ಪುಟ:ಅರಮನೆ.pdf/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೭೭ ವುಡುಗಿದರು. ಸ್ಕೂವರನು ಮಾತ್ರಕೊಲೆಯಾದಲ್ಲಿ ಯದುರು ಮುಖದ ಆಂಜನೇಯ ಸ್ವಾಮಿಗೆ ಬೆಣ್ಣೆಯಲಂಕಾರ ಮಾಡಿಸುವುದಾಗಿ ಹರಕೆ ಹೊತ್ತರೆಂಬಲ್ಲಿಗೆ ಸಿವಸಂಕರ ಮಾದೇವಾ.......... ಅತ್ತ ಕೂಡ್ಲಿಗಿ ಪಟ್ಟಣದೊಳಗ... ಮುರಾರಿಗೆ ಗಡಿಪಾರು ಶಿಕ್ಷೆ ಯಿಧಿಸಿದ ರಾಯನು ತಲೆನೋವ ಶಮನಕ್ಕಾಗಿ ಕಷಾಯ ಸೇವಿಸಿದನು. ಅಶಾಂತಿ ಶಮನಕ್ಕಾಗಿ ಹೆಚ್ಚುವರಿ ಸಂಧ್ಯಾವಂದನೆಯನ್ನೂ ಮಾಡಿದನು. ಆದರೆ ಸುಖ ಶಾಂತಿ ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯವಾಗಲಿಲ್ಲ. ಮುಖ್ಯವಾಗಿ ತಾಯಕ್ಕಳಿಗೂ, ಆಕೆಯ ಮಗಳಿಗೂ ಸೂಕ್ತ ಭದ್ರತಾ ಯೇರುಪಾಡು ಮಾಡಬೇಕೆಂದು ನಿರರಿಸಿದ.. ತನ್ನ ಕರವ್ಯವೆಂದೂ ಬಗೆದ.. ಸಶಸ್ತ್ರಸಿಪಾಯಿಗಳೊಂದಿಗೆ ತಾನೀಗಲೇ ಅಲ್ಲಿಗೆ ಹೋಗಬೇಕು.. ಆಕೆಯ ಧಯರ ಸಾಹಸವನ್ನು ಅಭಿನಂದಿಸಬೇಕು.. ಯಿಷ್ಟು ದಿವಸಗಳ ಕಾಲ ಯಲ್ಲಿಗೆ ಯಾವ ಕಾರಣಕ್ಕೆ ಹೋಗಿದ್ದಳೆಂಬುದನ್ನು ಗುಟ್ಟಾಗಿ ತಿಳಿದುಕೊಳ್ಳಬೇಕು? ಯಂಬಿವೇ ಮೊದಲಾದ ವುದ್ದೇಶಗಳನಿಟ್ಟುಕೊಂಡು ರಾಯನು ಯಿನ್ನೇನು ಮನೆ ಬಿಡಬೇಕೆನ್ನುವಷ್ಟರೊಳಗ ಆತನ ಹೆಂಡತಿ ಛೋಟಾರಂತ ಛೇರಿಕೊಂಡು ಬಿಡುವುದೇನು? ಅದೇ ಸಮಯಕ್ಕೆ ಸರಿಯಾಗಿ..... ಅತ್ತ ಬಂಗಲೆಯೊಳಗ ಜೆನ್ನಿಫರಮ್ಮ ತಾನಿಷ್ಟು ದಿನಮಾನ ರಚನೆಯಲ್ಲಿ ಮುಳುಗಿದ್ದು ಸೂರಗೊಂಡ ಕಲಾಕ್ರುತಿಗೆ 'ತಾಯಿ' ಯಂದು ನಾಮಕರಣ ಮಾಡಿದ ಮರುಗಳಿಗೆಯಲ್ಲೇ ವಾಸ್ತವಕ್ಕೆ ಮರಳಿ ಯೇಂಜಲ್ ಯಂದು ವುದ್ದಾರ ತೆಗೆದಳು. ಅತ್ತ ತಿಲ್ಲಾನರವರ ಮನೆಯೊಳಗ ತಾಯಕ್ಕ ಮುರಾರಿ ಯಂಬ ಶನಿ ತೊಲಗಿತೆಂಬ ಸುದ್ದಿ ತಿಳಿದೊಡನೆ ಕೊಬ್ಬರಿ ಚಿನ್ನಿ ಯಂಬ ಯಿಶೇಷ ತಿನಿಸನ್ನು ತನ್ನ ಕಯ್ಯಾರ ತನ್ನ ಸುಪುತ್ರಿಯ ಹೊಂದಾವರೆ ಯಂಥ ಬಾಯೊಳಗ ಯಿಟ್ಟಳಲ್ಲದೆ ಆ ನಾಲ್ಕು ಮಂದಿ ದಾಂಡಿಗರಿಗೆ ಪುಷ್ಕಳವಾಗಿ ನೀಡಿದಳು. ಅಂತೂ ತಮ್ಮ ಮನೆಗೆ ಸರಕಾರಿ ಸ್ಥಾನಮಾನ ಲಭಿಸಲು ಕಾರಣೀಭೂತನಾಗಿರುವ ರಾಯನನ್ನು ವಂದು ಸಲ ನೆನಪಿಸಿಕೊಂಡಳು.. ಆತನ ನಂದಗೋಕುಲ ಸದ್ರುಶ ರೂಪವು ತನ್ನೆದೆಯೊಳಗ ಯಿನ್ನೇನು ಬೆಳೆಯಬೇಕೆನ್ನುವಷ್ಟರಲ್ಲಿ ನೀಲಕಂಠಪ್ಪನನ್ನು ಕರೆದುಕೊಂಡು ಬರಲಕ ಯಿಶೇಷ ಧೂತನನ್ನು ಬಣಜಿಗರ ಮೋಣಿಗೆ ಕಳಿಸಿದಳು.. ಯಿಶೇಷ ಧೂತನ ಕರೆಗೆ ಕೊಡಲು ನೀಲಕಂಠಪ್ಪ