ಪುಟ:ಅರಮನೆ.pdf/೫೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯೨ ಅರಮನೆ ಕಾರಣಯಿತ್ತು ಸಿವನೇ.. ಮಂದಿ ತಮ್ಮ ತಮ್ಮ ಬದುಕು ವದಕನಂಗಳ ಬಿಟ್ಟುಕೊಟ್ಟು ಅದೇ ಗತಿಯಾಗಿ ನಿಂತಿದ್ದರು ತಂದೆಯೇ.. ಕಣ್ಣುಳ್ಳವರ ಕಣ್ಣಳಗ, ಕಿವಿವುಳ್ಳವರ ಕಿವಿಯೊಳಗೆ ಬಯಲ ಸ್ಪುರದ್ರೂಪಿ ಅರಮನೆಯ ಯಿದ್ಯಾಮಾನಂಗಳು ಅಸಂಗತ.. ಅಮೂರ ರೂಪಗಳಾಗಿ ಕಾಡಾಟ ಕೊಡಲಕ ಹತ್ತಿದ್ದುದೇ ಅದಕೆ ಕಾರಣ ಯಿತ್ತು ಸಿವನೇ.. ಮಂದಿ ಮನಸು ಅಂಥ ಮಾಯಾವೀ ಅರಮನೆಗೆ ಹೋಗೋದು ಬರೋದು ಮಾಡುತಲಿದ್ದುದೇ ಅದಕೆ ಕಾರಣ ಯಿತ್ತು ನನ್ನಪ್ಪಾ.. ನಂಬುಗೆ ಅಪನಂಬುಗೆಗಳ ನಡುವೆ, ಲವುಕಿಕ ಅಲವುಕಿಕಗಳ ನಡುವೆ, ಆಸ್ತೀಕ ನಾಸ್ತಿಕ ಭಾವನೆಗಳ ನಡುವೆ ಹೊಯ್ದಾಡುತಲಿದ್ದ ಮಂದಿ ಮಲಗು ಅಂದರ ಹೆಂಗ ಮಲಕ್ಕೊಂಡಾರು? ಯೆಚ್ಚರಿರು ಅಂದರ ಹೆಂಗ ಯಚ್ಚಾರ ಯಿದ್ದಾರು? ಅರಮನೆ ಸಲುವಾಗಿ ಕಣ್ಣು ಕಳಕೋ ಬ್ಯಾಡೀರಿ.. ಅರಮನೆ ಸುದ್ದಿಗಳನ ಯಿನಾ ಕಾರಣ ಕೇಳೀ ಕೇಳೀ ಕಿವೀನ ಕಳಕೋ ಬ್ಯಾಡೀರಿ ಅಂದರ ಹಂಗ ಸುಮಕ ಯಿದ್ದಾರು? ಯೇನಪಾ ಯೇ ಅರಮನೆಯು ತಮ ಮ ತೊಗಲಿಗೆ ಅಂಟಂತ್ತಲ್ಲಾ.. ತಮ್ಮ ತಮ್ಮ ಸರೀರಗಳಾದ್ಯಂತ ಜುಮುಜುಮು ಅಂತನಲಕ ಹತ್ತಯ್ತಲ್ಲಾ.... - ಅಗಸೆ ಬಾಕಲ ಕಡೇಲಿಂದ ಗಾಳಿಯೊಳಗಿಂದೊಡಮೂಡಿದ ಗಾಳಿಯೊಂದು ಪಟ್ಟಣವನ್ನು ಪ್ರವೇಸ ಮಾಡಿದೊಡನೆ.. ಬೀದಿ ಬೀದಿಗುಂಟ ಸುಳಿದಾಡಿದೊಡನೆ ಸಚರಾಚರಗಳ ಮಯ್ಯನ ದಡವಿ, ಅರಮನೆಯೊಳಗ ಹೋಗಿ ಅಲ್ಲಿದ್ದ ಪಟ್ಟಣ ಸೋಮಿಗಳನ, ಅದೇ ಯಿನ್ನು ಯಚ್ಚರಾಗಿದ್ದ ಮೋಬಯ್ಯ.. ಅಲ್ಲಲ್ಲಾ.. ಸಾಂಬಯ್ಯನ ಮಡದಿದೊಡನೆ.. ಯಲ್ಲಾರು ಮಂಚ ಪುಲಕಿತರಾದರು.. ಯೇನೋ ಮುಟು ಮುಟ್ಟಿದಂಗಾಯ್ತಲ್ಲಾ ಯಂದು ತಮ ತಮ್ಮ ಮಯ್ಸಳನ ಸವರಾಡಿಕೊಂಡರು. ತಮ್ಮ ತಮ್ಮ ಅಂತರಂಗಗಳೊಳಗೂ ಅಷ್ಟೇಯಾ? ತಮ್ಮ ತಮ್ಮ ಮನಸುಗಳೊಳಗ ಯೇನೋ ಎಂದು ನಮೂನಿ ಆಗಲಕ ಹತ್ತಯ್ಕೆ ಯಂದವರಿವರ ಬಳಿ ತೋಡಿಕೊಳ್ಳಬೇಕೆಂಬ ಆಸೆಯಾಯಿತು ಯಲ್ಲರಿಗೂ.. ಆದರ ನಾಲಗೆ ಲಗೂನ ಹೊಳ್ಳುವಲ್ಲದಲ್ಲಾ.. ವಂದೊಂದು ಮನಸೊಳಗ ಅಸಂಖ್ಯಾತ ಮಸಿ ಕುಡಿಕೆಗಳು, ಲೆಕ್ಕವಿಲ್ಲದಷ್ಟು ಲೆಕ್ಕಣಿಕೆಗಳು, ಸಾವುರಾರು ಕಂಠ ಪತ್ರಗಳು, ವುಸುರಾಟಕ್ಕೆ ಮುಗುಚಿಕೊಳ್ಳುತ್ತಿರುವ ಕಾಗದಗಳು.. ಕೋಟ್ಯಾನು ಕೋಟಿ ಅಕ್ಕರಕ್ಕರಗಳು.. ಯೇಕ ವಚನದ ಕಡೆ ಬವುವಚನಗಳು, ಆಡುಮಾತುವಿರುವ ಕಡೆ ಗ್ರಾಂಥಿಕ ಮಾತುಗಳು.. ಅವುಗಳ ಖನ ಗುರುತು