ಪುಟ:ಅರಮನೆ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮ ಅರಮನೆ ಬಲಕ ಪಿಕದಾನಿ ಹಿಡಕೊಂಡು ನಿಂತಿದ್ದನಲ್ಲಾ.. ಅವನೇ ಕಣರಪ್ಪಾ ಮೋಬಯ್ಯಾ ಅಂದರ... ಮೋಬಯಾ ಅಂದರ ಅವನೇ ಕಣರಪ್ಪಾ.. ಆತ ಬಲು ನಯ ನಾಜೂಕಿನವನಾಗಿದ್ದನಪ್ಪಾ.. ಸಣ್ಣವರನು ದೊಡ್ಡವರನಕಂತ, ದೊಡ್ಡವರನು ಯಿನ್ನೂ ದೊಡ್ಡವರನಕಂತ, ಭಯ ಅಂಬುದನು ಬಲಗಯ್ಯ, ಭೀತಿ ಅಂಬುದನು ಯಡಗಯ್ಯ ಯಿಟುಕೊಂಡು ನೆಲದ ಮ್ಯಾಲ ಯಿರುವೆ ಯಣಸೂತ ತಗ್ಗಿಸಿದ ತಲೇನ ಮ್ಯಾಲಕೆತ್ತದಂಗ ಯಿದ್ದನಲ್ಲಾ, ಅವನೇ ಕನರಪ್ಪಾ ಮೋಬಯ್ಯಾ ಅಂದರ.. ತನ ಯದ್ಯಾಗ ಕ್ವಾಟಾನ ಯೆಟುಕೊಂಡಿದ್ದನಲ್ಲಾ... ಬೆಣ್ಣೆವುಂಡೆ ನಾಚೋ ಹಂಗ ಮೆತ್ತಾನ ಮೆತ್ತಗಯಿರುತ್ತಿದ್ದನಲ್ಲಾ.. ದಯಾ ಅಂಬುದನು ಯಡಕಳ್ಕೊಳಗೂ, ದಾಕ್ಷಿಣ್ಯ ಅಂಬುದನು ಬಲಗಸ್ಕೊಳಗೂ ಯಿಟುಕೊಂಡು ದಯನೇಸಿಯಾಗಿ ನೋಡುತ್ತಿದ್ದನಲ್ಲಾ... ಕರದೋರ ಕಾಳಗ ಕೆರಾss ಆಯ್ತಿದ್ದನಲ್ಲಾ.. ಬಾ ಯಂದೊರ ಮನೆಂರು ಬಾಕಲಿಗೆ ತಾನಾಯ್ತಿದ್ದನಲ್ಲಾ... ಕುರುಕುರೂಂತ ಸಂಗನೆ ಮಾಡೋರ ಕುಂಡಿ ಬುಡಕ ಚಾಪೆ ಆಯ್ತಿದ್ದನಲ್ಲಾ.. ಕಿವಿವುಳ್ಳೋರಿಗೆ ಬಾಯಿ ಆಯ್ತಿದ್ದನಲ್ಲಾ... ಮಾಡೋರಿಗೆ ಕಮ್ಮಿ ಆಯ್ತಿದ್ದನಲ್ಲಾ.. ನಡೆಯೋರಿಗೆ ಕಾಲಾಯ್ತಿದ್ದನಲ್ಲ.. ಅವನೇ ಕನರಪ್ಪಾ ಮೋಬಯ್ಯಾ ಅಂದರ.. ಪುಣ್ಯಾತುಮ ಅಂದರ ಅವನೆ ಕನಪ್ಪಾ.. ಭೂಮ್ರಾಯಿಗೆ ಯಲ್ಲಿ ನೋವಾಗತಯೋ ಅನ್ನೋ ಹಂಗ ನಡದಾಡ್ತ ಇದ್ದನಲ್ಲಾ.. ವಂದಾಡಿದರ ಕಡಿಮೆ, ಯಲ್ಲಾಡಿದರೆ ಹೆಚ್ಚು ಯಂಬಂತೆ ಮಾತಾಡುತ್ತಿದ್ದನಲ್ಲಾ.. ಅವನೇ ಕನಪ್ಪಾ ಮೋಬಯ್ಯಾ.. ಹಿಂಗಾss ವಬ್ಬರು ಯಿನ್ನೊಬ್ಬರ ಯದೆಯೊಳಗೆ ಅವನ ಮಿಗ್ರಹ ಕೆತ್ತಿ ನಿಲ್ಲಿಸೋ ಪ್ರಯತ್ನ ಮಾಡುತ್ತಿದ್ದುದು ಯಲ್ಲಂದರಲ್ಲಿ ಸಿವ ಸಂಕರ ಮಾದೇವಾss.. ಸಾಂಬವಿ ಹಿಂಗವಳಾss ಹಂಗವಳಾ ಯಂಬ ಮೂರು ಪ್ರಶ್ನೆಗಳನ್ನು ತನ್ನೋಟಕೆ ತಾವು ಹಾಕಿಕೊಳ್ಳುತ್ತ, ಯದುರಾದವರನ್ನು ಯಿಚಾರಿಸುತ.. ಹಿಂಗಿರಬೌದಾ ಯಂದು ತಮಗೆ ತಾವು ವುತ್ತರ ಪಡಕೊಳ್ಳುತ, ತಮಗೆ ತಾವು ಸಮಾಧಾನ ಪಟುಕೊಳುತಾ ಗಳಿಗಳಿಗೆಗೊಂದೊಂದು ವುಸುರು ಬಿತ್ತುತ್ತಾ ಮಂದಿ ತಮ್ಮೊಳಗೆ ತಾವು ಕಲ್ಲಾವುಲ್ಲಿಯಾದರು ಸಿವಸಂಕರ ಮಾದೇವಾss.. ಸಾಗರ ಸಮುದ್ರವನ್ನು ಸೇರಿದಂತೆ, ಸಮುದ್ರನದಿಯನ್ನು ಸೇರಿದಂತೆ, ನದಿ ಹೊಳೆಯನ್ನು ಸೇರಿದಂತೆ, ಹೊಳೆ ಹಳ್ಳವನ್ನು ಸೇರಿದಂತೆ, ಹಳ್ಳ ಹನಿಯೊಳಗೆ ಆಶ್ರಯ ಪಡೆದಂತೆ ಅಗಾಧ ವಂತಿಕೆಯಾದ ಆ ತಾಯಿ ಅವನ ಥಟಗು ಸರೀರದೊಳಗೆ ಆಸಯ ಪಡೆದಿರಬೌದಾ ಯಂದು ಮಂದಿ ತಮಗೆ