ಪುಟ:ಅರಮನೆ.pdf/೪೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೫೧ ಸೀಮೆಯಲ್ಲಿ ವುಚ್ಚಾಟಿತ ಪಾಳೇಗಾಂಡುಗಳಿಂದ ತಲೆದೋರಲಿದ್ದ ಅಂತರ್‌ಯುದ್ಧವನ್ನು ಹತ್ತಿಕ್ಕಲೋಸುಗ ಕೂಡ್ಲಿಗಿಗೆ ಯಡ್ಡವರನ ಕಯ್ಯೋಕೆಳಗೆ ಕಾರ ನಿರುವಹಿಸಲು ಕಳುಹಿಸಿಕೊಟ್ಟು ಯರಡು ತಿಂಗಳಾಗಿರಲಿಲ್ಲ. ಕೆನ್ನೆಗೂದಲಿಗೂ, ಗಲ್ಲಿ ಮೀಸೆಗೂ ಸಂಬಂಧ ಬೆಸೆದಿದ್ದ ಅತುಲಬಲ ಪರಾಕ್ರಮಿ ಅಲಬರನು ನೆಪೋಲಿಯನ್ ಸಾಮ್ರಾಟನ ಸೇನಾಧಿಪತಿಯಾಗಿದ್ದ ಶೂರ ಕ್ರಿಷ್ಟೋಫರನ ಮಗನಾದ ನಾನು ವಬ್ಬ ಯಕಃಶ್ಚಿತ್ ಮೋಬಯ್ಯನೆಂಬ ಶಿಖಂಡಿಯ ಮೇಲೆ ದಂಡೆತ್ತಿ ಹೋಗುವುದೆ?” ಯಂದನು ಯಡ್ಡವರುನ ಆದೇಸಕ್ಕೆ ವುತ್ತರವಾಗಿ.... ಬರುವ ಭಕುತಾದಿ ಮಂದಿ ವುಂಡು ಚೆಲ್ಲುವ ಯಂಜಲನ್ನು ತಿಂದು ಸಿರಿಚ್ಛೇತ್ರದ ಪರಿಸರ ನಯರುಮಲ್ಯವನ್ನು ಕಾಪಾಡಲಕೆಂದು ಬೊಮ್ಮಗೊಂಡನ ಕೆರೆ, ತುಪ್ಪಾನಕನಳ್ಳಿ ಕಡೇಲಿಂದ ಕಾಗೆಗಳು ಸಾವುರ ಸಂಖ್ಯೆಯಲ್ಲಿ ಕುದುರೆಡವು ಕಡೇಕೆ ಮುಖ ಮಾಡಿರುವಾಗ್ಗೆ... ಬರುವ ಭಕುತಾದಿ ಮಂದಿಯ ಮಾನ ಗುರವ ಕಾಪಾಡಲಕೆಂದು.. ಆಸ್ತಿಪಾಸ್ತಿ ರಕ್ಷಣೆ ಮಾಡಲಕೆಂದು.. ಆಗಾಗ್ಗೆ ಅರಚಿ ಗಸ್ತು ತಿರುಗಲಕೆಂದು ಗಂಧತ್ವ ಲೋಕದ ಅತಿಗಣ್ಯ ಗಂಧಲ್ವರು ನಾಯಿ ರೂಪಧಾರಣ ಮಾಡಿ ನೂರಾರರ ಸಂಖ್ಯೆಯಲ್ಲಿ ಬಾಲ ಅಳ್ಳಾಡಿಸುತ ಕುದುರೆಡವು ಪಟ್ಟಣದ ಕಡೆ ಮುಖ ಮಾಡಿ ಬರುವ ಭಕುತಾದಿ ಮಂದಿಂರು ಕುಂಡಲಾಚ್ಛಾದಿತ ಕಗ್ಗಗಳಿಗೆ ಸಂಗೀತಸುಧೆ ಹರಿಸಿ ತಂಪು ಮಾಡಲಕೆಂದು.. ಸುಖ ನಿದ್ದೆ ನೀಡಲಕೆಂದು.. ಯಲೆ, ಪತ್ತೊಳಿ ತಿಂದು ಗ್ರಾಮ ನಯರುಮಲ್ಯ ಕಾಪಾಡಲಕೆಂದು ಕಿನ್ನರ ಲೋಕದ ಕಿನ್ನರರು, ಕಿಂಪುರುಷಲೋಕದ ಕಿಂಪುರುಷರು ಗಾರಭ ವೇಷಧಾರಣ ಮಾಡಿ ನಾಗಾಲೋಟದಲ್ಲಿ ಕುದುರೆಡವು ಪಟ್ಟಣದ ಕಡೆ ಮುಖ ಮಾಡಿರುವಾಗ್ಗೆ.... ಬರುವ ಭಕುತಾದಿ ಮಂದಿ ಕಣ್ಣುಗಳಿಗಿಂಪು ಮಾಡಲಕೆಂದು ಲಕುಸ ಸಂಖ್ಯೆಯಲ್ಲಿ ಬಣಬಣ್ಣದ ಚಿಟ್ಟೆ ಪತಂಗಗಳು ಗಾದರಿಮಲೆ ಪ್ರದೇಶದ ಕಡೇಲಿಂದಲೂ... ಬರುವ ಭಕುತಾದಿ ಮಂದಿ ಮಲಗಿರುವಾಗ ಅವರ ಸರೀರಗಳ ಆಯಕಟ್ಟಾದ ಜಾಗಗಳನ್ನು ಚುಟುಚುಟನೆ ಕಡಿದು ಲವುಕಿಕದ ಪರಿಚಯ