪ್ಪನ ಬ್ಯಾಳಿಯಂಥ ಮಾತುಗಳನ್ನು ಕಿವಿಯಾರೆ ಕೇಳಿಸಿಕೊಂಡಳು.. ಅದರೊಟ್ಟಿಗೆ ತನ್ನನ್ಯಾರೋ ಕಾಲು ಹಿಡಿದು ಜಗ್ಗುತಲಿರುವಂಥ ಅನುಭವವಾತು... ಯಿದ್ದಕ್ಕಿದ್ದ ಮೊಲು ತನ್ನೆದೆಯ ಗುಡುರೊಳಗ ತನ್ನ ಗಂಡ ಮೋಬಯ್ಯನು ಹೊಡಮುರುದು ಯೇಳುತ್ತಿರುವಂತೆ ಭಾಸವಾಗತೊಡಗಿತು.. ಆತನನು ಅಲ್ಲಿಂದ ವುತಾರ ಮಾಡಲು ಪ್ರಯತ್ನಿಸಿದಳಾದರೂ ಸಾಧ್ಯವಾಗಲಿಲ್ಲ.. ಯಾಕ ಯೀ ಸವಗೇಡಿ ಹಿಂಗ ಕಾಣಿಸಿಕೊಂಡಯ್ಕೆ ಅಂತ ಯಂದಿನಂತೆ ಅಂದಾಡಿಕೊಳ್ಳಲು ಮನಸ್ಸಾಗಲಿಲ್ಲ. ತನ್ನ ಪತಿ ದಯವದ ಬಗ್ಗೆ ವಂದು ನಮೂನಿ ಕನುಕರ ತುಂಬಿಕೊಂತು.. ಅದೇ ಆಕೆಯನ್ನು ಹಿಂದಹಿಂದಕ ನಡೆಸತೊಡಗಿತು.. ಹಂಗ ನಡೆಸತೊಡಗಿದ್ದಂಥವುಗಳು ವಂದಲ್ಲಾ ಯರಡು ಚೌಡಿಗಳು ಯಂಬುವ ಸಂಗತಿ ತನಗ ಹೆಂಗ ಅದ್ಧವಾದೀತು.. ಅವನ್ನಿಲ್ಲಿಗೆ ಗದುಮಿರುವುದು ಹಪಜ್ಜನೇ ಯಂಬ ಸಂಗತಿ ತನಗ ಹೆಂಗ ಅಗ್ಗವಾದೀತು.... ವುದುಕದಿಂದ ಅಲ್ಲ ಬ್ಯಾರೆ ಆಗೋದಯ್ಕೆ ಕೇಕಕಣss.. ಚಿತ್ತಾರದಿಂದ ರೂಪ ಬ್ಯಾರೆ ಆಗೋದಯ್ಕೆ ಕೇಕಕಣss..