ಪುಟ:ಅರಮನೆ.pdf/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೯೩ ಅಣಿಮಾಂಡವ್ಯಮಾಚಾರೈರ ನೇತ್ರುತ್ವದಲ್ಲಿ ನಿಯೋಗವೊಂದು ಕಲೆಟ್ಟರು (ಅಯ್ಯೋ ತಮ್ಮ ನಮಕ ಚಮಕದ ಜಿಹೈಯಿಂದ ಯೀ ಯಿಂಗ್ಲಿಷು ಸಬುಧವು!. ಛೇ..ಛೇ...ಯಿದಕ್ಕೆ ಸಮುಸ್ಕೃತದಲ್ಲಿ ಪತ್ಯಾಯವಾಗಿ ಯೇನುಂಟು?) ಸಾಹೇಬ (ಯಿದೂ ಮೇಚ್ಚಸಬುಧವೇ) ನಾದ ಥಾಮಸು ಮನೋ (ಅಯ್ಯೋ ಸಾಂತಂ ಪಾಪಂ! ಯೀ ನಾಮವಾಚಕವನ್ನು ಸಮುಸ್ಕೃತದಲ್ಲಿ ಯಾವ ರೀತಿ ಹೇಳುವುದು!) ನನ್ನು ಭೆಟ್ಟಿ ಮಾಡಿ, ಚರಚೆ ಮಾಡುವುದು. ಯಿತ್ಯಾದಿ.. ಯಿತ್ಯಾದಿ ನಿಶ್ಚಯಗಳನ್ನು ಸಭೆಂತು ಮೇಕಗ್ರೀವಂಗಾ ಕಮ್ಮಿ ಕೊಳ್ಳಲಾಯಿತು. ಭಾಗವಹಿಸಿದ್ದ ಆಚಾದ್ಯರೆಲ್ಲರೂ ಮನುಷ್ಯ ತಿಯ ಮ್ಯಾಲ ತಮ್ಮ ತಮ್ಮ ಹಸ್ತಂಬುಜಲನು ಯಿಟ್ಟು ಪ್ರತಿ ಮಾಡಿದರು. ಸಭೆ ಬರಖಾಸ್ತಾಯಿತು. ಅವರೆಲ್ಲ ತಮ್ಮ ತಮ್ಮ ಅಗ್ರಹಾರಂಗಳಿಗೆ ಚದುರಿ ಸೇರಿಕೊಂಡ ರೆಂಬಲ್ಲಿಗೆ... ಯೀ ಪ್ರಕಾರವಾಗಿ ಸೇರಿಕೊಂಡ ಆಚಾರರು ಪ್ರತಿಯೊಂದು ಗ್ರುಹದ ಯಜಮಾನನನ್ನು ಖುದ್ದ ಕಂಡು ನೀವು ನಿಮ್ಮ ನಿಮ್ಮ ಗೋಡೆಗಳನ್ನು, ತುಳಸಿಕಟ್ಟೆಗಳನ್ನು ನಿಮ್ಮ ನಿಮ್ಮ ಜಿಹ್ನೆಗಳನ್ನು ಮುಖ್ಯವಾಗಿ ನಿಮ್ಮ ನಿಮ್ಮ ಮನಸ್ಸುಗಳನ್ನು ಫಲಾನ ಭಾಷೆಯಿಂದ ರಕ್ಷಿಸಬೇಕೆಂದು ಹೇಳ ತೊಡಗಿದರು. ಅದಕ್ಕವರು ಸಮ್ಮತಿಸಿದ ಫಲವಾಗಿ, ಅವರವರ ಕುಟುಂಬದ ಸದಸ್ಯರು, ಬಾಲಸದಸ್ಯರು ಸಹಕಾರ ನೀಡಿದ ಫಲವಾಗಿ... ಸುಣ್ಣಬಣ್ಣ ಪೊರಕೆಗಳ ಬೇಡಿಕೆ ಹೆಚ್ಚಿತು. ಯಲ್ಲೆಲ್ಲಿ ಯಿಂಗ್ಲೀಷು ಅಕ್ಷರಗಳಿದ್ದವೋ ಅವುಗಳ ಮ್ಯಾಲೆಲ್ಲ ಸುಣ್ಣ ಲೇಪಿಸುವ, ಯಲ್ಲೆಲ್ಲಿ ಹ್ಯಾಟು ಸೂಟು ಬೂಟುಗಳ ವಯ್ಯಾರದ ಚಿತ್ರಗಳಿದ್ದವೋ, ಅವುಗಳ ಮ್ಯಾಲೆಲ್ಲ ಬಣ್ಣವನ್ನು ಲೇಪಿಸುವ ಕಾರಗಳು ಅಹಲ್ಕಿತಿ ನಡೆಯಲಾರಂಭಿಸಿದ ಪರಿಣಾಮವಾಗಿ.. ಆಚಾರರು ತಮ್ಮ ತಮ್ಮ ಅಗ್ರಹಾರದ ವಂದೊಂದು ಬೀದಿಯಲ್ಲಿ ಆಯಾರ್ಮೊಣಿಯ ಸದಸ್ಯರನ್ನುದ್ದೇಶಿಸಿ ಯಿಂಗ್ಲೀಷು ಭಾಷಾ ಪ್ರಚಾರಕರನ್ನು, ಯಿಂಗ್ಲೀಷು ಭಾಷೆಯ ರೂಪದರಿಗಳನ್ನು, ಕಲಿತು ಕಲಿಸಲೆಂದು ಬರುವವರನ್ನು ಯಾವ ಕಾರಣಕ್ಕೂ ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕೆಂಬ, ಅವರ ಅಮೇಧ್ಯ ನೆರಳು ಸೋಂಕದಂತೆ ಯಚ್ಚರವಹಿಸಬೇಕೆಂಬ, ಅವರನ್ನು ಮಾತಾಡಿಸಲೇಕೂಡದೆಂಬ, ಅವರಿಗೆ ಯಾವ ರೂಪದಲ್ಲಾದರೂ ಅಗ್ನಿ, ಜಲ, ಆಹಾರವನ್ನು ಪೂರಯಿಸಬಾರದೆಂಬ ಸಲಹೆ ನೀಡಿದ ಪರಿಣಾಮವಾಗಿ....