ಪುಟ:ಅರಮನೆ.pdf/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೮೧ ಮ್ಯಾಲೊಂದರಂತೆ ನಿಟ್ಟುಸುರು ಬಿಡುತ ಚಿಂತಾಕ್ರಾಂತನಾಗಿದ್ದನು. ಆತನು ತನ್ನ ಪಿಳ್ಳೆಯನ್ನು ಹರಾಳು, ಬರಾಳು, ತಿಂದರಾಳು, ಕುಡುದರಾಳು ಯಂಬಿವೇ ಮೊದಲಾದ ದೇಸ ಯಿದೆಗಳ ವೈದ್ಯರಿಗೆ ತೋರಿಸಿದ್ದು ಫಲಕಾರಿಯಾಗಿರಲಿಲ್ಲ... ನಾನಾ ನಮೂನಿ ಸಭ್ಯಸ್ಥ, ಅಸಭ್ಯಸ್ಥ ದೇವರು ದಿಂಡಿರುಗಳಿಗೆ ನಡಕೊಂಡದ್ದೂ ಫಲಕಾರಿಯಾಗಿರಲಿಲ್ಲ.. ರೋಸಿ ಹೋಗಿ ಆಕೆಯ ನಸೀಬದಲ್ಲಿದ್ದಂಗಾಯ್ತದೆ ಯಂದು ನಿಲ್ದಾರ ಮಾಡಿ ಕಯ್ಕ ಚೆಲ್ಲಿದ್ದನು. ಹೇಗ್ಗೆರಡು ದಿವಸಗಳಿಂದ ರೋಗ ವುಲ್ಬಣಗೊಂಡು ಕಂಕಾಳಿ ಬಲು ನಿತ್ರಾಣಳಾಗಿದ್ದಳು.. ಕೂಳು ಸೇರಿಕೆಯಿರಲಿಲ್ಲ... ನೀರು ನಿಡಿ ಸೇರಿಕೆಯಿರಲಿಲ್ಲ.. ಮುಂದೇಸಿಂದ ಮಗಳೂ ಕಮ್ಮ ಬಿಡಲಿರುವಳು, ಹಿಂದೇಸಿಂದ ಅಳಿಯನೂ ಕಯ್ಯ ಬಿಡಲಿರುವನು. ಆಮ್ಯಾಲ ಭೂಮಿಗೆ ಭಾರವಾಗಿ ವುಳುಕೊಳ್ಳಲಿರುವುದು ತಾನೋಲ್ಡನೆ.. ತಾನ್ಯಾವ ಪುರುಷಾರಕ್ಕ ಬದುಕಿರಬೇಕು.. ತಾನೂ ಸಿವನ ಪಾದ ಸೇರಿಕೊಂಡರಾಯಿತು. ಅದೇ ಸಮಯಕ್ಕೆ ಸರಿಯಾಗಿ.... ಕುದುರೆಡವ ಮಾದಿಗರ ಪಯ್ಕೆ ಮೋಗ್ಯನಾದ ಯಾಕುಂದನು ಹಲಕುಂದನೊಂದಿಗೆ ಹೋಗಿ ಆ ಮನೆ ಯದುರು ನಿಂತು 'ಭವತೀ ಭಿಕ್ಷಾಂದೇಹಿ'ಯಂದು ಕೂಗು ಹಾಕಿದನು. ಯಾರೋ ಭಿಕ್ಷುಕರು ಬಂದವರಂತ ತಡಸಾಲವ್ವ ಮೊರದೊಳಗ ಜೋಳ ತಂದು ಜೋಳಿಗೆ ವಡ್ಡಿರಯ್ಯಾ ಅಂದಳು.. ಅದಕ್ಕವರು ದವಸ ಬ್ಯಾಡ ತಾಯಿ, ಧಾನ್ಯ ಬ್ಯಾಡ ತಾಯಿ ಅಂದರು. ಮತ್ತೇನು ಬಗಸುತೀರಯ್ಯಾ ಯಂದು ಕೇಳಿದಳು... ಅದಕಿದ್ದು ಅವರು ನಾವು ಕುದುರೆಡವ ಸಾಂಬವಿ ಕಡೇರದ್ವಾ, ತಾಯಿ ಕೋಣ ಬಗಸ್ಯಾಳ.. ಅದನು ಜೋಳಿಗೆಗೆ ಹಾಕಿ ಮೋಕ್ಷ ಪಡೀರಾ ಯಂದರು.. ದಂಧಕ್ಕಿಯಲ್ಲಿದ್ದ ಹರೇದ ಕೋಣವು ವಯ್ಯ ವನ್ನ ಯಂಬ ಭಾಷೆಯಲ್ಲಿ ತನ್ನ ಯಿರುವನ್ನು ಸಾಬೀತುಪಡಿಸಿತು. ತಡಸಾಲವ್ವ “ಯೇ ಸೀಮೇಲಿ ವುಳುಕೊಂಡಿರುವುದು ಯಿದೊಂದೇ ಕ್ಯಾಣ ಕನರಯ್ಯಾ.. ಯಿದನು ಕಳುವಿದಲ್ಲಿ ಸದರಿ ಸೀಮೆಯು ಹಾಲು ಹಳ್ಳದಿಂದ ವಂಚಿತವಾಗುತಯ್ಕೆ.. ಅದಕ್ಕೆ ಬದಲಾಗಿ ಯಿನ್ನೊಂದು ಮೊರ ಜ್ವಾಳ ನೀಡೇನು? ಯಂದು ಹೇಳಿದಳು.. ಅಲ್ಲೇ ಪಳುಗಟ್ಟೆ ಮ್ಯಾಲ ಹೋಗಲೋ ಆಗಲೋ ಅಂಬುತಲಿದ್ದ ಮಗಳ ಜೀವಚ್ಛವವನ್ನು ಯದುರಿಗೆ ಮಲಗಿಸಿಕೊಂಡು ರೋಧನ ಮಾಡುತಲಿದ್ದ ಅಳ್ಳಾಡೆಪ್ಪನು ನಮ್ಮದೇ ನಮಗ ಮಸ್ತಾಗಯ್ತಯ್ಯಾ... ರಿಪಿ ರಿಷಿ ಮಾಡಿ ಹೊಟ್ಟೆ ವುರುಸಬೇಡಿರಯ್ಯಾ ಯಂದನಕಂತ ಕಮ್ಮ ಮುಗುದು