ಪುಟ:ಅರಮನೆ.pdf/೫೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦೮ ಅರಮನೆ ರುತ್ತ ರಚನೆ ಮಾಡೋ ನಿಮಿತ್ತ ತುಪ್ಪದೀವಿಗೆ ಹಚಕೊಂಡು ಲಘುಯಿಂದ ಗುರುವನ್ನೂ, ಗುರುಯಿಂದ ಲಘುವನ್ನೂ ಯಿಭಜನೆ ಮಾಡುತಾಳ ಮಡುತಾ ಕೂಕಂಡಿದ್ದಾತ ಶಾರ್ಜ್ಯದೇವ ಯಿರಚಿತ ಸಂಗೀತ ರತುನಾಕರವನ್ನೂ, ಮತಂಗ ಮುನಿ ಯಿರಚಿತ ಬ್ರುಹದ್ದೇಸಿಯನ್ನೂ, ನಾಗುವರುಮ ಯಿರಚಿತ ಛಂದೋನ್ನುದಿಯನ್ನೂ, ದಂಡಿಯಿರಚಿತ ಕಾವ್ಯಾದರುಶವನ್ನೂ ಬಾಯಿಪಾಠ ಮಾಡಿದ್ದಂಥ ಮಾ ಕವಿ ಅಯ್ಯಾಳೇಶ್ವರನು, ಯೇಕಾನೇಕ ಲಾಕ್ಷಣಿಕ ಗ್ರಂಥಗಳನ್ನು ಅರೆದು ಕುಡಿದು ಅರಗಿಸಿಕೊಂಡಿರುವಂಥಾತನು. ತನ್ನ ಹಿಂದಿನ ಯಾವೊಬ್ಬ ಮಾಕವಿಯು ಕ್ಷವುರಿಕದಂಥ ಕುಲಕಸುಬನ್ನು ತಮ್ಮ ಕಾವ್ಯಗಳೊಳಗೆ ಪ್ರಸ್ತಾಪಿಸಿಲ್ಲ ವಲ್ಲಾಯಂದು ಮರುಗಲಕ ಹತ್ತಿದ್ದನು. ಯೀ ಕುರುತು ವಂದಾದರೂ ಕಂದಪದ್ಯವುಂಟೇನೆಂದು ತನ್ನ ನೆನಪಿನ ಕೋಶವನ್ನೆಲ್ಲ ತೆಗೆದು ಬೆದಕಿ ನಿರಾಶನಾದನು. ತಾನು ತನ್ನ ಶ್ರೀದೇವಿ ಮಾಳ್ಮೆ ಕಾವ್ಯದೊಳಗೆ ನಾದಿರ ಗೋಯಿಂದನನ್ನು ವರಿಸಿ ಯಿತಿಹಾಸದ ಭಾಜನಕ ವಳಗಾಗಬೇಕೆಂದು ತಹತಹಿಸಿದನು. ಯಕಃಶ್ಚಿತ್ ಕಂದಪದ್ಯದಲ್ಲಿ ವಗ್ಗಿಸಿ ಕುಲಕಸುಬಗಳಿಗೆ ಅಪಚಾರ ಮಾಡಬಾರದೆಂದೂ, ವರಿಸಿದರ ಖ್ಯಾತ ಕರ್ಣಾಟಕಗಳಲ್ಲೇ ವರಿಸಬೇಕೆಂದೂ ನಿಲ್ದಾರ ಕಯ್ಯೋಂಡನು. ತಾಯೇ ಆಸೀರುವಾದ ಮಾಡು ಯಂದು ಸರಸತಿಗೆ ನಮಸ್ಕಾರ ಮಾಡಿದನು. ತಾನು ಕಂಡುಂಡ ಯೀ ಕರುಣಾಜನಕ ದ್ರುಸ್ಯವನ್ನು ನಜಭಜಜಂಜರದ ಚಂಪಕಮಾಲಾರುತ್ತದಲ್ಲಿ ಅಳವಡಿಸುವುದೋ, ಸತತಂ ನಂಸಂರರಂಗಂದ ಮಹಾಸ ಗೌರಾರುತ್ತದಲ್ಲಿ ಚಿತ್ರಿಸುವುದೊ, ಭರಂನಭಬಂರಲಂಗದ ವುತ್ಸಲ ಮಾಲಾರುತ್ತದಲ್ಲಿ ಸಾಕ್ಷಾತ್ಕರಿಸುವುದೋ ಯಂದು ಮುಂತಾಗಿ ಯೋಚಿಸಿ ಯೋಚಿಸಿ ತನ್ನ ಮೆಚ್ಚಿನ ಕವಿಯಾದ ಪಂಪನಿಗೆ ಪ್ರಿಯವಾದ ಮಹಾಸ್ರಗ್ಧರಾ ರುತ್ತದಲ್ಲೇ ರಚಿಸಬೇಕೆಂದು ದ್ರುಢ ನಿಲ್ದಾರ ಮಾಡಿದನು. ವಂದು ಚಣ ಕಣ್ಣು ಮುಚ್ಚಿ ನಾದಿರ ಗೋಯಿಂದನನ್ನೂ, ಸರಸತಿ ದೇವಿಯನ್ನೂ ಯೇಕ ಕಾಲಕ್ಕೆ ಆವಹಿಸಿಕೊಳ್ಳುತ್ತಿರುವಾಗ್ಗೆ.... ಯಿತ್ತ ಅದೇ ಕುದುರೆಡವಿನ ಅರಮನೆಯೊಳಗೆ ಸಾಂಬಯ್ಯನು ಕುಂತಲ್ಲಿ ಕುಂಡ್ರುತಿರಲಿಲ್ಲ, ನಿಂತಲ್ಲಿ ನಿಂದುರುತ್ತಿರಲಿಲ್ಲ. ಹಿಡಿ ಹಿಡಿ ಅನ್ನುವಷ್ಟರಲ್ಲಿ ದುಡುದುಡನೆ ಮೋಡಿಬಿಡುತ್ತಿದ್ದನು ಹೊರಗೆ, ಅರಮನೆಯೇ ರಸ್ವಗೊಂಡು ಕಂದನ ರೂಪದಲ್ಲಿ ಬೀದಿಗುಂಟ ಅಡ್ಡಾಡುತ್ತಿರುವಂತೆ ನೋಡೋರಿಗೆ ಭ್ರಮಾ ಹುಟ್ಟಿಸುತ್ತಿದ್ದನು. ಅಗೋ ಅಲ್ಲಿ ಅಂದರೆ ಯಿಲ್ಲಿರುತ್ತಿದ್ದನು.. ಯಗೋ ಯಲ್ಲಿ