ಪುಟ:ಅರಮನೆ.pdf/೫೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬ ೨ ಅರಮನೆ ಬಂದಳು, ತನ್ನ ಮಯ್ಯ ಮ್ಯಾಲಿದ್ದ ವಡವೆಯನ್ನು ಮುದೇದಕ್ಕೆ ಕೊಡುತ ತನ್ನ ಗಂಡನ ಹೆಸರಲ್ಲಿ ಮೂರಂಕಣದ ವಂದು ಊರಗಲ್ಲನ್ನು ಸ್ಥಾಪನೆ ಮಾಡಬೇಕೆಂದು ಹೇಳಿದಳು. ಅದನ್ನು ಸ್ಥಾಪಿಸದಾದ ಮ್ಯಾಲ ತನ್ನ ಕರುಳಿನ ಕುಡಿಯನ್ನು ಮುದೇದರ ಕಯಿಗಿಡುತ “ಯವ್ವಾ.. ಯಿದಕ ನೀನು ಸಸ್ತರಭ್ಯಾಸ ಮಾಡಿಸಬೇಕು, ದೊಡ್ಗನಾದ ಮ್ಯಾಲ ಕಾಳಗಕ ಕಳುವಬೇಕು. ಮುಂದಿವನು ಸಾಯೋದಿದ್ದರ ರಣರಂಗದಲ್ಲೇ ಸಾಯಬೇಕು” ಯಂದು ತನ್ನ ಅಂತಿಮ ಆಸೇನ ಯಕ್ತಪಡಿಸುತ ಕಣ್ಣು ಮುಚ್ಚಿದಳು. ಮುದೇದು ತನ್ನ ಮರಿಮಮ್ಮಗನಿಗೆ ಕಾಳಗಯ್ಯ ಯಂದು ನಾಮಕರಣ ಮಾಡಿತು. ನಡುಲಿಂಟಿ ನಗರಾಯ್ಯ ಯಂಬ ಸಸ್ತರಾಸ್ತರ ಕೋಯಿದನಿಂದ ಸಸ್ತರಾಭ್ಯಾಸ ಮಾಡಿಸಿತು. ಕತ್ತಿವರಸೆ, ಬಿಲ್ಲುಯಿದ್ಯೆ ಮಲ್ಲಯಿ. ದ್ರುಸ್ಟಿಯುದ್ದ, ಸಬುದಯೇದಿ ಯಿದ್ಯೆಯೇ ಮೊದಲಾದ ಯಿದ್ಯೆಗಳಲ್ಲಿ ಪಾರಂಗನಾಗುತ ದೊಡ್ಡವನಾದ ಕಾಳಗಯ್ಯನಿಗೆ ಒಳ್ಳೆ ಕೊಡತೀವಂತ ಹೆಣ್ಣು ಹಡಕೊಂಡೋರು ಬಂದು ಮನಿ ಮುಂದ ಸಾಲುಗಟ್ಟಿ ನಿಂತರು. ಯಾದಾರ ಪಿಳೇನ ಲಗ್ಗುನಾಗು.. ನಮೊಮುಸ ನಿನ ತಲೆಮಾರಿಗೆ ನಿಂತುಹೋಗೂದು ಬ್ಯಾಡ ಯಂದು ಗಿಣಿಗ ಹೇಳಿದಂಗ ಹೇಳಿತು. ಅದಕಿದ್ದು ತರುಣ ಕಾಳಗಯ್ಯನು.. “ಯವ್ವಾ. ಹುಟ್ಟುತ್ತಲೇ ರಣಬೀಳೋನ ಕಟ್ಟಿಸಿಕೊಂಡಿರೋ ನಂಗೆ ಮದುವಿ ಮುಂಜಿ ಬ್ಯಾಡ.. ನನ್ನ ಬದುಕಿನ ವಯವಾಟು ಯೇನಿದ್ದರೂ ರಣರಂಗದ ಕೂಡೆ ಯಿರತಯ್ಕೆ” ಯಂದು ಕಡ್ಡಿ ಮುರಿಧಂಗ ಹೇಳಿಬಿಟ್ಟನು. ಆಗ್ಗೆ ಯುದ್ದಗಳು ಯಲ್ಲಂದರಲ್ಲಿ ಬಲು ಜೋರಾಗಿ ನಡೆಯುತ್ತಿದ್ದವಷ್ಟೆ. ರಾಜರು ನಾಮುಂದು, ತಾಮುಂದು ಅಂತ ಹರೇದ ಹುಡುಗರನ್ನು ದಿನಗೂಲಿ ಅಥವಾ ವುಂಡಾಗುತ್ತಿಗೆ ಆಧಾರದ ಮ್ಯಾಲ ಪಯಣೋಟಿಗೆ ಬಿದ್ದು ತಮ್ಮ ತಮ್ಮ ಸಯ್ಯಕ್ಕೆ ಸೇರಿಸಿಕೊಳ್ಳುತ್ತಿದ್ದರಷ್ಟೆ.. ಹುಲಿಕೆರೆಯ ರಾಜ ನರಸಿಂಗನ ಮ್ಯಾಲ ಯುದ್ಧ ಮಾಡಬೇಕೆಂದು ಆಲೋಚನೆ ಮಾಡುತಲಿದ್ದ ಕುಮತೀರಾಜನಾದ ಮಲ್ಲಳ್ಕೊಡೆಯನು ತನ್ನ ಕಣ್ಣಿಗೆ ಬಿದ್ದ ಕಾಳಗಯ್ಯನನ್ನು ತರುಬಿ ನೀನ್ಯಾರು ಯತ್ತ ಯಂದು ಯಿಚಾರಿಸಿದನು. ಅದಕಿದ್ದು ಕಾಳಗಯ್ಯನು ತಾನು ಫಲಾನ ಯಿಂಥಾತನೆಂದು ಹೇಳಿದನು. ತನ್ನ ಸಯಕ್ಕೆ ಸೇರುಪಡೆ ಆಗ್ತಿಯಾ ಯಂದು ಕೇಳಿದ್ದಕ್ಕೆ ಯಾಕಾಗಬಾರದು ದೊರೆ ಯಂದು ವಪ್ಪಿಕೊಂಡುಬಿಟ್ಟನು. ದೊರೆಯಿಂದ ಮುಂಗಡ ಹಿಸಕೊಂಡು ಬಂದ ಕಾಳಗಯ್ಯನು ಜೀವನಾರಕ್ಕಾಗಿ ಮುದುಕಿಯ ಕಯ್ಕೆ ಕೊಡುತ ನೋಡೋದಿದ್ದರ ಬೀಗಲೇ ನೋಡಿ ಬಿಡು.