ಪುಟ:ಅರಮನೆ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಹತ್ತಾರು ಕಾಮನ ಬಿಲ್ಲುಗಳನ್ನು ನೋಡಿ ಮೂಕಯಿಸುಮಿತರಾದರಂತೆ.. ಮಾರಮ್ಮನ ಗುಡಿಯಲಿದ್ದ ನಾಲಗೆಗಳಿಲ್ಲದ ಗಂಟೆಗಳು ಬಡಿದಾಡಿ ನಾದ ಮಾಡಿದವಂತೆ.. ಸಿವನೇ.... ಯಂಥಪ್ಪ ಅಂತೆ ಕಂತೆಗಳನ ನಂಬಲಕಾದೀತಾ.. ನಂಬದೆ ಯಿರಲಕಾದೀತಾ.. ತೊಟ್ಟಿಲೊಳಗ ಕೂಸು ಕಂದಮ್ಮಗಳನ್ನಿಟ್ಟು ಜೋಗುಳ ಪಾಡುವಂಥಾ ಸಾಂಬವಿಯು, ಲಕ್ಷೇಪಲಕ್ಷ ಪಕ್ಷಿಗಳ ಕಣ್ಣುಗಳ ಮೂಲಕ ಬೀರೇಳು ಲೋಕಗಳನ್ನು ಪರಿಪಾಲಿಸುವಂಥಾ ಸಾಂಬವಿಯು ಸದರಿ ಪಟ್ಟಣಕ್ಕೆ ಗುಳೇ ಬರುವುದೆಂದರೇನು? ವಬ್ಬ ಯಕಚಿತ್ ಗುಡಿ ಒಂದಲ ಮೂಳೆ ಮೋಬಯ್ಯನ ಕಣಸೊಳಗೆ ಕಾಣಿಸಿಕೊಳ್ಳುವುದೆಂದರೇನು? ಅವನ ಮುರುಕು ತಡಿಕೆಯಂಥ ಸರೀರದೊಳಗ ವಾಸ ಮಾಡಲಾರಂಭಿಸಿದ ಳೆಂದರೇನು? ಸಿವ.. ಸಿವಾ... ಈ ಸಂಗತಿಯು.... ... ನಿಂತವರ ಅಂಗಾಲ ಮೂಲಕ.. ಮಲಿಕ್ಕಂಡಿದ್ದವರ ಬೆನ್ನ ಹುರಿ ಮೂಲಕ. ಕೂಕಂಡಿದ್ದವರ ಅಂಡು ಮೂಲಕ. ಬಕಬಾರಲು ಬಿದ್ದುಕೊಂಡಿದ್ದವರ ಗದ್ದ ಬಾಯಿ ಮೂಲಕ. ಕಯ್ಕ ಮೂರುಕೊಂಡಿದ್ದವರ ಅಂಗಯ್ಯ ಮೂಲಕ ಅವುದೋ ಅಲ್ಲವೋ ಯಂಬಂತೆ.. ಸಬುದವಾಸನೆ ರೂಪಗಂಧಯಿಲ್ಲದೆ ಬಿತ್ತರ ಹರಕೋತ ಹೋತು.. ಯಲ್ಲಾರೊಳಗೂ ಯಂಥದೋ ವಂದು ಅಗೋಚರ ಆನಂದವು, ಅನಿರಚನೀಯ ಭಾವನೆಯು.. ಯಾಕೊ ಮುಲ್ಕಿ ಜುಮ್ಮೆಂದಂಗಾತಂತ ವಬ್ಬರು... ಸಂದು ಸಂದೀಲಿ ಯಂಥದೋ ಹರುದಾಡುತ ಕಚಗುಳಿಯಿಟ್ಟಂಗಾತಂತ ಯಿನ್ನೊಬ್ಬರು.. ಬಟಾ ಬಯಲೊಳಗೆ ಮಂಗಳ ವಾದ್ಯಗಳ ಮೊಳಗು ಕೇಳದಂಗಾತಂತ ಮತ್ತೊಬ್ಬರು.. ಸಿರಿಗಂಧ, ಹೊನ್ನಿ ಜುಮ್ಮಿಯೇ ಮೊದಲಾದ ಕಾಷ್ಟಗಳು ದಹಿಸುತ್ತಿರುವಂಥ ಸುವಾಸನೆಯು ತಮ್ಮ ಮೂಗಿಗೆ ಬಡಿಯಿತಂತ ಮಗುದೊಬ್ಬರು.. ಮೂಗರಿಗೆ ಮಾತಾಡತೀವೆಂಬ ಭಾವನೆ ಬಂತು. ಕಿವುಡ ಕೆಪ್ಪರ ಕಿವಿಗಳನು ಸಬುಧಗಳು ತುಂಬಿದವು. ಹೋಗಲೋ ಆಗಲೋ ಅಂತಿದ ಮುದೇರು ಗಪಂತ ಯದ್ದು ಕೂತರು ಹರೇದ ಹುಡುಗರಂಗೆ.. ಕಜ್ಜಿಪುಳ್ಳಿ ಕಂದಮ್ಮಗಳಂತೂ ಮುಗುಲಿಗೆ ಮುಖ ಮಾಡಿ ಕೇಕೆ ಹಾಕಿದವು.. ಕಾಗೆ ಕೋಗಿಲೆಗಳ, ಕೆಂಭೂತ ನವಿಲುಗಳ, ಯಿರುವೆ ಗೊದ್ದಿಗಗಳ ನಡುವಿನ ತಾರತಮ್ಯ ಅಳಿಯಿತು.. ಅಂಗುಲಂಗುಲ ಅಂಬೆಗಾಲಿಟ್ಟು ದೂರವಳೆಯೋ ಕಂಬಳಿ ಹುಳುಗಳು ಬಣ ಬಣ್ಣದ ಚಿಟ್ಟೆಗಳಾಗಿ ಹಾರಿ ಬಯಲಿಗೆ ಕಸೂತಿ ಹಾಕಿದವಂತೆ....