ಪುಟ:ಅರಮನೆ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಪಟ್ಟಣದ ಹೊರ ವಳಗ ಮಿಷೆಲ್ಲ ಸಂಭವಿಸಲಕ ತೊಂಬಲ ನಮಲಿದಷ್ಟು. ಚಿಲುಮೆಯಿಂದ ವಂದು ಧಮ್ಮು ಯಳೆಯುವಷ್ಟು. ಕಣ್ಣಿಂದೊಂದು ಹನಿ ವುದುರುವಷ್ಟು ವ್ಯಾಳೆ ಹಿಡಿಯಿತಂತೆ.... ಮೋಬಯ್ಯ ದಿಗ್ಗನೆಚ್ಚರಗೊಂಡು ಬೆವರಿನಿಂದ ತೊಯ್ದು ತಪ್ಪಟೆಯಾಗಿದ್ದ ಕಟ್ಟೆ ಮ್ಯಾಲ ಕಣ್ಣುಬಿಟ್ಟು ಪಿಳಿ ಪಿಳಿ ನೋಡಲು ತನ್ನೆದುರಿಗೆ ಅಂಬ್ರಾವತಿ ಪಟ್ಟಣದ ವಂದು ಕೇರಿಯು ಮಯ್ಯ ಚೆಲ್ಲಿಕೊಂಡು ಮಲಗಿರುವಂತೆ ಭಾಸವಾಯಿತು. ತನ್ನೊಂದಿಗೆ ತನ್ನ ಸರೀರವು ಮಾತಾಡಿದಂಗಾತಲ್ಲ.. ತನ್ನ ಸರೀರದೊಳಗೆ ಸಾಂಬವಿಯು ನೆಲೆಸಿದಂತಾತಲ್ಲ.. ಯಂದನಕಂತ ತನ್ನ ಸರೀರದ ಅಂಗಾಂಗಗಳನ್ನು ಮುಟ್ಟು ಮುಟ್ಟಿ ನೋಡಿಕೊಂಡನು. ಮೊದಲೇ ಚಟವುಳ್ಳ ಮನುಷ್ಯನಾದ ತಾನು ಚಿಲುಮೆಯಿಂದ ವಂದೆರಡು ದಮ್ಮು ಮ್ಯಾಲಿಂದ ಮ್ಯಾಲೆ ಯೆಳೆದನು. ಆತನ ಕಣ್ಣಿಂದ ಪುಳಕ್ಕಂತ ವುದುರಿದ ವಂದು ಬಿಂದುವು ನೆಲಕ್ಕೆ ಬಿದ್ದೊಡನೆ ಪಳಪಳ ಹೊಳೆಯುವ ಮುತ್ತಾಗಿ ಮಾರುಪಟ್ಟು ವುರುಳಿಕೋತ ವುರುಳಿಕೋತ ಆಟುದೂರ ಹೋಗಿ ಮುಗಿಲತ್ತ ಜಿಗಿದು ಸೂರನ ಬೆಳಕೊಳಗೆ ಲೀನವಾಯಿತಂತೆ.. ಅದೇ ಗಳಿಗೆ ವಳಗೆ ಆತನ ಸರೀರದಿಂದ ಹಳತಾದ ಭಾವನೆಗಳು ವುತಾರಗೊಂಡವಂತೆ, ಹೊಸತಾದ ಭಾವನೆಗಳು ಸೇರುಪಡೆ ಗೊಂಡವಂತೆ.. ಸಾಂಬವಿ ನೆಲೆಗೊಂಡಿರುವಂಥಾ ತನ್ನ ಸರೀರವು ಹೆಂಗಯೆ? ಯಿದರ ದರುಸನವನ್ನು ತಾನು ಪಡಕೊಳೋದಾದರು ಹೆಂಗೆ? ವಂದಾರ ಕನ್ನೂಡಿಹಳು ತನ್ನ ಆಜೂಬಾಜೂಕಿಲ್ಲವಲ್ಲಾ... ಯಂದು ಹಪಹಪಿಸಿದನಂತೆ.. ಖರೆ ಹೇಳಬೇಕೆಂದರ ಯದುವರೆಗೆ ತನ್ನನ್ನು ತಾನು ಮುಂದೂ ನೋಡಿಕೊಂಡಾತನಲ್ಲ ಮೋಬಯ್ಯ. ಅಂಥ ಹರಕತ್ತು ಯಂದೂ ಯದುರಾಗಿರಲಿಲ್ಲ... ತನ್ನ ಕಸುಬಿಗೆ ಆಶ್ರಯ ನೀಡಿರುವ ಪಿಕದಾನಿಯ ವುಬ್ಬು ತಗ್ಗಿನೊಳಗೆ ಆತ ತನ್ನನ್ನು ತಾನು ನೋಡಿಕೊಂಡಿರೋದುಂಟು. ಆದರೂ ಅದರ ಮಯ್ಯೋಳಗೆ ವಂದು ಕಂಡಿದ್ದರೆ ಯಿನ್ನೊಂದು ಕಂಡಿರಲಿಲ್ಲ. ಹಂಗ ನೋಡಿದರ ಕನ್ನೂಡಿ ಹಳ್ಳುಗಳಿರೋದು ಥಳಗೇರಿಯ ಯಲ್ಲಾರ ಕಣ್ಣುಗಳಲ್ಲಿ ಮಾತ್ರ ಗಂಡನ ಕಣ್ಣುಗಳಲ್ಲಿ ಹೆಂಡತಿಯು, ಹೆಂಡತಿಯ ಕಣ್ಣುಗಳಲ್ಲಿ ಗಂಡನು, ಗಂಡ ಹೆಂಡಿರ ಕಣ್ಣುಗಳಲ್ಲಿ ಮಕ್ಕಳು ಮರಿಗಳು, ಮಕ್ಕಳು ಮರಿಗಳ ಕಣ್ಣುಗಳಲ್ಲಿ ಥಳಗೇರಿಯು, ಥಳಗೇರಿಯ ವಬ್ಬರಾದರೂ ಯಂದೂ ತಮ್ಮ ತಮ್ಮ ನೆಳ್ಳುಗಳಿಗಾಗಿ ಆಸಪಟ್ಟವರಲ್ಲ.. ತಮಗೆ ತಾವು ಯಂದೂ ಮರುಳಾದವರೂ