ಪುಟ:ಅರಮನೆ.pdf/೪೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೬೩ ನಾಯಕ, ಗುಡದಪ್ಪ ನಾಯಕರು..... ಬರಡುಗಳ ಕೆಚ್ಚಲು ತುಂಬಿ ಹಾಲ ಹಯನ ತುಳುಕಾಡಿಸುತ್ತಿರುವಳಂತೆ... ಹರೇವಿಗೆ ಬರುವಂತೆ, ಹೆರೇವಿಗೆ ಬಂದೋರು ರುತುಮತಿಯಾಗುವಂತ, ರುತುಮತಿ ಆದೋರು ಅನುವಾದ ಗಂಡನನ್ನು ಪಡೆಯುವಂತೆ.. ಗಂಡನನ್ನು ಪಡಕೊಂಡವರು ಬಸಿರಾಗುವಂತೆ.. ಬಸಿರಾದವರು ಸುಸೂತ್ರವಾಗಿ ಹೆರಿಗೆಯಾಗುವಂತೆ ಮಾಡುವಳಂತೆ, ಅದಕನ ಯಿಲ್ಲಿ ರೋಗ ರುಜಿಣಗಳಿಂದ ನರಳಾಡುವವರಿಲ್ಲ... ಕಳ್ಳಕಾಕರ ಭಯವಿಲ್ಲ.. ಅದಕ ನೋಡಿರಿ ಗುಡೇಕೋಟೆ, ಜರುಮಲಿ, ಹರಪನಹಳ್ಳಿ ನುಂಕೇಮಲೆ, ಗಾದರಿಮಲೆಯೇ ಮೊದಲಾದ ಅಕ್ಕಪಕ್ಕದ ರಾಜ್ಯಗಳು ನಮ್ಮ ಕುದುರೆಡವ ಕಡೇಕ ನೋಡುವಂತಾಗಯ್ತಿ.. ಪುಪ್ಪುಲ ಸಾಮುರಾಜ್ಯದ ಸಾಮಂತರು, ಧೀಮಂತರು ಕುಂಪಣಿ ಸರಕಾರಕ್ಕೆ ಧಿಕ್ಕಾರ ಕೂಗುತ್ತಿರುವುದು ಅಗೋಯಿಲ್ಲಿ.. ಕಪ್ಪಕಾಣಿಕೆ ತಪ್ಪುದಂಡ ತಂದೊಪ್ಪಿಸುತ್ತಿರುವರು ಯಿಗೋ ಯಿಲ್ಲಿ. ಕೂಡ್ಲಿಗಿ ವಳಗಿದ್ದ ನಿಷಾವಂತ ಅಧಿಕಾರಿಯಾದ ಯಡ್ಡವರು ರೆಪ್ಪೆಗೆರೆಪ್ಪ ಅಂಟಿಸದಂತಾದ.... ಗುಪ್ತಾಚಾರರು ಸರಬರಾಜು ಮಾಡುತ್ತಿದ್ದ ಮಂದೊಂದೆ ವರಮಾನವನ್ನು ಕೇಳಿ ನಿಂತಲ್ಲಿ ನಿಲ್ಲದಂತಾದ.. ಕುಂತಲ್ಲಿ ಕೂಡದಂತಾದ. ತಾನು ರಚಿಸಿರುವ ಕಲಾಕ್ರುತಿಯು ಪ್ರಯಾಣದ ಮಧ್ಯದಲ್ಲಿ ಕಣ್ಣು ಪಿಳುಕಿಸುತ್ತಿದೆಯೆಂದೂ, ರಾಜಮಾತೆಯ ಬಸುರು ಹೊತ್ತಿರುವ ಜಗಲೂರೆವ್ವ ನಾಮಿಕೆಲ್ಲರೂ ಮಲಗಿಕೊಂಡಿರುವಾಗ ಜಹಜಿನಲ್ಲಿ ತಾನೋವ್ವಳಂ ಅಡ್ಡಾಡುತ್ತಿರುವಂತೆ ಭಾಸವಾಗುತ್ತಿದೆಯಂತೆಯಂದೂ ಬಲು ಹೆಮ್ಮೆಯಿಂದ ಹೇಳಲಕೆಂದು ಬರುವ ಹೆಂಡತಿ ಜೆನ್ನಿಫರಮ್ಮನ ಹತ್ತಿರಕ್ಕೆ ಬಿಟ್ಟುಕೊಳ್ಳದಂತಾದನು.. ಡಾಡೀ.. ಡಾಡೀ.. ಯಂದು ಕಾಡಿ ಪೀಡಿಸುತ್ತಿದ್ದ ಕಿಸ್ಕೋಪರೂ, ಯಿಲ್ಲಿಯಮ್ಮ ಯಂಬೆರಡು ಮುದ್ದು ಮಕ್ಕಳೀಶ್ವರನ್ನೂ ಸಹ.. ಆತನ ತಲೆಯೊಳಗಿದ್ದದ್ದು ಕುದುರೆಡವು ಸಮಾಚಾರ ಮಾತ್ರ. ಅದು ಯಷ್ಟು ದುಶ್ಚಲವಾಗಿರುತ್ತದೋ ಅಷ್ಟು ಬ್ರಿಟೀಷ್ ಪಾರುಪತ್ಯಕ್ಕೆ ಅನುಕೂಲ, ಆದರೆ ಅಲ್ಲಿ ಚಿನ್ನದ ಹೊಗೆ ಹಾಯುತ್ತಿರುವುದಂತೆ.. ಕಡ್ಡಿ ಪುಳ್ಳೆಯಂಗಿದ್ದ ಪ್ರಜೆಗಳು ಪಯಿಲುವಾನರಂತಾಗಿರುವಂತೆ.. ತಮ ತಮ್ಮ ತಲೆ ವಳಗಿಂದ ಬ್ರಿಟೀಶ್ ರಾಣಿ ರಾಜರ ಹೆಸರು ಕಿತ್ತುಹಾಕಿ ಸಾಂಬವಿ ಯಂಬುವ ನಾಮವನ್ನು ತುಂಬಿಕೊಂಡಿರುವಂತೆ.. ತನ್ನ ಸೂರ ಸೇನಾಪತಿಯಾದ ಅಲಬದ್ದೇ ಸಾಂಬವಿಯ ಅನುಯಾಯಿ ಆಗಿರುವನೆಂದ ಮ್ಯಾಲ ಮಾಮೂಲು