ಪುಟ:ಅರಮನೆ.pdf/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೮ ಅರಮನೆ ಮೊದಮೊದಲ ಮಿಜಿಮಿಜಿ ಮಾಡಿದ.. ಗುಹಸ್ಥಾಶ್ರಮ ಧರುಮದ ಕಟ್ಟುಪಾಡುಗಳನ್ನು ಮತ ಮತ್ತೆ ನೆನಪು ಮಾಡಿಕೊಟ್ಟ ತನ್ನ ಹೆಂಡತಿಗೆ ತಿಲ್ಲಾನ ನಿವಾಸದ ಸಹವಾಸದಿಂದಾಗಿಯೇ ತನಗೆ ಸಾಮಾಜಿಕ ಸ್ಥಾನಮಾನ ದ್ವಿಗುಣಗೊಂಡಿರುವುದೆಂದೂ.. ಆಕೆಯೊಂದಿಗೆ ತನ್ನದು ಕೇವಲ ಭಾವನಾತುಮಕ ಸಂಬಂಧವೆಂದೂ ಹೇಳಿ ತಪ್ಪಿಸದೆ ಯಿರಲಿಲ್ಲ.. ಧೂತನ ಮೊಹೆಗೂ ಮೀರಿ ರೂಪಾಲಂಕಾರ ಮಾಡಿಕೊಳ್ಳದೆ ಯಿರಲಿಲ್ಲ... ಅಂತೂ ಹೊರಟು..... ಬಂದ ಬುಗುಡಿಯನ್ನು ತಾಯಕ್ಕ ದುಗುಡ, ಪ್ರೀತಿ, ಮವುನಗಳ ಸಮ್ಮಿಶ್ರಣದಿಂದ ಸ್ವಾಗತಿಸಿ ಕೊಬ್ಬರಿ ಚಿನ್ನಿಯಿದ್ದ ತಳಿಗೆಯನ್ನು ಆತನ ಮುಂದೆ ಯಿರಿಸಿದಳು.. ಚಿನ್ನಾಸಾನಿಯ ಸಮಕ್ಷಮದಲ್ಲಿ ಅವರೀಲ್ವರು ತುಸು ಹೊತ್ತು ಕಾಲ ಮವುನದಿಂದ್ದು ನಿಟ್ಟುಸಿರುಗಳ ಬಿತ್ತಾಟ ಮಾಡಿದರೆಂಬಲ್ಲಿಗೆ ಸಿವನೆ.... ಅತ್ತ ಗುಂತಕಲ್ಲು ಪ್ರಾಂತದಾದ್ಯಂತ ಸೂತಕ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಯಿತ್ತು. ಬಳ್ಳಾರಿಗೆ ಬೊಬ್ಬಿಲಿ ನಾಗಿರೆಡ್ಡಿಯ ಕಳೇಬರ ತರಲೆಂದು ಹೋದವರು ಬರಿಗಯ್ದಿ ಮರಳಿ ಬಂದರು. ಕಳೇಬರ ತಾನಿದ್ದ ಪೆಟ್ಟಿಗೆಯಿಂದ ಅತ್ಯಾಶ್ಚಯ್ಯ ರೀತಿಯಲ್ಲಿ ಮಾಯವಾಗಿರುದೆಂಬ, ಮರಣದಂಡನೆಯನ್ನೇ ಯಿಧಿಸಿಲ್ಲ ಯಂಬ, ಶವಪೆಟ್ಟಿಗೆಯೊಳಗಿಂದದ್ದು ನಾಗಿರೆಡ್ಡಿಯು ಗಡೇಕಲ್ಲಿಗೆ ನಡೆದುಕೊಂಡೇ ಹೊರಟು ಹೋದನೆಂಬ ಯಿಂಥ ಅಂತೆ ಕಂತೆಗಳು ಸದರಿ ಸೀಮೆಯ ತುಂಬ ದಟ್ಟವಾಗಿ ಹಬ್ಬಿಬಿಟ್ಟಿದ್ದವು.. ಅದೂ ಅಲ್ಲದೆ ರಥೋತ್ಸವದ ನಂತರ ಭೀಮಲಿಂಗೇಶ್ವರ ಸ್ವಾಮಿಯ ಗರಭ ಗುಡಿ ಪ್ರವೇಶ ಮಾಡಿದ್ದನ್ನು ನೋಡಿದ್ದರೇ ಹೊರತು ಮತ್ತೆ ಹೊರಬಂದು ಸಾರುವಜನಿಕವಾಗಿ ಕಾಣಿಸಿಕೊಂಡದ್ದನ್ನು ಯಾರೊಬ್ಬರು ನೋಡಿರಲಿಲ್ಲ.. ದಯವಾಮುಸಸಂಭೂತನಾದ ರೆಡ್ಡಿಯು ಭೀಮೇಶ್ವರಸ್ವಾಮಿಲಿಂಗದೊಳಗೆ ಅಯ್ಕ್ಯವಾಗಿರದೆ ಯಿರಲಾರನು.. ಯಂಬಿವೇ ಮೊದಲಾದ ಸಮಾಧಾನಕರ ಅಂಶಗಳು ಗಡೇಕಲ್ಲಿಂದ ಆರಂಭಗೊಂಡು...!? ಅತ್ತ ಕುದುರೆಡವು ಪಟ್ಟಣದ ವಂದು ಕಡೇಕ ಗಂಟಲಯ್ಯನು “ಅಹಹಾ...... ದೇವಿ.. ಅಹಹಹಾss ಸಾಂಬವಿss ಕಾಯವಿಲ್ಲದ ಪುರುಷನು ಕಸವಿಲ್ಲದ ಭೂಮಿಯಲ್ಲಿ ಕಾಮಿತ ಯಂಬ ಬೀಜವ ಬಿತ್ತಲು.. ಅದು ಅಂಕುರಿಸಿತು ತಾಯಿss ವಂದು ಯರಡಾಯಿತು ತಾಯಿ.. ಯರಡು ನಾಲಕಾಯಿತು ತಾಯೀ.. ನಾಕು ಮುನ್ನೂರಾ ಅರವತ್ತಯ್ದು ಆಯಿತು ತಾಯಿ... ಬಟಾ ಬಯಲೊಳಗ ತೊಟ್ಟು ಬಿಟ್ಟಿತ್ತು ತಾಯಿ. ಜಗಜ್ಜನನಿಯಾದ. ಬಹುಪರಾಕ್..”