ಪುಟ:ಅರಮನೆ.pdf/೪೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೫೨ ಅರಮನೆ ಮಾಡಿಸಲಕೆಂದು ಸೊಳ್ಳೆ ದೊಮಾರಿ, ಚಿಗಟಗಳು ಯಿಜಯನಗರ ಸಾಮುರಾಜ್ಯದ ಕಡೇಲಿಂದಲೂ ಹೊರಟು ಬರುತಿರುವಾಗ್ಗೆ..... - ಮೋಬಯ್ಯ ಮತ್ತವನ ಸಂಗಡಿಗರನ್ನು ಅರಮನೆಯಿಂದ ನಿಖಾಲೆ ಮಾಡಿಸಲಕೆಂದು... ಆಸ್ತಿಕರಿಗೆ ಗುಣ ಪಾಠ ಕಲಿಸಲಕೆಂದು.. ಕುಂಪಣಿ ಸರಕಾರದ ವತಿಯಿಂದ ಅಲಬರನೆಂಬ ಸೂರ ಸೇನಾಪತಿಯು ಸದರೀ ಪಟ್ಟಣಕ್ಕೆ ಆಗಮನ ಮಾಡಲಿರುವನೆಂಬ ವರಮಾನವು ಯತ್ತಲಿಂದಲೊ ಮೂಸು ಬಿಟ್ಟಂತೆ ಘಮ್ಮನೆ ಹಬ್ಬಿದೇಟಿಗೆ ಯಾವತ್ತೂ ಮಂದಿಯು ಜಗದಂಬಾ... ಜಗದಂಬಾ........ ಯಂದು ತಮ್ಮ ತಮ್ಮ ಕಿವಿಗಳನ್ನು ತಮ್ಮ ತಮ್ಮ ಕರಕಮಲಗಳಿಂದ ಮುಚ್ಚಿಕೊಂಡುಬಿಟ್ಟಿತು.... ಆ ಸುದ್ದಿ ಯತ್ತಲಿಂದ ಬಂದಿತೋ ಸಿವ ಸಿವಾ.. ಪಾರಿವಾಳದ ಕಾಲಿಗಂಟಿಕೊಂಡು ಬಂದಿತೋ? ಅದರ ಯಿವರವುಳ್ಳ ಟಪಾಲು ಗಾಳಿಗುಂಟ ಹಾರಿ ಬಂದಿತೋ.. ಅಂತೂ ಜನರೆಂಭೋ ಜನರು ಕಲಾವುಲ್ಲಿಯಾದರು.. ತಮ್ಮನ್ನು ತಾವು ಬಚ್ಚಿಟ್ಟುಕೊಳ್ಳಲಕ ಜಗೇವುಗಳಿಗಾಗಿ ಸೋಧನ ಮಾಡಿದರು, ತಮ್ಮ ನಗನಾಣ್ಯ ವಡವೆ ವಸ್ತರ ಅಡಗಿಸಿಡಲಕ ಅಗೇವುಗಳಿಗಾಗಿ ಸೋಧನ ಮಾಡಿದರು. ಕುಂಪಣಿ ಸಕರ ಕಣ್ಣಿಗೆ ಬಿದ್ದರೆಲ್ಲಿ ಸುಟ್ಟು ಭಸುಮ ಆಗುತೇಮೋ ಅಂತ ತಮ್ಮ ತಮ್ಮ ಮನೆಗಳ ಕಿಟಕಿ ಬಾಗಿಲು ಜಾಲಂದ್ರಗಳ ತಿದ್ದುಪಡಿ ಮಾಡಿದರು. ಕತ್ತಲು ಕವಳದಾಗ ಆಗಸದಲ್ಲಿ ಬಾಲದ ಚುಕ್ಕಿಗಳು ಕಾಣಿಸಿಕೊಂಡಿದ್ದವಾss... ಚುಕ್ಕಿಗಳು ವುದರಿದವಾSS.. ಯಂದು ವಿಚಾರಿಸಿದರು. ಕಾಗೆಗಳು ಅರಚಿದವಾss.. ಗೂಗೆಗಳು ಕೂಗಿದವಾss.. ನಾಯಿನರಿಗಳು ಮುಗಲಿಗೆ ಮುಖ ಮಾಡಿ ಮೂಳಿಟವಾ ಯಂದು ಯಿಚಾರಿಸಿದರು.. ವಂದಾರ ಅಪಸಗುನ ಕಾಣಿಸಿಕೊಂಡಿಲ್ಲ ಅಂದ ಮ್ಯಾಲ ಧಯರತಾಳುವ ಧಯರ್ ಅವರಿಗೆ ಬರಲಿಲ್ಲ. ಯಿದ್ದಿಲಾಕಾರದ ಕತ್ತಲೊಳಗೆ ಕೆಂಡದುಂಡೆಗಳಂತೆ ಗೋಚರಿಸೋ ಕುಂಪಣಿ ಮಂದಿ ಯೇನಾರ ತಮ್ಮ ಮಯ್ಯ ಮ್ಯಾಲ ಮುಗಿಬಿದ್ದಲ್ಲಿ ಆತುಮ ರಕ್ಷಣಾ ಮಾಡಿಕೊಳ್ಳಬೇಕೆಂದು ಭಟ್ಟಿ ಭಲ್ಲೇವುಗಳನ್ನು ಮೂಲೆ ಮುರುಕಟ್ಟಿನಲ್ಲಿಂದ ತೆಗೆದು ಗಸಗಸ ವುಜ್ಜಿ, ಥಳಥಳ ಹೊಳೆಯುವಂತೆ ಮಾಡಿ ಸಡನ್ನ ಕಯ್ದೆ ಯಟುಕೋ ರೀತಿಯಲ್ಲಿ ಯಿಟ್ಟುಕೊಂಡರು. ಯಿಷ್ಟು ಮಾಡುತ್ತಾ ಮಾಡುತಾSS ಗುಸುಗುಸನೆ ಆಡುತಾ ಮಾತಾಡುತಾ ಗುಂಪುಗಳಾಗಿ ಯಿಂಗಡಿಸಿಕೊಂಡು... ಪಟ್ಟಣದ ಹೊರಗಡೆ ಯಿದ್ದ ರಣಬಯಲು ಪವುರಾಣಿಕ ಕಾಲದ್ದು.. ವಂದು ಕಾಲದಲ್ಲಿ ಅಲ್ಲಿ ಜರಾಸಂಧನ ಸರೀರದ ವಾಮಭಾಗಯಿತ್ತಂತ..