ಪುಟ:ಅರಮನೆ.pdf/೫೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೯೩ ಆ ಮಂದಿಗೆ ಅಷ್ಟು ಲಗೂನವಾಗಲಿಲ್ಲ.. ಮೋದಬೇಕೆಂದೆನ್ನಿಸ್ತದ ಅಂತ ಹೆಂಗ ಹೇಳುವುದು? ಬರೆಯಬೇಕೆಂದೆನ್ನಿಸ್ತದ ಅಂತ ಹೆಂಗ ಹೇಳುವುದು? ತಮ್ಮ ವಳಗಣ್ಣುಗಳಿಗೆ ಗೋಚರ ಮಾಡುತ್ತಿರುವವು ಗ್ರಂಥಗಳಂತ ಹೆಂಗ ಹೇಳುವುದು? ಮಂದಿ ತಮ್ಮಟಕ ತಾವ ಹಿಂಗ ಯಿಲ್ಲಿ ವದ್ದಾಡುತಲಿರಲು.... ಅತ್ತ ಅರಮನೆಯೊಳಗ ಅಲ್ಲಿನ ಮಂದಿ ವಂದು ನಮೂನಿ ತ್ರಾಸು ತಗೊಂಡಿತ್ತು ಸಿವನೇ.. ಸಾಂಬಯ್ಯ 'ಯಜ್ಞಾ ನನ ಯಡಗಣ್ಣು, ಯಡದೊಡೆ ಹಾರಲಕ ಹತ್ತಯ್ತಿ.. ಯಜ್ಞಾ ಭ್ರಮಾಸ್ತರ ರೂಪ ಧರಿಸಿರುವ ಲೆಕ್ಕಣಿಕೆ ನನ್ನನ್ನು ಕೆಕ್ಕರಿಸಿ ನೋಡುತ್ತಿರುವಾಂಗಾಗತಯ್ಕೆ. ಮಾಯಾವಿ ಅಕ್ಕಸರಗಳು ಬಂದು ನನಗ ಚಕ್ಕಟಿ ಗುಳ್ಳಿ ಯಿಡಲಕ ಹತ್ಯಾವೆ' ಎಂದು ಮುಂತಾಗಿ ಹೇಳಬೇಕೆಂದುಕೊಳ್ಳುತ್ತಾನೆ.. ಆದರದು ಆಗುವಲ್ಲದು. ಜಡೆ ತಾತನಾದರೂ ಅಷ್ಟೇಯಾ, ಕಾಡುಗೊಲ್ಲರೀರಯ್ಯನಾದರೂ ಅಷ್ಟೇಲಿಯಾ, ಅಲ್ಲಿದ್ದವರು ಯಾರಾದರೂ ಅಷ್ಟೇಯಾ.. ಯಾಕ ತಮಗಿಂಥ ಅನುಭವ ಆಗುತ್ತಿರುವುದು ಯಂದವರಿವರು ಅಂದುಕೊಳ್ಳುತ್ತಿರುವಷ್ಟರಲ್ಲಿ.. ಕುದುರೆಡವು ಪಟ್ಟಣದ ಅಗಸೆ ಬಾಗಿಲನ್ನು ದಾಟಿದ ತೇಜಸ್ವೀ ಪುರುಷ ಪುಂಗವ ಯಾರೆಂದರೆ ಅಯ್ಯಾಳೀ.... ...ಯೀತನ ನಿಜನಾಮದೇಯವು ಅಯ್ಯಾಳೇಶ್ವರ ಯಂದಿರುವುದಾಗಲೀ.. ಯೀತನ ಸ್ವಾಸ್ಥಿಯು ರಾಂಪುರ ಪರಗಣದಲ್ಲಿರೋ ಕಣಕುಪ್ಪೆಯಂಬುದಾಗಲೀ.. ಯೀತನು ಯೇದ ಪಾರಾಂಗತ ದಂಪತಿಗಳಾದ ಗುರುವಯ್ಯ, ಯಂಕಮ್ಮ ಯಂಬುವವರ ಮೇಕಮಾತ್ರಸುಪುತ್ರನೆಂಬುದಾಗಲೀ... ಯೀತ ತನ್ನ ಚಿಕ್ಕ ವಯಸ್ಸಿಗೆ ಬಳ್ಳಾರೇಶ್ವರ ಮಾತ್ಮ ಬಲಕುಂದಿ ಮಾಂಕಾಳೇಶ್ವರ ಮಾತ್ರೆ ಕುರುಗೋಡು ದೊಡ್ಡ ಬಸವೇಶ್ವರ ಮಾಂಯಂಬ ಭಾಮಿನಿ, ವಾರಕ ಷಟುಪದಿ ಮಾಕಾವ್ಯಗಳನ್ನು ರಚಿಸಿ ದೊಡ್ಡ ದೊಡ್ಡ ರಾಜ ಮಾರಾಜರುಗಳಿಂದ ಯೇಕಾನೇಕ ಪಾರಿತೋಷಕಗಳನ್ನು ಪಡಕೊಂಡಿರುವನೆಂದಾಗಲೀ ಸದರಿ ಪಟ್ಟಣದ ಮಂದಿಗಷೆ« ಯಾಕ ಕುಂತಳದ ಬಹುಪಾಲು ಸೀಮೆಗೆ ಗೊತ್ತೇ ಯಿಲ್ಲ.. ಯೀತ ಸುಮಸುಮಕ ಯಾವುದೇ ಕಾವ್ಯ ಬರೆಯುವವನಲ್ಲ. ಅದಕ ಯಾದಾದರೊಂದು ಪ್ರೇರಣ ದೊರಕಬೇಕು. ತಾನು ಯಿಂಥಾದ್ದೊಂದು ಕಾವ್ಯ ಬರೆಯುವೆನೆಂದು.. ಅದಕೆ ತನಗಯಿರಲಕೊಂದು ಸುಸಜ್ಜಿತ ಮನೆ, ಬಾಯಾಡಿಸಲಕ ವುತ್ತು, ಕರೂರ, ಬಾದಾಮಿ, ಗೋಡಂಬಿ, ಕುಡಿಯಲಕ ಯಳನೀರು, ತಿಳಿಮಜ್ಜಿಗೆ, ನೊರೆವಾಲು ಬೇಕೆಂದು ಆಯಾ ರಾಜರನ್ನೆಂದೂ