ಪುಟ:ಅರಮನೆ.pdf/೪೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೬೭ ಅರಮನೆಯೊಳಗೆ ಮಿಶ್ರಮಿಸಿಕೊಳ್ಳುವಂತಿರಬೇಕು. ಅದಕ್ಕೆ ಅನುವಾಗುವಂತೆ ಸೊಂಪಾಗಿ ಮರಗಿಡಗಳು ಯಲ್ಲಾ ಕಡೇಕು ಬೆಳೆದಿರಬೇಕು.. ಲವುಕಿಕ ಸಂಬಂಧೀ ಆಕ್ರಂದನಗಳು, ಅರಣ್ಯರೋಧನಗಳ ತವರು ನೆಲೆ ಆಗದಿರಲಕಬೇಕು. ಮಟ್ಟಿನಲ್ಲಿ ಸದರೀ ಅರಮನೆಯು ಚಿದಾನಂದಾವಧೂತಯಿರಚಿತ ಯೇದಾಂತ ಗ್ರಾನ ಸಿಂಧೂವಿನ ಪಡಿಯಚ್ಚಿನಂತಿರಬೇಕೆಂದು ಕಾಮಗಾರಿಯ ವುಸ್ತುವಾರಿ ವಹಿಸಿದ್ದವರು ಯಾರಾರೆಂದರೆ ಜಡೆತಾತ, ಕಾಡುಗೊಲ್ಲರೀರಯ್ಯರೇ ಮೊದಲಾದ ಪೂರುವಿಕರು. ಅರಮನೆಗಿಂತ ದುಪ್ಪಟ್ಟು ತೂಗುವ ಮೋಬಯ್ಯನ, ಗಾಳಿಯೊಳಗ ಸುಮ ಸುಮಕ ಕಯ್ಯಗಳನ ಯತ್ತಿ ಆಡಿಸುವ ಮೋಬಯ್ಯನ, ಸೂನ್ಯದೊಳಗೊಂದು ಪಿಸು ಮಾತಿನ ಮೊಗಸಾಲೆ ಮಾಡಿಕೊಂಡು ಸುಮ್ ಸುಮಕ ಮಾತುಗಳನ್ನಾಡುವ ಮೋಬಯ್ಯನ, ಹಾದಿಯಿಲ್ಲದ ಕಡೇಕ ಹಾದಿ ಮಾಡಿಕೊಂಡು ಸುಮ್ ಸುಮಕ ನಡೆದಾಡುವ ಮೋಬಯ್ಯನ, ಸುಷುಪ್ತಿ, ಜಾಗರಣಗಳ ನಡುವಿನ ತಾರತಮ್ಯ ಅಳಿಸುವ ಮೋಬಯ್ಯನ ನುಡಿದರೆ ನಿಶ್ಯಬ್ದ, ನಡೆದರೆ ನಿರುಗಮನ ದಂತಿರುವ ಮೊಬಯ್ಯನ ವುಸ್ತುವಾರಿಯನ್ನು ವಹಿಸಿದ್ದವರಾರಾರೆಂದರೆ ಗೊಂಜಾಡರಲಡುವೆ, ಕವಳೆ, ಕವಣೆಜ್ಜರೇ ಮೊದಲಾದ ಪೂರುವಿಕರು.. ಯಿಂಥಪ್ಪ ಯರಡು ನಮೂನಿ ಪೂರುವಿಕರು ಕೂದಲನ ಸೀಳಬಲ್ಲಂಥವರು ಸಿವನೇ, ಬೆಣ್ಣೆಯೊಳಗೆ ಮುಳ್ಳು ಮುರಿಯುವಂಥವರು ಸಿವನೇ.. ಮಾತಿನ ಹಂಗಿಲ್ಲದೆ ಕಥೆ ಕಟ್ಟ ಬಲ್ಲಂಥವರು.. ತುಟಿ ಮೋಳು ಮಾಡದೇನೇ ಪದಗಳನ ಹೆಣೆಯಬಲ್ಲಂಥವರು ಸಿವನೇ.. ಅವರು ಕಟ್ಟುತಲಿದ್ದ ಕಥೆಗಳು, ಹೆಣೆಯುತಲಿದ್ದ ಪದಗಳು ಅಣು ಅಣುವನ್ನು ಸಾರೋಟು ಮಾಡಿಕೊಂಡು ಸುತ್ತನ್ನಾಕಡೇಕ ಪಯಣ ಬೆಳೆಸುತಲಿದ್ದವು.. ಕಿವಿವುಳ್ಳವರ ಕಿವಿಯೊಳಗಿಳಿಯುತ್ತಿದ್ದವು.. ಯಿಳಿದೊಡನೆ ವಂದೊಂದು ಕಥೆ ನೂರರಂಖೆಯಲ್ಲಿ ರೂಪು ಪಡಕೊಳ್ಳುತಿದ್ದವು.. ಅಂಥ ಸುದ್ದಿಗಳ ಪಯ್ಲಿ ಅದಾವುದೆಂದರೆ.... ಸೆಕೆ ಸೆಕೆ ಕುಚ್ಚಿದಂಗಾಗಲು ಆದಿಸಗುತಿ ಸಾಂಬವಿ ಮೋಬಯ್ಯನ ಸರೀರದೊಳಗಿಂದ ಹೊರ ಹೊಂಟು ನಡಕೋತ ನಡೆಕೋತ ವುಪ್ಪರಿಗೆ ತಲುಪಿದಳಂತೆ.. ಅಲ್ಲೊಂದಿದ್ದ ಜಾಲಂದ್ರವು ವಂದು ಬೋ ದೊಡ್ಡ ಕಣ್ಣಿಗೆ ಸಮಾನ.. ಅಲ್ಲಿ ನಿಂತು ನೋಡಿದರೆ ಪಟ್ಟಣದ ಯಾವತ್ತೂ ಯಿದ್ಯಾಮಾನಗಳು ಗೋಚರ ಮಾಡುತ್ತವೆ...